ಮೀನು ಬಾಯಿಗೆ ಸಿಕ್ಕರೂ ತಿನ್ನದೇ ಮತ್ತೆ ನೀರಿಗೆ ಬಿಟ್ಟ ಬೆಳ್ಳಕ್ಕಿ, ಕಾಗೆ! – ಪಕ್ಷಿಗಳ ಔದಾರ್ಯಕ್ಕೆ ವ್ಯಾಪಕ ಮೆಚ್ಚಗೆ
ಪ್ರಾಣಿ, ಪಕ್ಷಿಗಳು ಬೇಟೆಯಾಡಿ ಜೀವನ ಸಾಗಿಸುವುದು ಸಾಮಾನ್ಯ. ತಮ್ಮ ಆಹಾರವನ್ನು ತಾವೇ ಹುಡುಕುತ್ತವೆ. ಹುಳ, ಕೀಟಗಳು ಪಕ್ಷಿಗಳ ಕಣ್ಣಿಗೆ ಬಿದ್ರೆ ಸಾಕು ಅವುಗಳನ್ನು ಬೇಟೆಯಾಡಿ ತಿನ್ನುವವರೆಗೂ ಬಿಡುವುದಿಲ್ಲ.. ಆದ್ರೆ ಇಲ್ಲೊಂದು ಅಚ್ಚರಿಯ ಘಟನೆ ನಡೆದುಹೋಗಿದೆ. ಮೀನನ್ನು ತಿಂದು ಬದುಕುವ ಬೆಳ್ಳಕ್ಕಿ ಹಾಗೂ ಕಾಗೆ ಮೀನಿನ ಪ್ರಾಣ ಉಳಿಸಿದೆ.
ಇದನ್ನೂ ಓದಿ: ಆರೆಂಜ್ ಆರ್ಮಿಗೆ ಸೋಲುಣಿಸುತ್ತಾ ಆರ್ಸಿಬಿ? – ಆರ್ಸಿಬಿ ಫೇಲ್ಯೂರ್ಗೆ ಆ ಇಬ್ಬರೇ ಕಾರಣನಾ..?
ಸಾಮಾನ್ಯವಾಗಿ ಮನುಷ್ಯರಿಗಿಂತ ಪ್ರಾಣಿ ಪಕ್ಷಿಗಳೇ ಗುಣದಲಿ ಮೇಲು ಎಂದು ಹೇಳಲಾಗುತ್ತದೆ. ಹೌದು ಪಕ್ಷಿ ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲಿ ಒಳ್ಳೆಯ ಗುಣ, ಮಾನವೀಯತೆ, ಸಹಾಯ ಮನೋಭಾವ ತುಸು ಕಡಿಮೆಯೇ ಇದೆ. ಹೀಗೆ ಪ್ರಾಣಿಗಳ ಒಳ್ಳೆಯತನ, ಮನುಷ್ಯರ ಕೆಟ್ಟತನವನ್ನು ನೋಡಿದಾಗ ನಿಜಕ್ಕೂ ಮೂಕ ಜೀವಿಗಳೇ ಗುಣದಲ್ಲಿ ಮೇಲು ಅಂತ ಭಾಸವಾಗುತ್ತದೆ. ಇದೀಗ ಇಂತಹದ್ದೇ ವಿಡಿಯೋವೊಂದು ವೈರಲ್ ಆಗಿದೆ. ಇಲ್ಲೊಂದು ಕಡೆ ಬೆಳ್ಳಕ್ಕಿ ಹಾಗೂ ಕಾಗೆ ಮೀನಿನ ಪ್ರಾಣ ಉಳಿಸಿದೆ. ಇದರ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋವನ್ನು ಡಿಸಿ ಸಂಜಯ್ ಕುಮಾರ್ (@dc_sanjay_jas) ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಸಮಯ ಉತ್ತಮವಾಗಿದ್ದಾಗ, ನಿಮ್ಮ ಬದ್ಧ ವೈರಿಗಳೂ ಸಹ ನಿಮ್ಮ ಸಹಾಯಕರಾಗುತ್ತಾರೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ವೈರಲ್ ವಿಡಿಯೋದಲ್ಲಿ ನೀರಿನಿಂದ ಹೊರ ಬಂದಂತಹ ಜೀವಂತ ಮೀನನ್ನು ಕಾಗೆಯೊಂದು ತಿನ್ನಲು ಪ್ರಯತ್ನ ಪಡುತ್ತಿರುವ ದೃಶ್ಯವನ್ನು ಕಾಣಬಹುದು. ಅಲ್ಲಿಗೆ ಬಂದಂತಹ ಬೆಳ್ಳಕ್ಕಿಯೊಂದು ಕಾಗೆಯನ್ನು ಓಡಿಸಿ, ಪಾಪ ಮೀನಿನ ಜೀವ ಉಳಿದರೆ ಸಾಕಪ್ಪಾ ಎನ್ನುತ್ತಾ, ಮೀನನ್ನು ಬಾಯಲ್ಲಿ ಕಚ್ಚಿಕೊಂಡು ಹೋಗಿ ನೀರಲ್ಲಿ ಬಿಟ್ಟು ಬಂದಿದೆ.
ವೈರಲ್ ಆಗ ವಿಡಿಯೋ ಇದೀಗ ವ್ಯಾಪಕವಾಗಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಸಹಜವಾಗಿಯೇ ಹಕ್ಕಿಗಳ ಈ ಬುದ್ಧಿವಂತಿಕೆ, ಔದಾರ್ಯವನ್ನು ಕಂಡು ನೆಟ್ಟಿಗರು ಅಚ್ಚರಿಪಟ್ಟಿದ್ದಾರೆ. ಪ್ರಾಣಿ, ಪಕ್ಷಿಗಳಿಂದಲೂ ನಾವು ಕಲಿಯಬೇಕಾದ ಅನೇಕ ವಿಷಯಗಳಿವೆ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.