ಒಂದೊಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ – ಭಾರತದ ಟಾಪ್ 10 ಶ್ರೀಮಂತ ನಟರು ಇವರು

ಒಂದೊಂದು ಸಿನಿಮಾಗೆ ನೂರಾರು ಕೋಟಿ ಸಂಭಾವನೆ – ಭಾರತದ ಟಾಪ್ 10 ಶ್ರೀಮಂತ ನಟರು ಇವರು

ಮೊದಲೆಲ್ಲಾ ಸಿನಿಮಾಗಳು ಒಂದೇ ಮನೆಯಲ್ಲಿ ಶುರುವಾಗಿ ಅದೇ ಮನೆಯಲ್ಲಿ ಮುಗಿದು ಹೋಗುತ್ತಿದ್ದವು. ಆದರೆ ಈಗ ಸಿನಿಮಾ ಎಲ್ಲಿಯೋ ಶುರುವಾಗಿ ಇನ್ನೆಲ್ಲೋ ಕೊನೆಯಾಗುತ್ತದೆ. ಅದರಲ್ಲೂ ಸಾಂಗ್ ಗಳ ಶೂಟಿಂಗ್, ಫೈಟಿಂಗ್ ಸೀನ್ ಗೆಂದೇ ವಿದೇಶಕ್ಕೆ ಹಾರುವ ಚಿತ್ರ ನಿರ್ದೇಶಕರಿದ್ದಾರೆ. ನೂರಾರು ಕೋಟಿ ಲೆಕ್ಕದಲ್ಲಿ ಸಿನಿಮಾಗಳನ್ನ ನಿರ್ಮಾಣ ಮಾಡಲಾಗುತ್ತದೆ. ಹೀಗೆ ದುಬಾರಿ ಸಂಭಾವನೆ ಪಡೆಯುವ ನಟರಿಗೂ ಏನು ಕಡಿಮೆ ಇಲ್ಲ ಬಿಡಿ. ಒಂದು ಚಿತ್ರಕ್ಕೆ ನೂರಾರು ಕೋಟಿ ಹಣ ಪಡೆಯುವ ಸ್ಟಾರ್ ನಟರೂ ಕೂಡ ಭಾರತದಲ್ಲೇ ಇದ್ದಾರೆ.

ಇದನ್ನೂ ಓದಿ :  ‘ಗದರ್2’ ಮುಂದೆ ಮಂಡಿಯೂರಿದ ‘ಒಎಂಜಿ2’ – ಕಲೆಕ್ಷನ್ ನಲ್ಲಿ ಅಕ್ಷಯ್ ಕುಮಾರ್ ರನ್ನೇ ಹಿಂದಿಕ್ಕಿದ ಸನ್ನಿ ಡಿಯೋಲ್

ಮೊದಲೆಲ್ಲಾ ಬಾಲಿವುಡ್ ಸಿನಿಮಾಗಳು, ಬಾಲಿವುಡ್ ಸ್ಟಾರ್ಸ್ ಅಂದ್ರೆ ಅಭಿಮಾನಿಗಳು ಬಾಯಿ ಮೇಲೆ ಬೆರಳಿಟ್ಟುಕೊಂಡು ಸಿನಿಮಾ ನೋಡುತ್ತಿದ್ರು. ಆದರೆ ಈಗ ಬಾಲಿವುಡ್ ಮಂದಿಯೇ ಶೇಕ್ ಆಗುವಂತಹ ಚಿತ್ರಗಳು ಇತರೆ ಭಾಷೆಗಳಲ್ಲಿ ಮೂಡಿ ಬರುತ್ತಿವೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ದೊಡ್ಡ ಬಜೆಟ್​ನ ಚಿತ್ರಗಳು ನಿರ್ಮಾಣ ಆಗುತ್ತವೆ. ಅದೇ ರೀತಿ ಸ್ಟಾರ್ ನಟರು ದೊಡ್ಡ ಮೊತ್ತದ ಸಂಭಾವನೆ ಪಡೆದುಕೊಳ್ಳುತ್ತಾರೆ. ಪ್ರತಿ ಚಿತ್ರಕ್ಕೆ ನೂರಾರು ಕೋಟಿ ಸಂಭಾವನೆ ಪಡೆಯುವ ಸ್ಟಾರ್​ಗಳು ಭಾರತದಲ್ಲಿ ಇದ್ದಾರೆ. ಭಾರತದ ಟಾಪ್ 10 ಶ್ರೀಮಂತ ನಟರ ಪಟ್ಟಿ ಇಲ್ಲಿದೆ.

ಶಾರುಖ್ ಖಾನ್

ಪಠಾಣ್ ಸಿನಿಮಾ ಮೂಲಕ ಭಾರತೀಯ ಚಿತ್ರರಂಗದಲ್ಲಿ ಮತ್ತೊಮ್ಮೆ ಸದ್ದು ಮಾಡಿರುವ ಶಾರುಖ್ ಖಾನ್​ಗೆ ಭಾರತದ ಶ್ರೀಮಂತ ನಟರ ಪೈಕಿ ಮೊದಲ ಸ್ಥಾನ ಇದೆ. ಪ್ರತಿ ಚಿತ್ರಕ್ಕೆ ಇವರು ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಐಪಿಎಲ್​ನಲ್ಲಿ ತಮ್ಮದೇ ತಂಡ ಹೊಂದಿದ್ದಾರೆ. ನಿರ್ಮಾಣ ಸಂಸ್ಥೆ ಇದೆ. ಹಲವು ಬ್ರ್ಯಾಂಡ್​​ಗಳಿಗೆ ಪ್ರಚಾರ ಮಾಡುತ್ತಾರೆ. ಇವರ ಒಟ್ಟೂ ಆಸ್ತಿ 6,300 ಕೋಟಿ ರೂಪಾಯಿ.

ಹೃತಿಕ್ ರೋಷನ್

ಬಾಲಿವುಡ್​ನ ಟ್ಯಾಲೆಂಟೆಡ್​ ಹೀರೋಗಳ ಸಾಲಿನಲ್ಲಿ ಹೃತಿಕ್ ರೋಷನ್ ಇದ್ದಾರೆ. ಇವರು ಪ್ರತಿ ಸಿನಿಮಾಗೆ 50-60 ಕೋಟಿ ರೂಪಾಯಿ ಪಡೆದುಕೊಳ್ಳುತ್ತಾರೆ. ಇವರು ಬ್ರ್ಯಾಂಡ್ ಪ್ರಚಾರಕ್ಕೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಇವರು ತಮ್ಮದೇ ಬಟ್ಟೆ-ಶ್ಯೂ ಬ್ರ್ಯಾಂಡ್ ಹೊಂದಿದ್ದಾರೆ. ಇವರ ಆಸ್ತಿ 3,100 ಕೋಟಿ ರೂಪಾಯಿ.

ಅಮಿತಾಭ್ ಬಚ್ಚನ್

ಬಾಲಿವುಡ್​ನ ಹಿರಿಯ ನಟ ಅಮಿತಾಭ್ ಬಚ್ಚನ್ ಚಿತ್ರರಂಗದಲ್ಲಿ ಹಲವು ದಶಕಗಳಿಂದ ಆ್ಯಕ್ಟೀವ್ ಆಗಿದ್ದಾರೆ. ಇವರ ಅನುಭವ ಅಪಾರ. ಸಿನಿಮಾ ಮಾತ್ರವಲ್ಲದೆ, ಕಿರುತೆರೆ ಶೋ ‘ಕೌನ್ ಬನೇಗಾ ಕರೋಡ್ಪತಿ’ ನಡೆಸಿಕೊಡುತ್ತಾರೆ. ಇವರು ಪ್ರತಿ ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಇವರ ಆಸ್ತಿ 3,000 ಕೋಟಿ ರೂಪಾಯಿ. ಪ್ರಭಾಸ್ ಜೊತೆ ಇವರು ನಟಿಸುತ್ತಿರುವ ‘ಕಲ್ಕಿ 2898 ಎಡಿ’ ಮೊದಲ ಗ್ಲಿಂಪ್ಸ್ ಇತ್ತೀಚೆಗೆ ರಿಲೀಸ್ ಆಗಿ ಗಮನ ಸೆಳೆಯಿತು.

ಸಲ್ಮಾನ್ ಖಾನ್

ಬಾಲಿವುಡ್​ನಲ್ಲಿ ಸಲ್ಮಾನ್ ಖಾನ್ ಅವರದ್ದು ದೊಡ್ಡ ಹೆಸರು. ಇವರು ತಮ್ಮದೇ ಬಟ್ಟೆ ಬ್ರ್ಯಾಂಡ್ ಹಾಗೂ ಚಾರಿಟಿ ಹೊಂದಿದ್ದಾರೆ. ವಯಸ್ಸು 57 ದಾಟಿದರೂ ಮದುವೆ ಆಗುವ ಆಲೋಚನೆ ಮಾಡಿಲ್ಲ. ಇವರ ಆಸ್ತಿ 2,850 ಕೋಟಿ ರೂಪಾಯಿ ಎನ್ನಲಾಗಿದೆ. ಇವರು ಸಾಕಷ್ಟು ಕಡೆಗಳಲ್ಲಿ ಪ್ರಾಪರ್ಟಿ ಹೊಂದಿದ್ದಾರೆ.

ಅಕ್ಷಯ್ ಕುಮಾರ್

ಬಾಲಿವುಡ್​ನಲ್ಲಿ ಅತಿ ವೇಗವಾಗಿ ಸಿನಿಮಾ ಕೆಲಸ ಮುಗಿಸುತ್ತಿರುವ ನಟ ಅಂದರೆ ಅದು ಅಕ್ಷಯ್ ಕುಮಾರ್. ಈ ಕಾರಣಕ್ಕೆ ವರ್ಷಕ್ಕೆ ಅವರ ನಟನೆಯ ಮೂರು-ನಾಲ್ಕು ಚಿತ್ರಗಳು ರಿಲೀಸ್ ಆಗುತ್ತವೆ. ಇವರ ಆಸ್ತಿ 2,660 ಕೋಟಿ ರೂಪಾಯಿ ಇದೆ ಎನ್ನಲಾಗಿದೆ. ಅತಿ ಹೆಚ್ಚು ಟ್ಯಾಕ್ಸ್ ಕಟ್ಟುವ ಭಾರತದ ಹೀರೋ ಎನ್ನುವ ಹೆಗ್ಗಳಿಕೆಗೆ ಇವರಿಗೆ ಇದೆ.

ಅಮಿರ್ ಖಾನ್

ನಟ ಅಮಿರ್ ಖಾನ್ ಅವರು ನಟನೆಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಹಾಗಂತ ಅವರಿಗೆ ಬೇಡಿಕೆ ಕಡಿಮೆ ಆಗಿಲ್ಲ. ಸಾಕಷ್ಟು ಉದ್ಯಮಗಳಲ್ಲಿ ಅವರು ಹೂಡಿಕೆ ಮಾಡಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆ ಹೊಂದಿದ್ದಾರೆ. ಇವರ ಆಸ್ತಿ 1,862 ಕೋಟಿ ರೂಪಾಯಿ.

ರಾಮ್ ಚರಣ್

ದಕ್ಷಿಣದ ಖ್ಯಾತ ನಟ ರಾಮ್ ಚರಣ್ ಅವರು ‘ಆರ್​ಆರ್​ಆರ್’ ಚಿತ್ರದ ಮೂಲಕ ಗೆದ್ದು ಬೀಗಿದ್ದಾರೆ. ಈ ಚಿತ್ರದ ‘ನಾಟು ನಾಟು..’ ಹಾಡು ಆಸ್ಕರ್ ಗೆದ್ದಿದೆ. ಈ ಸ್ಟಾರ್​ ನಟನಿಗೆ ಸಾಕಷ್ಟು ಬೇಡಿಕೆ ಇದೆ. ಇವರ ಆಸ್ತಿ 1370 ಕೋಟಿ ರೂಪಾಯಿ. ಇವರು ಖಾಸಗಿ ಜೆಟ್ ಕೂಡ ಹೊಂದಿದ್ದಾರೆ.

ಅಕ್ಕಿನೇನಿ ನಾಗಾರ್ಜುನ

ನಟ ಹಾಗೂ ನಿರೂಪಕ ಅಕ್ಕಿನೇನಿ ನಾಗಾರ್ಜುನ ಅವರಿಗೆ ಸಖತ್ ಬೇಡಿಕೆ ಇದೆ. ಸ್ವಂತ ಜೆಟ್ ಹೊಂದಿರುವ ಇವರ ಆಸ್ತಿ 950 ಕೋಟಿ ರೂಪಾಯಿ. ಇವರು ಪ್ರತಿ ಸಿನಿಮಾಗೆ 10 ಕೋಟಿ ರೂಪಾಯಿ ಪಡೆಯುತ್ತಾರೆ. ಬಿಗ್ ಬಾಸ್ ನಿರೂಪಣೆಗೆ  15 ಕೋಟಿ ರೂ ಪಡೆಯುತ್ತಾರೆ ಎನ್ನಲಾಗಿದೆ.

ರಜಿನಿಕಾಂತ್

ಕಾಲಿವುಡ್ ಸ್ಟಾರ್ ನಟ ರಜನಿಕಾಂತ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿದ್ದಾರೆ. ಅವರ ನಟನೆಯ ‘ಜೈಲರ್’ ಸಿನಿಮಾ ಸೂಪರ್ ಹಿಟ್ ಆಗಿದೆ. ಈ ಚಿತ್ರದಿಂದ ಅವರಿಗೆ ಗೆಲುವು ಸಿಕ್ಕಿದೆ. ಇವರ ಆಸ್ತಿ 450 ಕೋಟಿ ರೂಪಾಯಿಗೂ ಮೀರಿದೆ.

ಅಲ್ಲು ಅರ್ಜುನ್

ಅಲ್ಲು ಅರ್ಜುನ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದಾರೆ. ಇವರ ಆಸ್ತಿ 380 ಕೋಟಿ ರೂಪಾಯಿ ಇದೆ. ಇವರು ತಮ್ಮದೇ ಮಲ್ಟಿಪ್ಲೆಕ್ಸ್ ಹೊಂದಿದ್ದಾರೆ. ಸದ್ಯ ‘ಪುಷ್ಪ 2’ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ.

suddiyaana