ರಾಮಾಯಣದಲ್ಲಿ ರಾವಣನದ್ದೇ ಅಬ್ಬರ – ರಾಕಿಂಗ್ ಸ್ಟಾರ್ ಯಶ್ ರೌದ್ರಾವತಾರ

ರಾಕಿಂಗ್ ಸ್ಟಾರ್ ಯಶ್, ರಣ್ಬೀರ್ ಕಪೂರ್ ಹಾಗೂ ಸಾಯಿ ಪಲ್ಲವಿ ನಟನೆಯ ಬಹುನಿರೀಕ್ಷಿತ ರಾಮಾಯಣ ಚಿತ್ರದ ಟ್ರೈಲರ್ ರಿಲೀಸ್ ಆಗಿದೆ. ಗುರುವಾರ ಬೆಳಗ್ಗೆ 4.15ರ ಬ್ರಾಹ್ಮೀ ಮುಹೂರ್ತದಲ್ಲಿ ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಿದೆ. ಈ ಟ್ರೇಲರ್ನಲ್ಲಿ ರಾವಣನಾಗಿ ಯಶ್ ರೌದ್ರಾವತಾರ ಧೂಳೆಬ್ಬಿಸಿದೆ.
ಇದನ್ನೂ ಓದಿ:300 ಸಂಚಿಕೆ ಪೂರೈಸಿದ ನಂದಗೋಕುಲ – ವಲ್ಲಭನಿಗೆ ಆರತಿ ಬೆಳಗಿ ಮನೆಗೆ ಬರಮಾಡಿಕೊಂಡ ಅಣ್ಣಂದಿರು
ರಾಮಾಯಣ ಟ್ರೇಲರ್ ಸಿನಿಮಾ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಬೆಳಗಿನ ಜಾವ ರಿಲೀಸ್ ಆಗಿದೆ. ಬಿಡುಗಡೆಯಾದ ಕ್ಷಣದಿಂದಲೇ ರಾಮಾಯಾಣ ಟ್ರೈಲರ್ ಸೌಂಡ್ ಮಾಡುತ್ತಿದೆ. ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅವರ ರೌದ್ರಾವತಾರ ಕನ್ನಡಿಗರ ಮನಗೆದ್ದಿದೆ. ಇಡೀ ಟ್ರೇಲರ್ ಯಶ್ ಅವರ ರಾವಣ ಪಾತ್ರವನ್ನು ಆವರಿಸಿಕೊಂಡಿದೆ. ಇಡೀ ಟ್ರೇಲರ್ನಲ್ಲಿ ಲಂಕೇಶ್ವರ ರಾವಣನಾಗಿ ನಟಿಸಿರುವ ರಾಕಿಂಗ್ ಸ್ಟಾರ್ ಯಶ್ ಅವರದ್ದೇ ಸಂಪೂರ್ಣ ಅಧಿಪತ್ಯ ಎದ್ದು ಕಾಣುತ್ತಿದೆ.
ರಾಮನಾಗಿ ಬಾಲಿವುಡ್ ಸ್ಟಾರ್ ರಣ್ಬೀರ್ ಕಪೂರ್ ಕೂಡಾ ಬೇರೆ ಲೆವೆಲ್ನಲ್ಲೇ ಕಾಣಿಸಿಕೊಂಡಿದ್ದಾರೆ. ಸೌಮ್ಯ ಮತ್ತು ಮಂದಸ್ಮಿತನಾಗಿ ರಾಮನ ಪಾತ್ರ ಮೂಡಿಬಂದಿದೆ. ರಾಮ ರಾಜ ಕುಮಾರನಾಗಿ, ಸೀತಾಪತಿಯಾಗಿ, ರಾವಣನ ವಿರುದ್ಧ ವಿರಾಟ್ ರೂಪ ತೋರಿಸಿರುವುದು ಟ್ರೇಲರ್ ನಲ್ಲಿ ಕಾಣಿಸಿದೆ.
ತಾಯಿ ಸೀತಾದೇವಿ ರೂಪದಲ್ಲಿ ನಟಿ ಸಾಯಿ ಪಲ್ಲವಿ ಚೆಂದವಾಗಿ ಕಂಡಿದ್ದಾರೆ. ಸ್ವಯಂವರದ ಮುಗ್ದೆ, ರಾಮ ಹೃದಯನಿವಾಸಿನಿಯಾಗಿ, ವನವಾಸಕ್ಕೆ ಹೊರಟ ಪತಿ ಜೊತೆ ದಟ್ಟಡವಿಯಲ್ಲಿ ಹೊರಟ ಜಾನಕಿಯನ್ನು ಟ್ರೈಲರ್ನಲ್ಲಿ ತೋರಿಸಲಾಗಿದೆ. ಈ ಮೂರು ಶೇಡ್ಗಳಲ್ಲೂ ಸಾಯಿಪಲ್ಲವಿ ತುಂಬಾ ಚೆಂದವಾಗಿ ಕಾಣುತ್ತಿದ್ದಾರೆ.
ಕೈಕೇಯಿಯಾಗಿ ಲಾರಾ ದತ್ತಾ, ಶೂರ್ಪಣಖೆಯಾಗಿ ರಕುಲ್ ಪ್ರೀತ್ ಸಿಂಗ್ ಹಾಗೂ ದಶರಥ ಮಹಾರಾಜನಾಗಿ ಅರವಿಂದ್ ಗೋವಿಲ್ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸುವಂತೆ ಕಾಣಿಸುತ್ತಾರೆ. ಪ್ರಶಸ್ತಿ ವಿಜೇತ ಕಥೆಗಾರ ಶ್ರೀಧರ್ ರಾಘವನ್ ಚಿತ್ರಕ್ಕೆ ಚಿತ್ರಕಥೆ ರೂಪಿಸಿದ್ದು, ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ನಿರ್ದೇಶಕರಾದ ಹಾನ್ಸ್ ಜಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ಸಂಯೋಜಿಸಿರುವುದು ಚಿತ್ರದ ಮತ್ತೊಂದು ವಿಶೇಷತೆ.

ನೋಡಿರಿ

