ಭಾರತೀಯರ ಹತ್ಯೆ ಕೇಸ್ – ಕಡೆಗೂ ಮೌನ ಮುರಿದ ಅಮೆರಿಕ ಸರ್ಕಾರ

ಅಮೆರಿಕದಲ್ಲಿ ಭಾರತೀಯರ ಮೇಲೆ ದಾಳಿ ಮುಂದುವರಿದಿದೆ. ಕಳೆದ ಎರಡು ತಿಂಗಳಿನಿಂದ 6ಕ್ಕೂ ಅಧಿಕ ಭಾರತೀಯರ ಹತ್ಯೆ ನಡೆದಿದೆ. ಇದೀಗ ಈ ಹತ್ಯೆ ಆಗಿರುವ ಬಗ್ಗೆ ಅಮೆರಿಕ ಸರ್ಕಾರ ಮೌನ ಮುರಿದಿದೆ.
ಇದನ್ನೂ ಓದಿ: ರಾಷ್ಟ್ರ ರಾಜಧಾನಿಯಲ್ಲಿ ರೈತರ ಪ್ರತಿಭಟನೆ – ಕರ್ತವ್ಯ ನಿರತ ಸಬ್ ಇನ್ಸ್ಪೆಕ್ಟರ್ ಹಾಗೂ ರೈತ ಮುಖಂಡ ಸಾವು
ಸುದ್ದಿಗಾರರೊಂದಿಗೆ ಮಾತನಾಡಿರುವ ಶ್ವೇತಭವನ ವಕ್ತಾರ ಜಾನ್ ಕಿರ್ಬಿ ಭಾರತೀಯರ ಮೇಲೆ ನಡೆಯುತ್ತಿರುವ ದಾಳಿಯ ಕುರಿತು ಪ್ರತಿಕ್ರಿಸಿದ್ದಾರೆ. ದಾಳಿಗಳನ್ನು ತಡೆಗಟ್ಟಲು ಜೋ ಬೈಡೆನ್ ಸರ್ಕಾರವು ಶತಪ್ರಯತ್ನ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
‘ಅಮೆರಿಕದಲ್ಲಿ ಹಿಂಸಾ ಪ್ರವೃತ್ತಿಗೆ ಶೂನ್ಯ ಸಹಿಷ್ಣುತೆಯನ್ನು ಅನುಸರಿಸಲಾಗುತ್ತದೆ. ಹತ್ಯೆಯಾದವರು ಯಾವುದೇ ಪಂಗಡ, ಲಿಂಗ, ಜನಾಂಗಕ್ಕೆ ಸೇರಿದ್ದರೂ ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಹತ್ಯೆಗೆ ಕಾರಣವಾದವರನ್ನು ಪತ್ತೆ ಹಚ್ಚುವುದರ ಜೊತೆಗೆ ಮುಂದೆ ಇಂತಹ ಕೊಲೆಗಳು ನಡೆಯದಂತೆ ಸರ್ಕಾರ ಎಚ್ಚರಿಕೆಯ ಹೆಜ್ಜೆ ಇಡುತ್ತಿದೆ’ ಎಂದು ಜಾನ್ ಕಿರ್ಬಿ ತಿಳಿಸಿದ್ದಾರೆ.
ಶುಕ್ರವಾರ ಕೂಡ ಅಮೆರಿಕದ ಅಲಬಾಮಾ ರಾಜ್ಯದಲ್ಲಿ 76 ವರ್ಷದ ಭಾರತೀಯ ಮೂಲದ ಮೋಟೆಲ್ (ರಸ್ತೆ ಪಕ್ಕದ ಹೋಟೆಲ್) ಮಾಲೀಕನನ್ನು ಗ್ರಾಹಕನೊಬ್ಬ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ರೂಮಿನ ವಿಚಾರವಾಗಿ ಗ್ರಾಹಕ ಹಾಗೂ ಪ್ರವೀಣ್ ನಡುವೆ ಜಗಳವಾದ ಸಂಬಂಧ ಈ ಕೊಲೆ ನಡೆದಿದೆ ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಲಿಯಂ ಜೆರಮಿ ಮೂರ್ (34) ಎಂಬಾತನನ್ನು ಬಂಧಿಸಲಾಗಿದೆ ಎಂದು ಶೆಫೀಲ್ಡ್ ಪೊಲೀಸ್ ಮುಖ್ಯಸ್ಥ ರಿಕಿ ಟೆರಿ ಹೇಳಿದ್ದಾರೆ.