12 ಟ್ಯಾಟೂ.. ವಿಭಿನ್ನ ಅರ್ಥ.. ಕೊಹ್ಲಿ ಆಟಕ್ಕೆ ಟ್ಯಾಟೂನೇ ಶಕ್ತಿ! – ರನ್‌ ಮೆಷಿನ್ ವಿರಾಟ್ ಸಿಕ್ರೇಟ್‌ ರಿವೀಲ್‌‌

12 ಟ್ಯಾಟೂ.. ವಿಭಿನ್ನ ಅರ್ಥ.. ಕೊಹ್ಲಿ ಆಟಕ್ಕೆ ಟ್ಯಾಟೂನೇ ಶಕ್ತಿ! – ರನ್‌ ಮೆಷಿನ್ ವಿರಾಟ್ ಸಿಕ್ರೇಟ್‌ ರಿವೀಲ್‌‌

ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ತಂಡದ ಅದ್ಭುತವಾದ ಆಟಗಾರ. ಯಾವ ಸಿನಿಮಾ ನಟರಿಗಿಂತ ಕಡಿಮೆ ಇಲ್ಲದ ಹ್ಯಾಂಡ್ಸಮ್ ಲುಕ್ ಇವರಿಗಿದೆ. ಸದ್ಯ ಕಿಂಗ್‌ ಕೊಹ್ಲಿ ಐಪಿಎಲ್‌ ನಲ್ಲಿ ತಮ್ಮ ಬ್ಯಾಟಿಂಗ್‌ ಮೂಲಕ ಸದ್ದು ಮಾಡ್ತಿದ್ದಾರೆ. ಈ ಬಾರಿಯ ಟೂರ್ನಿಯಲ್ಲಿ ರನ್‌ ಮಳೆ ಹರಿಸಿ ಅಭಿಮಾನಿಗಳ ಮನಗೆದ್ದಿದ್ದಾರೆ. ತಮ್ಮ ನೆಚ್ಚಿನ ಆಟಗಾರರನ್ನ ಕಣ್ತುಂಬಿಕೊಳ್ಳಲು ಸಾವಿರಾರು ಮಂದಿ ಫ್ಯಾನ್ಸ್‌ ಸ್ಟೇಡಿಯಂನಲ್ಲಿ ಜಮಾಯಿಸುತ್ತಾರೆ. ಕೆಲವರು ಕೊಹ್ಲಿ ಆಟವನ್ನ ಕಣ್ತುಂಬಿಕೊಂಡ್ರೆ ಇನ್ನೂ ಕೆಲವರು ಕೊಹ್ಲಿ ಫಿಟ್‌ನೆಸ್‌, ಸ್ಟೈಲ್‌ ಗೆ ಮನಸೋತಿದ್ದಾರೆ. ಇದೀಗ ನೀವು ವಿರಾಟ್‌ ಟ್ಯಾಟೂ ಪ್ರೀತಿ ಬಗ್ಗೆ ತಿಳಿದುಕೊಳ್ಳಲೇ ಬೇಕು. ಅವ್ರು ಹಾಕಿಸಿಕೊಂಡಿರುವ ಪ್ರತಿಯೊಂದು ಟ್ಯಾಟೂ ಒಂದೊಂದು ಅರ್ಥವನ್ನ ಹೇಳ್ತವೆ.

ಇದನ್ನೂ ಓದಿ: ಹೊಸ ಇನ್ನಿಂಗ್ಸ್ ಆರಂಭಿಸಿದ ಶಿಖರ್ ಧವನ್- ಮೈ ಲವ್ ಪೋಸ್ಟ್ ಹಾಕಿ ಗಾಳಿ ಸುದ್ದಿಗೆ ತೆರೆ ಎಳೆದ ಗಬ್ಬರ್‌ ಸಿಂಗ್

ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್ ಶೈಲಿ ಮಾತ್ರವಲ್ಲ ಇಲ್ಲಿಯವರೆಗೆ ಅವರು ಕಾಪಾಡಿಕೊಂಡು ಬಂದ ಫಿಟ್ನೆಸ್ ಮತ್ತು ಆರೋಗ್ಯಕರ ಜೀವನಶೈಲಿ ಎಲ್ಲರನ್ನು ಆಕರ್ಷಿಸುವಂತದ್ದು. ನೋಡುಗರಿಗೆ ವಿರಾಟ್ ಕ್ರಿಕೆಟ್ ಆಟಗಾರ ಎನ್ನುವುದಕ್ಕಿಂತ ಮಾಡೆಲ್ ನ ರೀತಿ ಕಾಣುತ್ತಾರೆ.  ಅದರಲ್ಲೂ ವಿರಾಟ್‌ ಟ್ಯಾಟೂ ಪ್ರೀತಿ ಬಗ್ಗೆ ಹಲವರಿಗೆ ತಿಳಿದಿಲ್ಲ. ಕೊಹ್ಲಿ ದೇಹದಲ್ಲಿ ಹತ್ತಕ್ಕೂ ಹೆಚ್ಚು ಟ್ಯಾಟೂಗಳು ಇದೆ. ಪ್ರತಿಯೊಂದೂ ವಿಭಿನ್ನ ಅರ್ಥಗಳನ್ನು ಹೊಂದಿದೆ. ನ್ಯಾಷನಲ್ ಜಿಯಾಗ್ರಫಿಕ್‌ನ ಮೆಗಾ ಐಕಾನ್‌ಗಳ ಸರಣಿಯಲ್ಲಿ ವಿರಾಟ್ ತನ್ನ ಟ್ಯಾಟೂಗಳ ಅರ್ಥದ ಬಗ್ಗೆ ಹೇಳಿದ್ದರು.

ಮೊದಲನೆಯದ್ದು ಐ ಆಫ್ ಗಾಡ್ ಟ್ಯಾಟೂ.. ಇದನ್ನ ಕೊಹ್ಲಿ ದೇವರ ಕಣ್ಣು ಎಂದು  ಹೇಳಿದ್ದಾರೆ.. ಅಂದರೆ ಎಲ್ಲವನ್ನೂ ನೋಡುವ ಕಣ್ಣು ಎಂಬ ಅರ್ಥ ಈ ಹಚ್ಚೆಯಲ್ಲಿದೆ. ಹೀಗಾಗಿ ಈ ಟ್ಯಾಟುವನ್ನ ಕೊಹ್ಲಿ ಹಾಕಿಸಿಕೊಂಡಿದ್ದಾರೆ.

ಕೊಹ್ಲಿ ದೇಹದಲ್ಲಿರುವ ಇನ್ನೊಂದು ಟ್ಯಾಟೂ, ಜಪಾನೀಸ್ ಸಮುರಾಯ್.. ಸಮುರಾಯ್‌ಗಳು ಆಧುನಿಕ ಪೂರ್ವ ಜಪಾನ್‌ ಯೋಧರು. ನಿಷ್ಠೆ ಸ್ವಯಂ ಶಿಸ್ತು ಮತ್ತು ಗೌರವ, ನೈತಿಕ ನಡವಳಿಕೆಯ ಆಧಾರದ ಮೇಲೆ ಜೀವನ ನಡೆಸುತ್ತಾರೆ. ಇದರಲ್ಲಿರುವ ಕತ್ತಿಯಿಂದ ತಾನು ಶಕ್ತಿ ಮತ್ತು ಸ್ವಯಂ ಶಿಸ್ತು ಪಡೆಯುತ್ತೇನೆ ಎಂದು ಕೊಹ್ಲಿ ನಂಬಿದ್ದಾರೆ.

‘269’ ನಂಬರ್‌ ಟ್ಯಾಟೂ.. ಇದು ಕೊಹ್ಲಿಯ ಟೆಸ್ಟ್  ಕ್ರಿಕೆಟ್‌ನ ಜರ್ಸಿ ಸಂಖ್ಯೆ.. ಇದನ್ನೇ ಕೊಹ್ಲಿ ಹಚ್ಚೆ ಹಾಕಿಸಿದ್ದಾರೆ. “ಈ ಸಂಖ್ಯೆಗಳು ಯಾವಾಗಲೂ ನನ್ನೊಂದಿಗೆ ಇರ್ಬೇಕು. ಏಕೆಂದರೆ ಮುಂದೆ ನನ್ನ ಹೆಸರು ಚಾರ್ಟ್‌ನಲ್ಲಿ ಈ ಸಂಖ್ಯೆಯ ಮುಂದೆ ಇರುತ್ತದೆ. ಅವು ಯಾವಾಗಲೂ ವಿಶೇಷ ಸಂಖ್ಯೆಗಳು. ಹೀಗಾಗಿ ನಾನು ಯಾವಾಗಲೂ ಅವುಗಳನ್ನು ನನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದು ಕೊಹ್ಲಿ ಟ್ಯಾಟೂ ಕುರಿತಾಗಿ ಹೇಳಿದ್ದಾರೆ. ಅಷ್ಟೇ ಅಲ್ಲ ಕೊಹ್ಲಿ ಇನ್ನೊಂದು ಕ್ಯಾಪ್ ಸಂಖ್ಯೆ 175 ಅನ್ನು ಟ್ಯಾಟು ಹಾಕಿಸಿದ್ದಾರೆ.  ವಿರಾಟ್ ಶ್ರೀಲಂಕಾ ವಿರುದ್ಧ 2018 ರಲ್ಲಿ ತಮ್ಮ ODI ಚೊಚ್ಚಲ ಪಂದ್ಯವನ್ನು ಆಡಿದ್ರು.. ಅವರು ಆ ದಿನದಲ್ಲಿ ಆಡಿದ 175 ನೇ ಭಾರತೀಯ ಆಟಗಾರರಾಗಿದ್ದರು, ಅದಕ್ಕಾಗಿಯೇ ಈ ಸಂಖ್ಯೆ ಟ್ಯಾಟೂ ಹಾಕಿಸಿದ್ದಾರೆ.

ಇನ್ನು ಫ್ಯಾಮಿಲಿಗೆ ತುಂಬಾ ಇಂಪಾರ್ಟೆನ್ಸ್‌ ಕೊಡ್ತಾರೆ. ತಂದೆ ತಾಯಿಯನ್ನ ದೇವರ ರೀತಿ ಕಾಣ್ತಾರೆ.  ತಮ್ಮ ಜೀವನದುದ್ದಕ್ಕೂ ಪೋಷಕರ ಬೆಂಬಲ ಪಡೆದಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿ ತಂದೆ, ತಾಯಿರನ್ನೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಎಡಗೈಯಲ್ಲಿ ದೇವನಾಗರಿ ಲಿಪಿಯಲ್ಲಿ ತಾಯಿಯ ಹೆಸರನ್ನು ವಿರಾಟ್ ಹಚ್ಚೆ ಹಾಕಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ತಂದೆಯ ಹೆಸರಿನಲ್ಲೂ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಪ್ರೇಮ್‌  ಎಂದು ಕೈಯಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೊಹ್ಲಿ  ಕ್ರಿಕೆಟ್ ಬದುಕು ಆರಂಭಿಸುವ ಹಂತದಲ್ಲಿ ತಂದೆಯನ್ನ ಕಳೆದುಕೊಂಡಿದ್ದಾರೆ. ಹೀಗಾಗಿ ತಮ್ಮ ಪೋಷಕರಿಗೆ ಗೌರವ ಸಲ್ಲಿಸಲು ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಂಡಿದ್ದಾಗಿ ವಿರಾಟ್‌ ಈ ಹಿಂದೆ ಬಹಿರಂಗಪಡಿಸಿದ್ದಾರೆ. ಅವರ ಹೆಸರನ್ನು ತನ್ನೊಂದಿಗೆ ಶಾಶ್ವತವಾಗಿ ಕೊಂಡೊಯ್ಯಲು ಬಯಸುತ್ತೇನೆ ಎಂದು ಅವರು ಹೇಳಿದ್ದರು.

ವಿರಾಟ್ ತಮ್ಮ ಎಡಗೈಯಲ್ಲಿ ಶಿವನ ಹಚ್ಚಿ ಹಾಕಿಸಿಕೊಂಡಿದ್ದಾರೆ. ಕೊಹ್ಲಿ ಶಿವನ ಆರಾಧಕ. ಮಾನಸ ಸರೋವರದ ಬಳಿ ಇರುವ ಕೈಲಾಸ ಪರ್ವತದ ಮೇಲೆ ಶಿವ ಧ್ಯಾನ ಮಾಡುತ್ತಿರುವ ಅರ್ಥದಲ್ಲಿ ಈ ಟ್ಯಾಟೂ ಹಾಕಿಸಿದ್ದಾರೆ.  ಇಷ್ಟೇ ಅಲ್ಲದೆ ಕೊಹ್ಲಿ ತಮ್ಮ ರಾಶಿಚಕ್ರ ಚಿಹ್ನೆಯನ್ನು ಸಹ ಕೈಯಲ್ಲಿ ಹಾಕಿಸಿಕೊಂಡಿದ್ದಾರೆ.

ಇನ್ನು ವಿರಾಟ್‌ ಭುಜದ ಮೇಲೆ ಓಂ ಟ್ಯಾಟೂ ಹಾಕಿಸಿದ್ದಾರೆ.  ಇದು ಆಧ್ಯಾತ್ಮಿಕತೆಯ ಸಂಕೇತ ಎಂದು ಕೊಹ್ಲಿ ಹೇಳುತ್ತಾರೆ. ಈ ಹಚ್ಚೆ ಪ್ರಾಮಾಣಿಕತೆ, ನಂಬಿಕೆ ಮತ್ತು ಧೈರ್ಯದ ಸಂಕೇತವಾಗಿದೆ. ಹಿಂದೂ ಧರ್ಮದಲ್ಲಿ ಪವಿತ್ರ ಪದವಾಗಿರುವ ‘ಓಂ’ ಎಂಬುದು ದೈವಿಕ ಶಕ್ತಿಯ ಅಂಶವಾಗಿದೆ. ಅಂದ್ಹಾಗೆ ವಿರಾಟ್‌ ಕೊಹ್ಲಿ, ಟ್ಯಾಟೂಗಳನ್ನು ಕಸ್ಟಮೈಸ್ ಮಾಡಿಸುತ್ತಾರೆ. ಅವರ ಆಯ್ಕೆಯಂತೆ ಟ್ಯಾಟೂ ವಿನ್ಯಾಸ ಮಾಡಲಾಗಿದೆ. ವಿರಾಟ್ ಮುಂಬೈ ಸ್ಟುಡಿಯೋದಲ್ಲಿ ಹಾಗೇ ಬೆಂಗಳೂರಿನ ಸ್ಟುಡಿಯೋದಲ್ಲಿ ಟ್ಯಾಟೂ ಹಾಕಿಸಿಕೊಳ್ತಾರೆ. ಇದಕ್ಕಾಗಿ ಹೆಚ್ಚು ಸಮಯ ಸ್ಪೆಂಡ್‌ ಮಾಡ್ತಾರೆ ಅಂತಾ ಹೇಳಿದ್ದಾರೆ.

Shwetha M

Leave a Reply

Your email address will not be published. Required fields are marked *