ಮತ್ಸ್ಯಾಗಾರ ಹೋಯ್ತು.. ಪೆಂಗ್ವಿನ್ ಪಾರ್ಕ್ ಬಂತು – ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗಾಗಿ ಸರ್ಕಾರದ ಮಹತ್ವದ ಯೋಜನೆ

ಮತ್ಸ್ಯಾಗಾರ ಹೋಯ್ತು.. ಪೆಂಗ್ವಿನ್ ಪಾರ್ಕ್ ಬಂತು – ಮೈಸೂರು ಮೃಗಾಲಯದಲ್ಲಿ ಪ್ರವಾಸಿಗರಿಗಾಗಿ ಸರ್ಕಾರದ ಮಹತ್ವದ ಯೋಜನೆ

ಮೈಸೂರು ಮೃಗಾಲಯ. ಪ್ರವಾಸಿಗರ ಫೆವರೇಟ್ ಪ್ಲೇಸ್. ಇದೀಗ ಮೈಸೂರು ಮೃಗಾಲಯ ಪ್ರವಾಸಿಗರಿಗೆ ಮತ್ತಷ್ಟು ಆಕರ್ಷಣೆಯ ಕೇಂದ್ರಬಿಂದು ಆಗಲಿದೆ. ಪೆಂಗ್ವಿನ್ ಪಾರ್ಕ್ ನಿರ್ಮಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್‌ – ಇನ್ಮುಂದೆ ಪ್ರಯಾಣದ ವೇಳೆ ನೆಟ್‌ವರ್ಕ್‌ ಕಿರಿಕಿರಿ ಇರಲ್ಲ!

ಪ್ರವಾಸಿಗರನ್ನು ಆಕರ್ಷಿಸಲು ಮೈಸೂರು ಮೃಗಾಲಯದಲ್ಲಿ ಯೋಜನೆಯೊಂದು ರೂಪುಗೊಂಡಿದೆ. ಮೈಸೂರು ಮೃಗಾಲಯದ ವ್ಯಾಪ್ತಿಯ ಕಾರಂಜಿ ಕೆರೆಯಲ್ಲಿ ಮತ್ಸ್ಯಾಗಾರ ಬದಲಿಗೆ ಪೆಂಗ್ವಿನ್ ಪಾರ್ಕ್  ನಿರ್ಮಿಸಲು ರಾಜ್ಯ ಸರಕಾರ ಮುಂದಾಗಿದೆ. ರಾಜ್ಯದಲ್ಲಿ ಎಲ್ಲಿಯೂ ಪೆಂಗ್ವಿನ್ ಪಾರ್ಕ್ ಇಲ್ಲ. ಹೀಗಾಗಿ ನುರಿತ ತಜ್ಞರು ಪೆಂಗ್ವಿನ್ ಪಾರ್ಕ್ ಬಗ್ಗೆ ಪರಿಶೀಲಿಸಿ ಡಿಪಿಆರ್ ಸಿದ್ಧಪಡಿಸಲಿದ್ದಾರೆ. ತಾಂತ್ರಿಕವಾಗಿ ಏನೆಲ್ಲಾ ಮಾಡಬೇಕೆಂಬ ವರದಿಯನ್ನೂ ನೀಡಲಿದ್ದಾರೆ. ಹೊರ ದೇಶಗಳಿಂದ ಪೆಂಗ್ವಿನ್‍ಗಳನ್ನು ತರಿಸಿಕೊಳ್ಳಲಾಗುವುದು. ಝೂನಲ್ಲಿ ಪೆಂಗ್ವಿನ್ ಇಲ್ಲದ್ದರಿಂದ ಅವುಗಳನ್ನು ತಂದರೆ ಮೃಗಾಲಯದ ಆಕರ್ಷಣೆ ಮತ್ತಷ್ಟು ಹೆಚ್ಚಲಿದ್ದು, ಮೃಗಾಲಯಕ್ಕೆ ಮತ್ತಷ್ಟು ಪ್ರವಾಸಿಗರನ್ನು ಆಕರ್ಷಣೆ ಮಾಡುವುದಕ್ಕೆ ಇದು ಸಹಾಯ ಮಾಡುತ್ತದೆ.

ಇನ್ನು ಮೈಸೂರು ಮೃಗಾಲಯದಲ್ಲಿ ಮತ್ಸ್ಯಗಾರ ನಿರ್ಮಾಣ ಮಾಡಬೇಕು ಎನ್ನುವುದು ಇಂದು, ನಿನ್ನಯದಲ್ಲ. ಸುಮಾರು 14 ವರ್ಷಗಳ ಹಿಂದೆಯೇ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. 2011-12 ರಲ್ಲಿಶುರುವಾದ ಈ ಯೋಜನೆ ಹಿನ್ನೆಲೆಯಲ್ಲಿ ಮೈಸೂರು ಮಹಾನಗರ ಪಾಲಿಕೆ ವತಿಯಿಂದ 4.26 ಕೋಟಿ ರೂ. ವೆಚ್ಚದಲ್ಲಿಒಂದು ಕಟ್ಟಡ ಸಹ ನಿರ್ಮಾಣವಾಗಿತ್ತು. ಈಗಲೂ ಆ ಕಟ್ಟಡವಿದೆ. ಅದನ್ನು 2018ರಲ್ಲಿ ಮೈಸೂರು ಮೃಗಾಲಯದ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಲಾಗಿದೆ. ಆದರೆ, ಆ ನಂತರ ಕಾಮಗಾರಿ ಮಾತ್ರ ಮುಂದುವರಿದಿಲ್ಲ. ಈಗ ಈ ಯೋಜನೆಯನ್ನು ಸರ್ಕಾರ ಕೈಬಿಟ್ಟಿದೆ. ಮೈಸೂರಿನ ಶ್ರೀ ಚಾಮರಾಜೇಂದ್ರ ಮೃಗಾಲಯ ಹಾಗೂ ಕಾರಂಜಿಕೆರೆ ಮಧ್ಯ ಭಾಗದಲ್ಲಿ ಸಾರ್ವಜನಿಕ, ಖಾಸಗಿ ಪಾಲುದಾರಿಕೆ ಮಾದರಿಯಲ್ಲಿ ಅಕ್ವೆರಿಯಂ ,ಮತ್ಸ್ಯಾಗಾರ ನಿರ್ಮಿಸಲು ವಿಸ್ಕತ ಯೋಜನಾ ವರದಿ ಸಿದ್ಧಪಡಿಸಲು ಈ ಹಿಂದೆ ಆಲೋಚಿಸಲಾಗಿತ್ತು. ಆದರೆ ಮತ್ಸ್ಯಾಗಾರ ಮಾಡುವ ಜಾಗದಲ್ಲಿ ರಸ್ತೆ ಹಾದು ಹೋಗಿದೆ. ಅಲ್ಲದೆ, ಕಟ್ಟಡವನ್ನು ಒಡೆದು ಕಾಮಗಾರಿ ನಡೆಸಬೇಕು. ಈ ಹಿನ್ನೆಲೆಯಲ್ಲಿ ಅಕ್ವೇರಿಯಂ ಮಾಡಲು ಸಾಧ್ಯವಿಲ್ಲ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ಮತ್ಸ್ಯಾಗಾರದ ಬದಲು ಪೆಂಗ್ವಿನ್ ಪಾರ್ಕ್ ಮಾಡಲು ರಾಜ್ಯ ಅರಣ್ಯ ಇಲಾಖೆ ಸಚಿವ ಈಶ್ವರ್ ಖಂಡ್ರೆ ಸೂಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮೃಗಾಲಯ ಆಡಳಿತ ಮಂಡಳಿ ಡಿಪಿಆರ್ ತಯಾರಿಸಲು ತೀರ್ಮಾನಿಸಿದೆ.

Sulekha