ಕಳ್ಳತನವಾಗಿದ್ದ ಬಸ್ ಕೊನೆಗೂ ಪತ್ತೆ – ಅಷ್ಟಕ್ಕೂ ‘ಸರ್ಕಾರಿ ಬಸ್’ ಕದ್ದವರು ಯಾರು..?

ಕಳ್ಳತನವಾಗಿದ್ದ ಬಸ್ ಕೊನೆಗೂ ಪತ್ತೆ – ಅಷ್ಟಕ್ಕೂ ‘ಸರ್ಕಾರಿ ಬಸ್’ ಕದ್ದವರು ಯಾರು..?

ಬಸ್ ಬಂತು ಬಸ್. ಗೌರ್ಮೆಂಟ್ ಬಸ್ ಅಂತಾ ಅಲ್ಲಿನ ತಾಂಡಾದ ನಿವಾಸಿಗಳು ಫುಲ್ ಖುಷ್ ಆಗಿದ್ರು. ಸರ್ಕಾರಿ ಬಸ್​ನಲ್ಲಿ ಜುಂ ಅಂತಾ ಪ್ರಯಾಣ ಮಾಡಬಹುದು ಎಂದು ಸಂತಸ ಪಡ್ತಿದ್ರು. ಆದ್ರೆ ತಾಂಡಾಗೆ ಬಸ್ ಬಂದು ಇನ್ನೂ ಅರ್ಧ ದಿನ ಕೂಡ ಕಳೆದಿರಲಿಲ್ಲ. ಅಷ್ಟರಲ್ಲೇ ಪೊಲೀಸರ ಟೀಂ ಎಂಟ್ರಿಯಾಗಿತ್ತು. ಆಗಲೇ ತಾಂಡಾದ ಜನರಿಗೆ ಗೊತ್ತಾಗಿದ್ದು ಇದು ಬಂದಿರೋ ಬಸ್ ಅಲ್ಲ. ಕದ್ದಿರುವ ಬಸ್ ಅನ್ನೋದು.

ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿರುವ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್​ಟಿಸಿ ಬಸ್ಸನ್ನು ಕಳ್ಳತನ ಮಾಡಲಾಗಿತ್ತು. ಇವತ್ತು ಮುಂಜಾನೆ 3.30ರ ಸಮಯದಲ್ಲಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಕೆಆರ್​ಟಿಸಿಗೆ ಸೇರಿದ್ದ ಬಸ್ಸನ್ನು ಕಳ್ಳರು ಕದ್ದೊಯ್ದಿದ್ದರು. ಘಟನೆ ನಡೆದ 13 ಗಂಟೆಗಳಲ್ಲೇ ಚಿಂಚೋಳಿ ಪೊಲೀಸರು ತೆಲಂಗಾಣ ರಾಜ್ಯದ ತಾಂಡೂರು ತಾಲೂಕಿನ ಭೂ ಕೈಲಾಸ ತಾಂಡಾದಲ್ಲಿ ಬಸ್​ನ್ನ ಪತ್ತೆ ಹಚ್ಚಿದ್ದಾರೆ. ಸದ್ಯ ಬಸ್​ನ್ನು ಪತ್ತೆ ಮಾಡಿರುವ ಚಿಂಚೋಳಿ ಪೊಲೀಸರು, ಇದೀಗ ಕಳ್ಳತನ ಮಾಡಿದವರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

ಇದನ್ನೂ ಓದಿ : ಕೆಎಸ್ ಆರ್ ಟಿಸಿ ಪ್ರಯಾಣಿಕರಿಗೆ ‘ಐಷಾರಾಮಿ’ ಗಿಫ್ಟ್ –  ರಸ್ತೆಗಿಳಿದವು ‘ಅಂಬಾರಿ ಉತ್ಸವ್’ ಬಸ್​ಗಳು..!  

ಬೀದರ್ ಡಿಪೋ ನಂಬರ್ 2 ಕ್ಕೆ ಬಸ್ ನಿನ್ನೆ ಬೀದರ್​ನಿಂದ ಚಿಂಚೋಳಿಗೆ ಬಂದಿತ್ತು. ಪ್ರತಿನಿತ್ಯ ಚಿಂಚೋಳಿಯಿಂದ ಮನ್ನಾಎಖ್ಖೆಳ್ಳಿ ಮಾರ್ಗವಾಗಿ ಬೀದರ್ ಮಾರ್ಗದಲ್ಲಿ ಈ ಬಸ್ ಸಂಚರಿಸುತ್ತಿತ್ತು. ಪ್ರತಿನಿತ್ಯ ಚಿಂಚೋಳಿಯಲ್ಲಿ ಹಾಲ್ಟ್ ಮಾಡಿ, ಮುಂಜಾನೆ ಬಸ್​ನ್ನು ಚಾಲಕ ಮತ್ತು ನಿರ್ವಾಹಕರು ತೆಗೆದುಕೊಂಡು ಹೋಗುತ್ತಾರೆ. ನಿನ್ನೆ ರಾತ್ರಿ ಬೀದರ್​ನಿಂದ ತಂದಿದ್ದ ಬಸ್​ನ್ನು ಚಾಲಕ ಅಯ್ಯುಬ್ ಖಾನ್ ಮತ್ತು ಈರಪ್ಪ, ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿ, ಡಿಪೋದಲ್ಲಿ ಮಲಗಿದ್ದರು. ಇಂದು ಮುಂಜಾನೆ ಎಂದಿನಂತೆ, ಬಸ್​ನ್ನು ತಗೆದುಕೊಂಡು ಮತ್ತೆ ಬೀದರ್​ಗೆ ಹೋಗಲು ಮುಂದಾದಾಗ ನಿಲ್ದಾಣದಲ್ಲಿದ್ದ ಬಸ್ ನಾಪತ್ತೆಯಾಗಿತ್ತು. ಕೂಡಲೇ ಸಿಸಿಟಿವಿ ದೃಶ್ಯ ಪರಿಶೀಲಿಸಿದಾಗ ಕಳ್ಳರು ಕದ್ದೊಯ್ದಿರುವುದು ಪತ್ತೆಯಾಗಿತ್ತು.

ಬಸ್ ನಿಲ್ದಾಣಕ್ಕೆ ಪ್ರತಿನಿತ್ಯ ಸಾವಿರಾರು ಜನರು ಬರ್ತಾರೆ. ಇದನ್ನೇ ದುರುಪಯೋಗ ಮಾಡಿಕೊಂಡ ಕಿಲಾಡಿಗಳು, ನಕಲಿ ಕೀ ಬಳಸಿ, ಬಸನ್ನು ಕದ್ದೊಯ್ದಿದ್ದರು. ಚಿಂಚೋಳಿಯಿಂದ ತಾಂಡೂರ ಮಾರ್ಗವಾಗಿ ತೆಲೆಂಗಾಣ ರಾಜ್ಯದ ಕಡೆ ತಗೆದುಕೊಂಡು ಹೋಗಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು, ಇದೀಗ ಘಟನೆ ನಡೆದ 13 ಗಂಟೆಯೊಳಗೆ ಬಸ್​ನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದ್ರೆ ಖದೀಮರು ಮಾತ್ರ ಇನ್ನೂ ಪತ್ತೆಯಾಗಿಲ್ಲ.

suddiyaana