ಅಯ್ಯೋ.. ಇದೇನಿದು ಅವಸ್ಥೆ? – ರೋಡ್‌ಗೆ ಡಾಂಬರೀಕರಣ ಮಾಡ್ತಿದ್ದಂತೆ  ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ!

ಅಯ್ಯೋ.. ಇದೇನಿದು ಅವಸ್ಥೆ? – ರೋಡ್‌ಗೆ ಡಾಂಬರೀಕರಣ ಮಾಡ್ತಿದ್ದಂತೆ  ಡಾಂಬರನ್ನೇ ಕಿತ್ತು ಕೊಂಡ್ಯೊಯ್ದ ಜನ!

ಎಲ್ಲಿ ನೋಡಿದ್ರೂ ಗುಂಡಿ ಬಿದ್ದ ರಸ್ತೆಗಳು.. ಇದು ರಸ್ತೆಯೋ.. ಚಂದ್ರಗ್ರಹವೋ? ಒಂದ್ಸಲ ರೋಡ್‌ ರಿಪೇರಿ ಮಾಡಿ ಅಂತ ಪ್ರತಿಭಟನೆ ಮಾಡುವ ಜನರನ್ನ ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ, ರಸ್ತೆ ಡಾಂಬರೀಕರಣ ಮಾಡ್ತಿದ್ದಂತೆ ಜನ ಡಾಂಬರನ್ನೇ ಕಿತ್ತು ಬಕೆಟ್‌ಗೆ ತುಂಬಿಸಿಕೊಂಡು ಹೋಗಿದ್ದಾರೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗಿದೆ.

ಇದನ್ನೂ ಓದಿ: ಸಿಲಿಕಾನ್‌ ಸಿಟಿ ಬೆಂಗಳೂರು ಬಲು ದುಬಾರಿ! – 2BHK ಮನೆಯ ತಿಂಗಳ ಬಾಡಿಗೆ 70,000!

ನಮ್ಮಲ್ಲಿ ರಸ್ತೆ ಗುಂಡಿ ಬಿದ್ರೆ ಪ್ರತಿಭಟನೆ ಮಾಡುತ್ತಾರೆ. ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ರಸ್ತೆ ರಿಪೇರಿ ಮಾಡಿಸುವುದನ್ನ ಕೇಳಿದ್ದೇವೆ. ಆದ್ರೆ ‌ ವೈರಲ್‌ ಆದ ಈ ವಿಡಿಯೋ ನೋಡಿದ್ರೆ ನಿಜಕ್ಕೂ ಶಾಕ್‌ ಆಗುತ್ತೆ. ನಮ್ಮ ಜನ ಬುದ್ಧಿವಂತರೋ ದಡ್ಡರೋ ಎನ್ನುವ ಅನುಮಾನ ಬರುತ್ತೆ. ಯಾಕಂದ್ರೆ, ಇಲ್ಲಿ ಜನ ರಸ್ತೆಗೆ ಡಾಂಬರೀಕರಣ ಮಾಡ್ತಿದ್ದಂತೆ ಜನ, ಡಾಂಬರನ್ನ ಬಕೆಟ್‌ನಲ್ಲಿ ತುಂಬಿಸಿಕೊಂಡು ಹೋಗಿದ್ದಾರೆ.

ಹೌದು, ಊರಿಗೆ ಒಳ್ಳೆ ರಸ್ತೆಯಾದ್ರೆ ಸಹಜವಾಗಿ ಆ ಗ್ರಾಮಸ್ಥರಿಗೆ ಖುಷಿಯಾಗುತ್ತೆ. ಆದರೆ ಈ ಗ್ರಾಮದ ಜನರು ಡಾಂಬರೀಕರಣಗೊಂಡ ರಸ್ತೆಯ ಡಾಂಬರನ್ನೇ ಕಿತ್ತು ಬಕೆಟ್‌ಗೆ ತುಂಬಿಸಿಕೊಂಡು ಹೋಗಿದ್ದಾರೆ. ಈ ಘಟನೆಯೂ ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. ಈ ಘಟನೆಯೂ ಬಿಹಾರದಲ್ಲಿ ನಡೆದಿದೆ ಎನ್ನಲಾಗಿದೆ. @thatinadicmonk ಹೆಸರಿನ ಖಾತೆಯಲ್ಲಿ ವಿಡಿಯೋ ಶೇರ್ ಮಾಡಿಕೊಳ್ಳಲಾಗಿದ್ದು, ಹೊಸ ರಸ್ತೆ, ಶೋಚನೀಯ ಸ್ಥಿತಿ ನಿರ್ಮಾಣ. ಕೆಲವರು ತಮ್ಮ ಸ್ವಾರ್ಥಕ್ಕಾಗಿ ಹೀಗೆ ಕದ್ದಿದ್ದಾರೆ. ಮೀಸಲಾತಿಯನ್ನು ಮೂಲಭೂತವಾಗಿ ಅಗತ್ಯ ನೀತಿಯಾಗಿ ನಂಬುವ, ಪೀಳಿಗೆಯಿಂದ ಪೀಳಿಗೆಗೆ ಉಚಿತ ಸಾರಿಗೆಯನ್ನು ಪ್ರೋತ್ಸಾಹಿಸುವ ದೇಶವು ಯಾವಾಗಲೂ ಇಂತಹ ವ್ಯಕ್ತಿಗಳನ್ನು ಉತ್ಪಾದಿಸುತ್ತದೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿ ಹೋಗಿದ್ದು, ರಸ್ತೆಯೂ ಹೊಸದರಂತೆಯೇ ಕಾಣುತ್ತಿದೆ. ಆದರೆ ಗ್ರಾಮಸ್ಥರು ರಸ್ತೆಗೆ ಹಾಕಿದ್ದ ಡಾಂಬರನ್ನು ಹಾರೆಯಿಂದ ಕಿತ್ತು ಬಕೆಟ್ ಗೆ ತುಂಬಿಸಿಕೊಳ್ಳುತ್ತಿರುವುದನ್ನು ಕಾಣಬಹುದು.

ಆಗಸ್ಟ್ 31 ರಂದು ಶೇರ್ ಮಾಡಲಾದ ಈ ವಿಡಿಯೋ ಮೂರು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಬಳಕೆದಾರರೊಬ್ಬರು, ತಮ್ಮ ಊರು ಅಭಿವೃದ್ಧಿಯತ್ತ ಸಾಗುತ್ತಿರುವುದನ್ನು ಪ್ರೋತ್ಸಾಹಿಸಬೇಕು, ಈ ರೀತಿ ಮಾಡುವುದನ್ನು ಸರಿಯಲ್ಲ ಎಂದಿದ್ದಾರೆ. ಇನ್ನೊಬ್ಬರು ಯಾವ ಕಾರಣಕ್ಕಾಗಿ ಕಾಂಕ್ರೀಟ್ ಹಾಕಲಾದ ರಸ್ತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ. ಈ ಗ್ರಾಮಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು ಮತ್ತೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.

Shwetha M