ವೋಟ್‌ ಮಾಡಿ.. ಫೋಟೋ ಕ್ಲಿಕ್ ಮಾಡಿ.. – 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ!

ವೋಟ್‌ ಮಾಡಿ.. ಫೋಟೋ ಕ್ಲಿಕ್ ಮಾಡಿ.. – 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ!

ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನ ಇಂದು ( ಶುಕ್ರವಾರ) ಆರಂಭವಾಗಿದೆ. ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಇದೀಗ ಮತದಾರರಿಗೆ ರಾಜ್ಯ ಚುನಾವಣಾ ಆಯೋಗ ಫೋಟೋಗ್ರಾಫಿ ಸ್ಪರ್ಧೆ ಆಯೋಜಿಸಿದೆ. ಈ ಸ್ಪರ್ಧೆಯಲ್ಲಿ ಗೆದ್ದರೆ ದೊಡ್ಡ ಮೊತ್ತದ ನಗದು ಬಹುಮಾನ ಸಿಗಲಿದೆ.

ಇನ್ನೂ ಓದಿ: ಪ್ರಧಾನಿ ಮೋದಿ, ರಾಹುಲ್‌ ಗಾಂಧಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ – EC ಯಿಂದ ನಾಯಕರಿಗೆ ನೋಟಿಸ್‌

ರಾಜ್ಯದಲ್ಲಿ ಸುಮಾರು 2,88,19,342 ಮತದಾರರು ಮತದಾನ ಮಾಡುತ್ತಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡುತ್ತಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸುತ್ತಿದ್ದಾರೆ. ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮತದಾನ ವಿಷಯವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ.

ಎಲೆಕ್ಷನ್​ ದಿನ ವಿಶಿಷ್ಟ ಫೋಟೋದಲ್ಲಿ ಸೆರೆಹಿಡಿದರೆ ನಗದು ಬಹುಮಾನ ನೀಡುವುದಾಗಿ ರಾಜ್ಯ ಚುನಾವನಾ ಆಯೋಗ ಘೋಷಿಸಿದೆ. ಅಷ್ಟು ಮಾತ್ರವಲ್ಲದೇ ಅತ್ಯುತ್ತಮ ಫೋಟೋ ಕ್ಲಿಕ್ಕಿಸಿದರೆ ಪ್ರಮಾಣ ಪತ್ರದ ಜೊತೆಗೆ ನಗದನ್ನು ನೀಡುವುದಾಗಿ ತಿಳಿಸಿದೆ.

ಫೋಟೋ ಕ್ಲಿಕ್ಕಿಸಿದ ಬಳಿಕ ಛಾಯಾಗ್ರಾಹಕರ ವಿವರಗಳನ್ನು Mediacellceokarnataka@gmail.com ಸಲ್ಲಿಸಬೇಕಿದೆ. ಮೇ 15ರವರೆಗೆ ಫೋಟೋ ಕಳುಹಿಸಲು ಸಮಯವಕಾಶ ನೀಡಲಾಗಿದೆ. ಅತ್ಯುತ್ತಮ ಫೋಟೋಗೆ ಬಹುಮಾನ ಸಿಗಲಿದೆ. ಅಂದಹಾಗೆಯೇ ಬೆಸ್ಟ್​ ಫೋಟೋ ಕ್ಲಿಕ್ಕಿಸಿದ ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಬಹುಮಾನ ಸಿಗಲಿದೆ. ಇದಲ್ಲಿದೆ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಜೊತೆಗೆ ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ನೀಡಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

Shwetha M