ಯೂನಿವರ್ಸ್ ಬಾಸ್ ಕ್ರಿಸ್‌ಗೇಲ್? ಚಿಂದಿ ಆಯ್ದುವನ ಜೀವನವೇ ಚೇಂಜ್!
25 ಕೋಟಿ ಮನೆ, 300 ಕೋಟಿ ಆಸ್ತಿ

ಯೂನಿವರ್ಸ್ ಬಾಸ್ ಕ್ರಿಸ್‌ಗೇಲ್?    ಚಿಂದಿ ಆಯ್ದುವನ ಜೀವನವೇ ಚೇಂಜ್!25 ಕೋಟಿ ಮನೆ, 300 ಕೋಟಿ ಆಸ್ತಿ

ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಅವರನ್ನು ಇಡೀ ಜಗತ್ತೇ ‘ಯೂನಿವರ್ಸ್ ಬಾಸ್’ ಎಂದು ಕರೆಯುತ್ತದೆ. ಮೈದಾನಕ್ಕೆ ಬ್ಯಾಟ್ ಹಿಡಿದು ಬಂದರೆ ಸಾಕ್ ಲಾಂಗ್ ಸಿಕ್ಸರ್ ಬಾರಿಸದೆ ಹಿಂತಿರುಗಿ ನೋಡೋರೆ ಅಲ್ಲ.  ಕ್ರಿಸ್ ಗೇಲ್ ಕ್ರಿಕೆಟ್ ಮೈದಾನದಲ್ಲಿ ಅದ್ಭುತ ಸಿಕ್ಸರ್ ಬಾರಿಸುವುದನ್ನು ಎಲ್ಲರೂ ನೋಡಿರಬೇಕು. ಆದರೆ ತಮ್ಮ ಕುಟುಂಬವನ್ನು ಪೋಷಿಸಲು ಒಂದು ಕಾಲದಲ್ಲಿ ಕಸ ಆಯುತ್ತಿದ್ದರು ಅನ್ನೋದು ನಿಮ್ಗೆ ಗೊತ್ತಾ? . ಸೆಪ್ಟೆಂಬರ್ 21, 1979 ರಂದು ಜಮೈಕಾದ ಕಿಂಗ್‌ಸ್ಟನ್‌’ನಲ್ಲಿ ಜನಿಸಿದ ಕ್ರಿಸ್ ಗೇಲ್,  ಕ್ರಿಕೆಟ್ ಲೋಕದಲ್ಲಿ ಅಸಾಧ್ಯ ದಾಖಲೆಗಳನ್ನು ಸೃಷ್ಟಿಸಿದ್ದಾರೆ. T-20 ಕ್ರಿಕೆಟ್‌’ನಲ್ಲಿ ಅಪಾರ ಸಾಧನೆ ಮಾಡಿರುವ ಕ್ರಿಸ್ ಗೇಲ್, ಆರ್ಸಿಬಿ ತಂಡದ ಮಾಜಿ ಆಟಗಾರ ಕೂಡ ಹೌದು.

23 ವರ್ಷಗಳ ಸುದೀರ್ಘ ಕ್ರಿಕೆಟ್ ಜೀವನದಲ್ಲಿ ಯಶಸ್ಸನ್ನು ಸಾಧಿಸಿದ್ದಾರೆ ಇವರು. ಅಂದಹಾಗೆ ಗೇಲ್ ವಿಶೇಷವಾಗಿ ಪ್ರಭಾವ ಬೀರಿದ್ದು ಟಿ-20 ಕ್ರಿಕೆಟ್‌’ನಲ್ಲಿ.  ಟಿ-20 ವಿಶ್ವಕಪ್ ಆರಂಭವಾದಾಗ ಅಂದರೆ 2007 ರ ಮೊದಲ ಋತುವಿನಲ್ಲಿ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದವರು ಕ್ರಿಸ್ ಗೇಲ್. ಟಿ-20 ವಿಶ್ವಕಪ್‌’ನ ಮೊದಲ ಶತಕ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಮೊದಲ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಆಗಿದ್ದರೂ, ಗೇಲ್ ಇತಿಹಾಸದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ ಇದರೊಂದಿಗೆ ಟಿ-20 ಕ್ರಿಕೆಟ್‌’ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯೂ ಕ್ರಿಸ್ ಗೇಲ್ ಹೆಸರಿನಲ್ಲಿದೆ. ಈ ಸ್ವರೂಪದಲ್ಲಿ, ಕ್ರಿಸ್ ಗೇಲ್ 463 ಪಂದ್ಯಗಳಲ್ಲಿ 22 ಶತಕಗಳನ್ನು ಗಳಿಸಿದ್ದು, ಇದು T-20 ಕ್ರಿಕೆಟ್‌’ನಲ್ಲಿ ಗರಿಷ್ಠವಾಗಿದೆ. 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತ್ರಿಶತಕ ಬಾರಿಸಿದ ಮೊದಲ ಆಟಗಾರ. 260 ಕೋಟಿಗೆ ಹೆಚ್ಚು ಆಸ್ತಿಯನ್ನ ಗೇಲ್ ಹೊಂದಿದ್ದಾರೆ. ಒಟ್ಟು 7ಕೋಟಿ ಮೌಲ್ಯದ ಕಾರನ್ನ ಹೊಂದಿದ್ದಾರೆ.

ಕ್ರಿಸ್ ಗೇಲ್ ಟೆಸ್ಟ್ ಕ್ರಿಕೆಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದು, ಎರಡು ಬಾರಿ ಈ ಸಾಧನೆ ಮಾಡಿದ್ದಾರೆ. ODI ನಲ್ಲಿ ದ್ವಿಶತಕ, T-20 ನಲ್ಲಿ ಅತಿ ಹೆಚ್ಚು ರನ್, ಶತಕ ಮತ್ತು ಸಿಕ್ಸರ್ ಬಾರಿಸಿದ ವಿಷಯದಲ್ಲಿ ಗೇಲ್‌’ಗೆ ಸರಿಸಾಟಿ ಯಾರೂ ಇಲ್ಲ ಕ್ರಿಕೆಟ್ ಜಗತ್ತಿನಲ್ಲಿ ಯಶಸ್ವಿಯಾಗುವ ಮೊದಲು, ಕ್ರಿಸ್ ಗೇಲ್ ತಮ್ಮ ಬಾಲ್ಯದಲ್ಲಿ ಅನೇಕ ಕಷ್ಟಗಳನ್ನು ಎದುರಿಸಿದವರು. ಬಡ ಕುಟುಂಬದಲ್ಲಿ ಜನಿಸಿದ ಗೇಲ್, ಬೀದಿ ಬದಿಯ ಕಸ ಆಯ್ದು ಅವುಗಳನ್ನು ಮಾರಾಟ ಮಾಡಿ, ಜೊತೆಗೆ ಸಣ್ಣಪುಟ್ಟ ಕೆಲಸ ಮಾಡುತ್ತಾ ತಮ್ಮ ಕುಟುಂಬವನ್ನು ಪೋಷಿಸುತ್ತಿದ್ದರು. ಇದನ್ನು ಸ್ವತಃ ಕ್ರಿಸ್ ಗೇಲ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ. ಆದರೆ ಇಂದು ಗೇಲ್ ಐಷಾರಾಮಿ ಜೀವನ ನಡೆಸುತ್ತಿದ್ದು, ಸದ್ಯ ಇವರು ವಾಸಿಸುವ ಮನೆ 20 ಕೋಟಿ ರೂಪಾಯಿ ಮೌಲ್ಯದ್ದು ಎಂದು ಹೇಳಲಾಗುತ್ತದೆ.

ಐಪಿಎಲ್ ಇತಿಹಾಸದಲ್ಲಿಯೇ ಅತಿ ಹೆಚ್ಚು ಸಿಕ್ಸರ್‌ಗಳನ್ನು ಸಿಡಿಸಿದವರ ಪಟ್ಟಿಯಲ್ಲಿ ನಂ. 1 ಸ್ಥಾನವನ್ನು ‘ಯೂನಿವರ್ಸ್ ಬಾಸ್’ ಎಂದೇ ಕರೆಸಿಕೊಳ್ಳುವ ಕ್ರಿಸ್ ಗೇಲ್ ಅಲಂಕರಿಸಿದ್ದಾರೆ. 2009 ರಿಂದ 2021 ರ ತನಕ ಗೇಲ್ 4 ಪ್ರಾಂಚೈಸಿ ಪರ ಕಣಕ್ಕಿಳಿದಿದ್ದಾರೆ.  ಐಪಿಎಲ್‌ನಲ್ಲಿ ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಆರ್‌ಸಿಬಿ ಪರ ಆಡಿರುವ 142 ಪಂದ್ಯಗಳಲ್ಲಿ 357 ಸಿಕ್ಸರ್‌ಗಳೊಂದಿಗೆ 18ನೇ ಆವೃತ್ತಿ ಸಮೀಪಿಸುತ್ತಿದ್ದರೂ ಮೊದಲ ಸ್ಥಾನದಲ್ಲೇ ಇದ್ದಾರೆ. ಇದಲ್ಲದೆ 1056 ಸಿಕ್ಸರ್‌ಗಳೊಂದಿಗೆ ಟಿ20ಯಲ್ಲಿ ದಾಖಲೆ ಹೊಂದಿದ್ದಾರೆ. ಐಪಿಲ್‌ನಲ್ಲಿ ಆರ್‌ಸಿಬಿ ಪರ ಗೇಲ್  175 ರನ್‌ ಗಳಿಸಿದ್ದಾರೆ.. ಇದು ಯಾರು ಮುರಿಯದ ದಾಖಲೆಯಾಗಿ ಉಳಿದಿದೆ.  ಮೈದಾನದ ಒಳಗೆ ಮತ್ತು ಹೊರಗೆ ಗೇಲ್ ಗಿಂತ ಉತ್ತಮ ಮನರಂಜನೆ ಮತ್ತೊಬ್ಬರಿಲ್ಲ. ಆರ್‌ಸಿಬಿ ಪರ ಬೆಂಗಳೂರಿನ ಪ್ರೇಕ್ಷಕರನ್ನು ಗೆದ್ದ ನಂತರ, ಗೇಲ್ 2018 ರಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸದ್ದಿಲ್ಲದೆ ಹೆಜ್ಜೆ ಹಾಕಿದರು.. ಆದ್ರೆ ಗೇಲ್ ಯಾವುದೇ ಐಪಿಎಲ್ ತಂಡದ ನಾಯಕನಾಗಲೇ ಇಲ್ಲ..

2008ರ ಐಪಿಎಲ್ ನಲ್ಲಿ ಆಡಿದ್ದಕ್ಕಾಗಿ ಟೀಕೆಗೆ ಒಳಗಾಗಿದ್ದ ಗೇಲ್‌, ಕೆಲವು ತಿಂಗಳ ಕಾಲ ಅಂತರರಾಷ್ಟ್ರೀಯ ಪಂದ್ಯಗಳಲ್ಲೂ ಅವಕಾಶ ಕಳೆದುಕೊಂಡರು. ಬಳಿಕ ಅವರು 2009ರ ಐಸಿಸಿ ಟಿ20 ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ತಂಡದ ನಾಯಕರಾಗಿ ಆಯ್ಕೆಯಾದರು. ಈ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಸೆಮಿಫೈನಲ್‌ನಲ್ಲಿ ಶ್ರೀಲಂಕಾ ವಿರುದ್ಧ ಸೋತಿತ್ತು. ಇನ್ನು 103  ಟೆಸ್ಟ್ ಪಂದ್ಯಗಳನ್ನ ಆಡಿರೋ ಗೇಲ್  7215 ರನ್‌ಗಳಿಸಿದ್ದಾರೆ. ಇದ್ರಲ್ಲಿ 15 ಸೆಂಚುರಿ 37 ಆಫ್ ಸೆಂಚುರಿ ಮತ್ತು 3 ಡಬಲ್ ಸೆಂಚುರಿ ಸೇರಿವೆ. ಹಾಗೇ 301 ಏಕದಿನ ಪಂದ್ಯಗಳನ್ನ ಆಡಿದ್ದು, 10, 480 ರನ್‌ಗಳಿಸಿದ್ದಾರೆ.  ಹಾಗೇ 167  ವಿಕೆಟ್ ತೆಗೆದಿದ್ದಾರೆ.

Kishor KV

Leave a Reply

Your email address will not be published. Required fields are marked *