ಗ್ಯಾರಂಟಿ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ! – ಮಹತ್ವದ ನಿರ್ಧಾರಕ್ಕೆ ಹೈಕಮಾಂಡ್‌ ಅಸ್ತು?

ಗ್ಯಾರಂಟಿ ಪರಿಷ್ಕರಣೆಗೆ ಮುಂದಾದ ರಾಜ್ಯ ಸರ್ಕಾರ! – ಮಹತ್ವದ ನಿರ್ಧಾರಕ್ಕೆ ಹೈಕಮಾಂಡ್‌ ಅಸ್ತು?

ಕಳೆದ ವಿಧಾನಸಭೆ ವೇಳೆ ರಾಜ್ಯ ಕಾಂಗ್ರೆಸ್‌ ಚುನಾವಣೆಯಲ್ಲಿ ಗೆಲ್ಲಲು ಗ್ಯಾರಂಟಿ ಅಸ್ತ್ರ ಪ್ರಯೋಗ ಮಾಡಿ ಗೆದ್ದು ಬೀಗಿತ್ತು. ಇದೀಗ ಗ್ಯಾರಂಟಿ ಯೋಜನೆಯಿಂದಲೇ ರಾಜ್ಯ ಸರ್ಕಾರ ಆರ್ಥಿಕ ಹೊರೆ ಹೆಚ್ಚಾಗಿದೆ. ಹೀಗಾಗಿ ಗ್ಯಾರಂಟಿ ಯೋಜನೆಗಳಲ್ಲಿ ಮಾರ್ಪಾಡು ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಇದನ್ನೂ ಓದಿ: ಅಡಕತ್ತರಿಯಲ್ಲಿ ಸಿಪಿ ಯೋಗೇಶ್ವರ್‌ ! – ಸಿಪಿವೈ ಭವಿಷ್ಯ ಹೆಚ್‌ಡಿಕೆ ಕೈಯಲ್ಲಿ?

ಕಾಂಗ್ರೆಸ್‌ನ ಐದು ಗ್ಯಾರಂಟಿ ವಿರುದ್ಧ ಪಕ್ಷದಲ್ಲಿ ಅಸಮಧಾನ ಎದ್ದಿದೆ. ಕೆಲ ಸಚಿವರು ಐದು ಗ್ಯಾರಂಟಿಗಳನ್ನು ನಿಲ್ಲಿಸುವಂತೆ ಒತ್ತಾಯಿಸುತ್ತಿದ್ದಾರೆ. ಹೀಗಾಗಿ ಐದು ಗ್ಯಾರಂಟಿಗಳನ್ನು ಮಾರ್ಪಾಡು ಮಾಡಲು ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ. ಅರ್ಹ ಬಡವರಿಗೆ ಮಾತ್ರ ಗ್ಯಾರಂಟಿ ಯೋಜನೆ ಮೀಸಲಿಡಲು ಸರ್ಕಾರ ಗಂಭೀರ ಕ್ರಮಕ್ಕೆ ಮುಂದಾಗಿದೆ. ಜೊತೆಗೆ ವಾರ್ಷಿಕ 20 ಸಾವಿರ ಕೋಟಿ ರೂ. ಉಳಿತಾಯದ ಲೆಕ್ಕಾಚಾರವನ್ನೂ ಸರ್ಕಾರ ಇಟ್ಟುಕೊಂಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಸಂಪುಟದ ಕೆಲ ಸಚಿವರು ಹಾಗೂ ಕಾಂಗ್ರೆಸ್‌ ಹೈಕಮಾಂಡ್‌ ನಾಯಕರು ಸಹ ಗ್ಯಾರಂಟಿ ಪರಿಷ್ಕರಣೆಗೆ ಒಲವು ತೋರಿದ್ದಾರೆ. ವಾರ್ಷಿಕ 20,000 ಕೋಟಿ ರೂ. ಉಳಿತಾಯ ಲೆಕ್ಕಾಚಾರ ಹಾಕಿಕೊಂಡಿರುವುದರಿಂದ ಬಿಪಿಎಲ್‌ ಮಾನದಂಡ ನಿಗದಿಪಡಿಸುವ ಚಿಂತನೆಯೂ ಸಹ ಸರ್ಕಾರದ ಮುಂದಿಟ್ಟುಕೊಂಡಿದೆ ಎಂದು ಹೇಳಲಾಗಿದೆ. ಈ ಸಂಬಂಧ ಆಗಸ್ಟ್‌ 22ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ಕರೆದಿದ್ದಾರೆ. ಇದೇ ಸಭೆಯಲ್ಲಿ ಗ್ಯಾರಂಟಿಗಳ ಪರಿಷ್ಕರಣೆ ಸಂಬಂಧವೂ ಚರ್ಚೆ ನಡೆಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Shwetha M

Leave a Reply

Your email address will not be published. Required fields are marked *