ಮಹಿಷಾಸುರ ಪಾತ್ರ ಮಾಡುವಾಗ ಹೃದಯಾಘಾತ – ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದನ ದಾರುಣ ಅಂತ್ಯ
ತಂದೆಯ ಕಣ್ಣೆದುರೇ ಮಗನ ದಾರುಣ ಸಾವು – ಕಣ್ಣೀರಿಟ್ಟ ಮಂದಾರ್ತಿ ಮೇಳದ ಕಲಾವಿದರು

ಮಹಿಷಾಸುರ ಪಾತ್ರ ಮಾಡುವಾಗ ಹೃದಯಾಘಾತ – ಮಂದಾರ್ತಿ ಮೇಳದ ಯಕ್ಷಗಾನ ಕಲಾವಿದನ ದಾರುಣ ಅಂತ್ಯತಂದೆಯ ಕಣ್ಣೆದುರೇ ಮಗನ ದಾರುಣ ಸಾವು – ಕಣ್ಣೀರಿಟ್ಟ ಮಂದಾರ್ತಿ ಮೇಳದ ಕಲಾವಿದರು

ಕರಾವಳಿ ಭಾಗದ ಪ್ರಸಿದ್ಧ ಯಕ್ಷಗಾನ ಮೇಳ ಮಂದಾರ್ತಿ ಮೇಳ. ನಾಲ್ಕು ಮೇಳಗಳಲ್ಲಿ ಒಂದಾದ ಎರಡನೇ ಮೇಳದಲ್ಲಿ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸುತ್ತಿದ್ದವರು ಈಶ್ವರ ಗೌಡ. ಇವರ ತಂದೆ ಕೂಡಾ ಅದೇ ಮೇಳದ ಕಲಾವಿದರು. ಆದರೆ, ಬುಧವಾರ ರಾತ್ರಿ ಈ ಕಲಾವಿದರ ಪಾಲಿಗೆ ಕರಾಳ ರಾತ್ರಿಯಾಗಿತ್ತು. ಯಕ್ಷಗಾನ ಮಾಡುತ್ತಲೇ, ದೇವಿಯ ಆರಾಧನೆ ಮಾಡುತ್ತಿರುವಾಗಲೇ ಕಲಾವಿದನ ಪ್ರಾಣ ಹಾರಿಹೋಗಿದೆ. ಮಹಿಷಾಸುರನಾಗಿ ಅಬ್ಬರಿಸುತ್ತಾ ವೇದಿಕೆಗೆ ವಿಶೇಷ ಕಳೆ ತಂದ ಈಶ್ವರ ಗೌಡ ಅವರು ತಮ್ಮ ಪಾತ್ರ ಮುಗಿಯುತ್ತಿದ್ದಂತೆ ಕುಸಿದು ಬಿದ್ದಿದ್ದಾರೆ. ತಂದೆಯ ಕಣ್ಣೆದುರೇ ಮಗನ ಸಾವು ಕಂಡು ಉಳಿದ ಕಲಾವಿದರು ಕಣ್ಣೀರಿಟ್ಟಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ 7 ಕೋಟಿ ರೂಪಾಯಿ ದರೋಡೆ ಘಟನೆಗೆ ವೆಬ್ ಸೀರೀಸ್ ಸ್ಫೂರ್ತಿ?

ವಿಧಿಯಾಟ ನೋಡಿ. ಮಹಿಷಾಸುರನ ಪಾತ್ರ ಯಾವಾಗಲೂ ಅಬ್ಬರದಿಂದಲೇ ಕೂಡಿರುತ್ತದೆ. ಯಕ್ಷಗಾನ ಅಭಿಮಾನಿಗಳಿಗೂ ಕೂಡಾ ಮಹಿಷಾಸುರನ ಪಾತ್ರ ಅಂದರೆ ವಿಶೇಷ ಪ್ರೀತಿ. ಇದೇ ಮಹಿಷಾಸುರನ ಪಾತ್ರ ಮಾಡಿರುವ ಈಶ್ವರ ಗೌಡ ಅದಕ್ಕೂ ಮೊದಲು ತಂದೆಯ ಆಶೀರ್ವಾದ ಪಡೆದು ವೇದಿಕೆ ಏರುತ್ತಾರೆ. ನೆರೆದಿದ್ದ ಯಕ್ಷಗಾನ ಅಭಿಮಾನಿಗಳಿಗೆ ಚಪ್ಪಾಳೆ ತಟ್ಟಿ ಈಶ್ವರ ಗೌಡ ಅವರನ್ನು ಹೆಮ್ಮೆಯಿಂದಲೇ ಸ್ವಾಗತಿಸುತ್ತಾರೆ. ಆದರೆ, ನಾವೊಂದು ಬಗೆದರೆ, ದೈವ ಇನ್ನೊಂದು ಬಗೆಯುತ್ತೆ ಅನ್ನೋದು ಇದಕ್ಕೆ ಇರಬೇಕು. ಆ ಸಂಭ್ರಮ, ಮಹಿಷನ ಅಬ್ಬರ ನೋಡುತ್ತಿದ್ದವರಿಗೆ ಒಮ್ಮೆಲೆ ಕಣ್ಣೀರಿಡುವಂತಾಯಿತು. ಯಾಕೆಂದರೆ, ಮಹಿಷಾಸುರನಾಗಿ ಯಕ್ಷಗಾನ ವೇದಿಕೆಗೆ ವಿಶೇಷ ಕಳೆ ತಂದ ಈಶ್ವರ ಗೌಡ ಅವರು ತಮ್ಮ ಪಾತ್ರ ಮುಗಿಯುತ್ತಿದ್ದಂತೆ ಕುಸಿದು ಬಿದ್ದರು. ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಹೋದರು ಕೂಡಾ ಪ್ರಾಣಪಕ್ಷಿ ಹಾರಿ ಹೋಗಿತ್ತು.

ಈಶ್ವರ ಗೌಡ ಅವರು ಮಂದಾರ್ತಿ ಮೇಳದ ಕಲಾವಿದರು. ಮಂದಾರ್ತಿ ಎರಡನೇ ಮೇಳದಲ್ಲಿ  ಈಶ್ವರ ಗೌಡ ಅವರು ಮಹಿಷಾಸುರ ಪಾತ್ರ ನಿರ್ವಹಿಸಿದ್ದರು. ವೇದಿಕೆ ಮೇಲೆ ನಟಿಸಿದ ಬಳಿಕ ಕುಸಿದು ಬಿದ್ದ ಕಲಾವಿದ ನಿನ್ನೆ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಈಶ್ವರ ಗೌಡ ಅವ್ರು ಮಹಿಷಾಸುರನ ಪಾತ್ರ ಧರಿಸಿ ವೇದಿಕೆ ಮೇಲೆ ಅಬ್ಬರಿಸಿದ್ರು. ಪಾತ್ರ ಮುಗಿಸಿ ವೇಷ ಕಳಚುತ್ತಿದ್ದಂತೆ ಈಶ್ವರ ಗೌಡ ಕುಸಿದು ಬಿದ್ದಿದ್ದಾರೆ. ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲಾಯ್ತು ಆದ್ರೆ ಮಾರ್ಗ ಮಧ್ಯೆಯೇ ಪಾತ್ರಧಾರಿ ಉಸಿರು ಚೆಲ್ಲಿದ್ದಾರೆ. ಅದೇ ಮೇಳದಲ್ಲಿ ಅವರ ತಂದೆ ಕೂಡ ವೇಷಧಾರಿಯಾಗಿದ್ರು. ಅಪ್ಪ-ಮಗ ಇಬ್ಬರು ಒಂದೇ ಮೇಳದಲ್ಲಿ ಸೇವೆ ಸಲ್ಲಿಸುತ್ತಿರುವುದು ಕೂಡಾ ವಿಶೇಷವಾಗಿತ್ತು. ಚೌಕಿಯಲ್ಲಿ ತಂದೆಯ ಆಶೀರ್ವಾದ ಪಡೆದು ಈಶ್ವರ ಗೌಡ ಅದ್ಬುತವಾಗಿಯೇ ಪಾತ್ರ ನಿರ್ವಹಿಸಿದ್ದರು. ಆದರೆ, ವಿಧಿ ನಿಯಮ ಇಷ್ಟೇ ಆಗಿತ್ತು. ಮಹಿಷಾಸುರನಾಗಿ ಅಬ್ಬರಿಸಿದ ಈಶ್ವರ ಗೌಡ ಹೃದಯಾಘಾತಕ್ಕೆ ಒಳಗಾದರು. ತಂದೆಯ ಕಣ್ಣೆದುರೇ ಮಗ ಬಾರದ ಲೋಕಕ್ಕೆ ತೆರಳಿದ್ದು ನೋಡಿ ಯಕ್ಷಗಾನ ಕಲಾವಿದರು, ಅಭಿಮಾನಿಗಳು ಕಣ್ಣೀರಟ್ಟರು.

Sulekha