ಪಾಪಿ ಪಾಕಿಸ್ತಾನಕ್ಕೆ ಸಂಕಷ್ಟ! – ಪಾಕ್ ಅನ್ನು ಜಗತ್ತಿನಿಂದ್ಲೇ ನಿರ್ನಾಮ ಮಾಡಲಾಗುವುದು ಎಂದು ಪ್ರತಿಜ್ಞೆ ತೊಟ್ಟ ತಾಲಿಬಾನ್!

ಪಾಪಿ ಪಾಕಿಸ್ತಾನದ ಪರಿಸ್ಥಿತಿ ತೀರಾ ಹದಗೆಟ್ಟಿದೆ. ಆರ್ಥಿಕ ಬಿಕ್ಕಟ್ಟಿನಿಂದ ಬಳಲಿ ಬೆಂಡಾಗಿದೆ. ಸದಾ ಕಾಲ ಭಯೋತ್ಪಾದಕರನ್ನು ಸಾಕುತ್ತಿದ್ದ ಪಾಕ್ಗೆ ಈಗ ಸಂಕಷ್ಟ ಶುರುವಾಗಿದೆ. ಇಲ್ಲಿನ ತಾಲಿಬಾನ್ ಬಣವಾದ ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಪಾಕಿಸ್ತಾನಕ್ಕೆ ಘೋರ ಎಚ್ಚರಿಕೆ ನೀಡಿದೆ. ದೇಶವನ್ನೇ ನಿರ್ನಾಮ ಮಾಡೋದಾಗಿ ಖಡಕ್ ವಾರ್ನಿಂಗ್ ನೀಡಿದೆ.
ಇದನ್ನೂ ಓದಿ: ಆಫ್ನ 7 ಶಾಸಕರನ್ನ ಖರೀದಿಸಲು ಬಿಜೆಪಿಯಿಂದ ಬಿಗ್ ಪ್ಲಾನ್!– ಹೊಸ ಬಾಂಬ್ ಸಿಡಿಸಿದ ಕೇಜ್ರಿವಾಲ್!
ಹೌದು, ಅಫ್ಘಾನಿಸ್ತಾನವು ಬಲೂಚಿಸ್ತಾನದಲ್ಲಿ ದಂಗೆಗೆ ಸಹಾಯ ಮಾಡುತ್ತಿದೆ. ಅಫ್ಘಾನಿಸ್ತಾನವು ಇಸ್ಲಾಮಾಬಾದ್ನೊಂದಿಗೆ ಎಂದಿಗೂ ಸ್ನೇಹಪರವಾಗಿಲ್ಲ ಎಂದು ಜನರಲ್ ಮುನೀರ್ ಆರೋಪಿಸಿದ್ದರು. ಇದೀಗ ಈ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ದೇಶವನ್ನು ನಿರ್ನಾಮ ಮಾಡುವುದಾಗಿ ಪ್ರತಿಜ್ಞೆ ತೆಹ್ರೀಕ್- ಇ – ತಾಲಿಬಾನ್ ಪಾಕಿಸ್ತಾನ್ ಮಾಡಿದೆ.
ಪಾಕಿಸ್ತಾನದ ಸೇನಾ ಮುಖ್ಯಸ್ಥರ ಹೇಳಿಕೆಗಳಿಗೆ ಪಂಜಶಿರಿ ತಾಲಿಬಾನ್ ಕಮಾಂಡರ್ ಅಬ್ದುಲ್ ಹಮೀದ್ ಖೊರಾಸಾನಿ ಪ್ರತಿಕ್ರಿಯಿಸುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದೆ. ಶೀಘ್ರದಲ್ಲೇ ಟಿಟಿಪಿಯ ಪವಿತ್ರ ಯೋಧರು ನಿಮ್ಮ ವಿಶ್ವಾಸದ್ರೋಹಿ ಮತ್ತು ದಬ್ಬಾಳಿಕೆಯ ಸರ್ಕಾರವನ್ನು ಉರುಳಿಸುತ್ತಾರೆ. ಮುಲ್ಲಾ ಹೆಬತುಲ್ಲಾ ಆದೇಶಿಸಿದರೆ, ಪಾಕಿಸ್ತಾನವನ್ನು ಭೂಮಿಯಿಂದಲೇ ಅಳಿಸಿಹಾಕಲಾಗುತ್ತದೆ ಎಂದು ಘೋಷಿಸಿದ್ದಾರೆ.