ಚಿನ್‌ ತಪಾಕ್‌ ದಂ ದಂ.. ತಲೆ ತುಂಬಾ ಥಕಿಯಾ ಮಾಟಮಂತ್ರ – ನಿಮಗೆ ಛೋಟಾ ಭೀಮ್ ನೆನಪಾಗ್ತಾನಾ?

ಚಿನ್‌ ತಪಾಕ್‌ ದಂ ದಂ.. ತಲೆ ತುಂಬಾ ಥಕಿಯಾ ಮಾಟಮಂತ್ರ – ನಿಮಗೆ ಛೋಟಾ ಭೀಮ್ ನೆನಪಾಗ್ತಾನಾ?

ಚಿನ್‌ ತಪಾಕ್‌ ದಂ ದಂ.. ಈ ಸೋಶಿಯಲ್‌ ಮೀಡಿಯಾ ಓಪನ್‌ ಮಾಡಿದ್ರೆ ಸಾಕು..  ಈಗಂತೂ ಚಿನ್‌ ತಪಾಕ್‌ ದಂ.. ದಂ.. ಅನ್ನೋ ಡೈಲಾಗೇ ಬರುತ್ತೇ.. ಅಷ್ಟರ ಮಟ್ಟಿಗೆ ಇದೊಂದು ರೀಲ್ಸ್‌ ಟ್ರೆಂಡಿಗ್‌ನಲ್ಲಿದೆ. ಸೋಶಿಯಲ್‌ ಮೀಡಿಯಾ ಸಹವಾಸ ಸಾಕು.. ಸುಮ್ಮನೆ ಕೂರೋಣ ಅಂದ್ರು.. ಈ ಡೈಲಾಗ್‌ ತಲೆಯಲ್ಲಿ ಓಡೋಕೆ ಶುರುವಾಗುತ್ತೆ.. ಅಷ್ಟರ ಮಟ್ಟಿಗೆ ಈ ರೀಲ್ಸ್‌ ಟ್ರೆಂಡಿಂಗ್‌ನಲ್ಲಿದೆ.. ಇದೊಂದು ಕಾರ್ಟೂನ್‌ನ ಡೈಲಾಗ್..‌  ಈ ಡೈಲಾಗ್‌ ವೈರಲ್‌ ಆಗಲು ಕಾರಣ ಏನು? ಯಾವ ಕಾರ್ಟೂನ್‌ ಡೈಲಾಗ್‌ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  ಕೆರಳಿದ ಹೆಣ್ಣು ಹುಲಿ – ಅವಮಾನಕ್ಕೆ ಗೆಲುವಿನಲ್ಲೇ ತಕ್ಕ ಉತ್ತರ

ಈಗಂತೂ ಸೋಶಿಯಲ್‌ ಮೀಡಿಯಾ ಜಮಾನ..  ಯಾವುದು ಟ್ರೆಂಡಿಂಗ್‌ ನಲ್ಲಿರುತ್ತೆ, ಯಾವುದು ವೈರಲ್‌ ಆಗುತ್ತೆ ಅಂತಾ ಹೇಳೋದಿಕ್ಕೆ ಆಗಲ್ಲ.. ಒಂದು ಡೈಲಾಗ್ಸ್‌ ಅಥವಾ ದೃಶ್ಯಗಳು ಮಿಮ್‌ ಗಳಾಗಿ ಕ್ಷಣ ಮಾತ್ರದಲ್ಲಿ ವೈರಲ್‌ ಆಗುತ್ತವೆ. ಕಳೆದ ಕೆಲ ದಿನಗಳಿಂದ ಇನ್ಸ್ಟಾಗ್ರಾಮ್‌ ರೀಲ್ಸ್‌ ಫೀಡ್‌ ನಲ್ಲಿʼಚಿನ್‌ ತಪಕ್‌ ದಂ ದಂʼ ಎನ್ನುವ ಡೈಲಾಗ್ ಟ್ರೆಂಡ್‌ ನಲ್ಲಿದೆ. ಯಾವ ರೀಲ್ಸ್‌ ನೋಡಿದರೂ, ಹತ್ತರಲ್ಲಿ ಕನಿಷ್ಠ 7 ರಿಂದ 8 ರೀಲ್ಸ್‌ ನಲ್ಲಿ ಈ ಡೈಲಾಗ್‌ ಬರುತ್ತೆ.  ಅನೇಕರಿಗೆ ಈ ಡೈಲಾಗ್‌ ಎಲ್ಲಿಯದು, ಸಿನಿಮಾದ್ದಾ ಅಥವಾ ಹಾಡಿನದ್ದಾಅನ್ನೋದು ಗೊತ್ತಿರ್ಲಿಲ್ಲ.. ಈ ಡೈಲಾಗ್ ಕಾರ್ಟೂನ್‌ನಲ್ಲಿ ಬರೋ ಸಣ್ಣ ತುಣುಕು..

ಸಣ್ಣ ವಯಸ್ಸಿನಲ್ಲಿ ನಾವೆಲ್ಲ ನೋಡುತ್ತಿದ್ದ ಜನಪ್ರಿಯ ಕಾರ್ಟೊನ್‌ ಶೋ ʼಛೋಟಾ ಭೀಮ್‌ʼ ನಲ್ಲಿ ಬರುವ ಕ್ಯಾರೆಕ್ಟರ್‌ ವೊಂದರ ಡೈಲಾಗ್‌ ಇದು. ʼಛೋಟಾ ಭೀಮ್‌ʼ ನಲ್ಲಿ ಬರುವ ಖಳನಾಯಕ ʼಥಕಿಯಾʼ ಎನ್ನುವಾತ ಮಾಟಮಂತ್ರ ಹಾಗೂ ಮ್ಯಾಜಿಕ್‌ ಗಳನ್ನು ಮಾಡುವಾಗ ಆತ ಹೇಳುವ ಡೈಲಾಗ್‌ ʼಚಿನ್‌ ತಪಕ್‌ ದಂ ದಂʼ. ಇದು ಆ ಪಾತ್ರದ ಪ್ರಧಾನ ಡೈಲಾಗ್‌ ಆಗಿದೆ..

ಇತ್ತೀಚೆಗೆ ʼಛೋಟಾ ಭೀಮ್‌ʼ ಕಾರ್ಯಕ್ರಮ ನೋಡುತ್ತಿದ್ದ ಅಭಿಮಾನಿಯೊಬ್ಬರು ʼಛೋಟಾ ಭೀಮ್‌ – ಓಲ್ಡ್‌ ಎನಿಮೀಸ್‌, ಸೀಸನ್‌ -4 ನ 47ನೇ ಎಪಿಸೋಡ್‌ ನ ಸಣ್ಣ ತುಣುಕೊಂದನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಇದೀಗ ಥಕಿಯಾ‌ ಪಾತ್ರದ ಈ ಡೈಲಾಗ್  ಸಿಕ್ಕಾಪಟ್ಟೆ ವೈರಲ್‌ ಆಗಿದೆ..

ಥಕಿಯಾ ಎಂಬ ಮಾಂತ್ರಿಕ ಧೋಲಕ್‌ಪುರದಲ್ಲಿ ಮಣ್ಣಿನ ಸೈನಿಕರ ಪಡೆಯನ್ನು ನಿರ್ಮಿಸಿ ಅದರ ಮೂಲಕ ದಾಳಿಯನ್ನು ಮಾಡಿಸುತ್ತಾನೆ. ಈ ಸೈನ್ಯ ನಿರ್ಮಾಣ ಹಾಗೂ ಇತರೆ ಮ್ಯಾಜಿಕ್‌ ಗಳನ್ನು ಮಾಡುವಾಗ ಥಕಿಯಾ ʼಚಿನ್‌ ತಪಕ್‌ ದಂ ದಂʼ ಹೇಳುವುದನ್ನು ಈ ಎಪಿಸೋಡ್‌ ನಲ್ಲಿ ನೋಡಬಹುದು.

ಈ ಡೈಲಾಗ್‌ ಈಗ  ಸೋಶಿಯಲ್‌ ಮೀಡಿಯಾದಲ್ಲಿ ಮಿಮ್ಸ್‌ ಗಳಿಗೆ ಆಹಾರವಾಗಿದೆ. ನೂರಾರು ರೀಲ್ಸ್‌ ಗಳು ʼಚಿನ್‌ ತಪಕ್‌ ದಂ ದಂʼ ಎನ್ನುವ ಡೈಲಾಗ್‌ ನೊಂದಿಗೆ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ʼಛೋಟಾ ಭೀಮ್ʼ ಒಂದು ಕಾರ್ಟೂನ್‌ ಶೋ ಆಗಿದ್ದು, 2019ರಲ್ಲಿ ನೆಟ್‌ ಪ್ಲಿಕ್ಸ್‌ ನಲ್ಲಿ  ಬಂದ ಬಳಿಕ ಈ ಕಾರ್ಯಕ್ರಮ 27 ಮಿಲಿಯನ್‌ ಗೂ ಹೆಚ್ಚಿನ ವೀಕ್ಷಣೆ ಕಂಡಿದೆ. ಇನ್ನು ಕನ್ನಡ ವರ್ಷನ್‌ ಡೈಲಾಗ್‌ ಕೂಡ ಸಿಕ್ಕಾಪಟ್ಟೆ ವೈರಲ್‌ ಆಗಿದೆ.. ಸಟ್‌ ಪಟ್‌ ಡುಡುಂ ಅಂತಾ ಇದೇ ಕಾರ್ಟೂನ್‌ ನ ತುಣುಕನ್ನ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಮಾಡಿದ್ದಾರೆ.

ಇದೀಗ ಇನ್ಸ್‌ ಸ್ಟಾಗ್ರಾಂ ಓಪನ್‌ ಮಾಡಿದ್ರೆ ಇದೇ ರೀಲ್ಸ್‌ ಬರ್ತಾ ಇದೆ. ಇದ್ರ ಸಹವಾಸವೇ ಸಾಕು ಅಂತಾ ಸುಮ್ಮನೆ ಕೂತ್ರೂ… ಅನೇಕರ ಮನದಲ್ಲಿ ಚಿನ್‌ ತಪಾಕ್‌ ದಂ ದಂ.. ಅನ್ನೋದೇ ಬರುತ್ತೆ.. ಇನ್ನು ಈ ಮೀಮ್ಸ್‌ ಪೇಜ್‌ಗಳು ಮಹಾತ್ಮ ಗಾಂಧೀಜಿಯನ್ನ ಕೂಡ ಬಿಟ್ಟಿಲ್ಲ.. ಗಾಂಧೀಜಿ ಫೋಟೋ ವನ್ನ ಎಡಿಟ್‌ ಮಾಡಿ ವೈರಲ್‌ ಮಾಡಿದ್ದಾರೆ.. ಸೋಶಿಯಲ್‌ ಮೀಡಿಯಾದಲ್ಲಿ ಯಾವುದು ಬೇಕಾದ್ರು ಯಾವಾಗ ಬೇಕಾದ್ರು ಟ್ರೆಂಡ್‌ ಆಗುತ್ತೆ ಅನ್ನೋದಕ್ಕೆ ಇದೇ ಸಾಕ್ಷಿ..

Shwetha M