ವಾಹನಗಳ ಸಂಚಾರದ ನಡುವೆಯೇ ರಸ್ತೆ ದಾಟಿದ ಹುಲಿ – ವಿಡಿಯೋ ನೋಡಿ ಜನ ಆತಂಕಗೊಂಡಿದ್ದೇಕೆ..!?

ವಾಹನಗಳ ಸಂಚಾರದ ನಡುವೆಯೇ ರಸ್ತೆ ದಾಟಿದ ಹುಲಿ – ವಿಡಿಯೋ ನೋಡಿ ಜನ ಆತಂಕಗೊಂಡಿದ್ದೇಕೆ..!?

ಆನೆಗಳ ಹಾವಳಿ, ಚಿರತೆಗಳ ದಾಳಿ ರಾಜ್ಯದಲ್ಲಿ ದಿನೇದಿನೆ ಹೆಚ್ಚಾಗುತ್ತಿದೆ. ಅದ್ರಲ್ಲೂ ಮೈಸೂರಲ್ಲಂತೂ ತಿಂಗಳ ಅಂತರದಲ್ಲೇ ನಾಲ್ವರು ಚಿರತೆಗೆ ಬಲಿಯಾಗಿದ್ದರು. ಕಾಡುಮೃಗಗಳು ನಾಡಿಗೆ ಲಗ್ಗೆ ಇಟ್ಟಾಗೆಲ್ಲಾ ಮನುಷ್ಯರು ಅವುಗಳದ್ದೇ ತಪ್ಪು ಎನ್ನುವಂತೆ ಮಾತನಾಡುತ್ತಾರೆ. ಜೊತೆಗೆ ಅವುಗಳಿಗೆ ಕೊಡಬಾರದ ಹಿಂಸೆ ಕೊಡುತ್ತಾರೆ. ಕೆಲವೊಮ್ಮೆ ಕೊಂದೇ ಬಿಡುತ್ತಾರೆ. ಅಭಿವೃದ್ಧಿ ಹೆಸರಲ್ಲಿ ಮರಗಳನ್ನ ಉರುಳಿಸಿ ಕಾಡು ಹಾಳು ಮಾಡ್ತಿರುವ ಪರಿಣಾಮವೇ ಈಗ ಕಾಡುಪ್ರಾಣಿಗಳೆಲ್ಲಾ ನಾಡಿಗೆ ಲಗ್ಗೆ ಇಡ್ತಿವೆ.

ಇದನ್ನೂ ಓದಿ : ಕುಸಿದು ಬಿದ್ದ ಆನೆ ರಕ್ಷಣೆಗೆ ಭಾರತೀಯ ಸೇನೆ ಸಾಥ್ – ಹೇಗಿದೆ ಗೊತ್ತಾ ‘ಆಪರೇಷನ್ ಮೋತಿ’..!?

ಹೌದು. ವಾಸ್ತವದಲ್ಲಿ ಕಾಡುಪ್ರಾಣಿಗಳ ಜಾಗವನ್ನು ನಾವು ಆಕ್ರಮಿಸಿಕೊಂಡಿದ್ದೇವೆ. ಐಎಫ್‌ಎಸ್ ಅಧಿಕಾರಿ ಸುಸಂತಾ ನಂದಾ ಮತ್ತೊಂದು ವಿಡಿಯೋ ಟ್ವೀಟ್ ಮಾಡಿದ್ದು, ಭಾರೀ ವೈರಲ್ ಆಗ್ತಿದೆ. ಹಗಲಿನಲ್ಲಿ ರಸ್ತೆಯಲ್ಲಿ ವಾಹನಗಳು ಸಂಚರಿಸುವ ವೇಳೆಯೇ ಹುಲಿಯೊಂದು ರಸ್ತೆ ದಾಟಿದೆ.

ರಸ್ತೆಯಲ್ಲಿ ಕಂಟೇನರ್​ನಂತಹ ಬೃಹತ್ ವಾಹನಗಳು ಸಂಚರಿಸುವಾಗಲೇ ಹುಲಿ ಒಂದು ಬದಿಯಿಂದ ಮತ್ತೊಂದು ಬದಿಗೆ ರಸ್ತೆ ದಾಟಿದೆ. ಕಾರಿನಲ್ಲಿ ಪ್ರಯಾಣ ಮಾಡುತ್ತಿದ್ದವರು ಇದನ್ನ ವಿಡಿಯೋ ಮಾಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್ ಆಗಿದ್ದು, ಸಾಕಷ್ಟು ಜನ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಆತಂಕ ವ್ಯಕ್ತಪಡಿಸಿದ್ದರೆ ಇನ್ನೂ ಕೆಲವರು ಮನುಷ್ಯನಿಂದಲೇ ಕಾಡುಪ್ರಾಣಿಗಳೆಲ್ಲಾ ನಾಡಿಗೆ ಬರುವಂತಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. 1 ಮಿಲಿಯನ್​ಗಿಂತಲೂ ಹೆಚ್ಚು ಜನ ಈ ವಿಡಿಯೋ ನೋಡಿದ್ದಾರೆ. ಸುಮಾರು 10,500ಕ್ಕಿಂತಲೂ ಹೆಚ್ಚು ಜನ ಇಷ್ಟಪಟ್ಟಿದ್ದಾರೆ.

suddiyaana