ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಪ್ರಯಾಣ ಸದ್ಯಕ್ಕಿಲ್ಲ – ಕರಾವಳಿ ಜನತೆಗೆ ನಿರಾಸೆ

ಬೆಂಗಳೂರು-ಮಂಗಳೂರು ವಂದೇ ಭಾರತ್ ರೈಲು ಪ್ರಯಾಣ ಸದ್ಯಕ್ಕಿಲ್ಲ – ಕರಾವಳಿ ಜನತೆಗೆ ನಿರಾಸೆ

ಬೆಂಗಳೂರು ಮತ್ತು ಮಂಗಳೂರು ವಂದೇ ಭಾರತ್ ಎಕ್ರಪ್ರೆಸ್ ರೈಲು ಸಂಚಾರ ಶೀಘ್ರದಲ್ಲೇ ಆಗಲಿದೆ ಎಂದು ಕಾಯುತ್ತಿದ್ದ ಕರಾವಳಿ ಜನತೆಗೆ ಮತ್ತೆ ನಿರಾಸೆಯಾಗಿದೆ. ವಂದೇ ಭಾರತ್ ಎಕ್ಸಪ್ರೆಸ್ ರೈಲಿನ ಟ್ರಯಲ್ ರನ್  ಮುಂದೂಡಲಾಗಿದೆ.

ಇದನ್ನೂ ಓದಿ:ಬೆಂಗಳೂರು ಟು ಮಂಗಳೂರಿಗೆ ವಂದೇಭಾರತ್ ರೈಲಿಗೆ ಗ್ರೀನ್ ಸಿಗ್ನಲ್ – ಜೂನ್ 1 ರಿಂದ ಪ್ರಾಯೋಗಿಕ ಸಂಚಾರ

ಬೆಂಗಳೂರು ಟು ಮಂಗಳೂರು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ವಿಚಾರದಲ್ಲಿ ಮತ್ತೊಮ್ಮೆ ನಿರಾಸೆಯಾಗಿದೆ. ಕರಾವಳಿ ಭಾಗದ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ಇಲಾಖೆ ನಿರಾಸೆಯ ಸುದ್ದಿ ನೀಡಿದೆ. ಜೂನ್ 3 ರಂದು ನಿಗದಿಯಾಗಿದ್ದ ಅತ್ಯಂತ ನಿರೀಕ್ಷಿತ ಪ್ರಾಯೋಗಿಕ ಸಂಚಾರವನ್ನು ರೈಲ್ವೆ ಇಲಾಖೆ ದಿಢೀರನೆ ರದ್ದುಗೊಳಿಸಿದೆ. ಯಶವಂತಪುರ -ಮಂಗಳೂರು ಟ್ರಯಲ್ ರನ್ ರದ್ದು ನೈಋತ್ಯ ರೈಲ್ವೆಯ ಮುಖ್ಯ ಪ್ರಯಾಣಿಕ ಸಾರಿಗೆ ವ್ಯವಸ್ಥಾಪಕರ ಕಚೇರಿಯು ಈ ಬಗ್ಗೆ ಅಧಿಕೃತ ಆದೇಶವನ್ನು ಹೊರಡಿಸಿದೆ.

ಮೇ 31 ರಂದು ಬಿಡುಗಡೆಯಾದ ಸಂದೇಶ ಸಂಖ್ಯೆ T.454/YPR-MAQ ವಂದೇ ಭಾರತ್/2026-27(241) ರ ಪ್ರಕಾರ, ಜೂನ್ 3 ರಂದು ಯಶವಂತಪುರದಿಂದ ಮಂಗಳೂರಿಗೆ ಹೋಗಿ ವಾಪಸ್ ಬರುವ ಪ್ರಾಯೋಗಿಕ ಸಂಚಾರದ ಪ್ರಸ್ತಾವನೆಯನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳಲಾಗಿದೆ. ಈ ಪ್ರಯೋಗಕ್ಕಾಗಿ ಮಾಡಲಾಗಿದ್ದ ಎಲ್ಲಾ ಕಾರ್ಯಾಚರಣೆಯ ಸಿದ್ಧತೆಗಳನ್ನು ಸಹ ರದ್ದುಪಡಿಸಲಾಗಿದೆ ಎಂಬ ಆದೇಶ ಹೊರಬಿದ್ದಿದೆ. ಆದರೆ, ರೈಲ್ವೆ ಇಲಾಖೆಯು ರದ್ದತಿಗೆ ನಿಖರವಾದ ಕಾರಣವನ್ನು ಬಹಿರಂಗಪಡಿಸಿಲ್ಲ. ವಂದೇ ಭಾರತ್ ರೈಲಿನ ಮೀಸಲಾದ ರೇಕ್‍ಗಳ ಲಭ್ಯತೆ ಕೊರತೆ ಮತ್ತು ಕಾರ್ಯಾಚರಣೆಯ ಆದ್ಯತೆಗಳು ಈ ನಿರ್ಧಾರದ ಮೇಲೆ ಪ್ರಭಾವ ಬೀರಿರಬಹುದು ಎಂದು ಹೇಳಲಾಗುತ್ತಿದೆ. ಶಿರಾಡಿ ಘಾಟ್‍ನಂತಹ ಸವಾಲಿನ ಮಾರ್ಗದಲ್ಲಿ ರೈಲಿನ ವೇಗ ಮತ್ತು ಕಾರ್ಯಕ್ಷಮತೆಯನ್ನು ಪರೀಕ್ಷಿಸಲು ಈ ಟ್ರಯಲ್ ರನ್ ಬಹಳ ಮುಖ್ಯವಾಗಿತ್ತು.

Sulekha

Leave a Reply

Your email address will not be published. Required fields are marked *