ಈ ಮಹಿಳೆಗೆ ಒಂದಲ್ಲ.. ಎರಡು ನಾಲಗೆ! – ಆಕೆಗೆ 2 ನಾಲಗೆ ಇರಲು ಕಾರಣವೇನು ಗೊತ್ತಾ?

ಈ ಮಹಿಳೆಗೆ ಒಂದಲ್ಲ.. ಎರಡು ನಾಲಗೆ! – ಆಕೆಗೆ 2 ನಾಲಗೆ ಇರಲು ಕಾರಣವೇನು ಗೊತ್ತಾ?

ಯಾರಾದರೂ ಒಂದೊಂದು ಸನ್ನಿವೇಶಕ್ಕೆ ಒಂದೊಂದು ತರ ಮಾತನಾಡುತ್ತಿದ್ದರೆ ಆತನಿಗೆ ಎರಡು ನಾಲಗೆ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಇನ್ನು ಭೂಮಿ ಮೇಲೆ ಕೆಲವು ಜೀವಿಗಳು ಎರಡು ನಾಲಗೆಯನ್ನು ಹೊಂದಿವೆ. ಮನುಷ್ಯನಿಗೆ ಕೇವಲ ಒಂದೇ ಒಂದು ನಾಲಗೆ ಇರುತ್ತೆ ಅಂತಾ ಗೊತ್ತು. ಆದ್ರೆ ಇಲ್ಲೊಬ್ಬಳಿಗೆ ಎರಡು ನಾಲಗೆ ಇದೆ!

ಈ ತಂತ್ರಜ್ಞಾನದ ಯುಗದಲ್ಲಿ ಅಸಾಧ್ಯವಾದುದನ್ನು ಸಾಧ್ಯವಾಗಿಸಲಾಗುತ್ತಿದೆ. ಕೆಲವುವೊಂದು ಸನ್ನಿವೇಶಗಳಲ್ಲಿ ಮನುಷ್ಯರಿಗೆ ಬಾಯಿ ಮಾತಿದೆ ಎರಡು ನಾಲಗೆ ಮನುಷ್ಯ ಎಂದು ಜರಿಯುವುದು ಉಂಟು. ಆದರೆ ಇಲ್ಲಿ ಒಬ್ಬ ಮಹಿಳೆ ನಿಜವಾಗಿಯೂ ಎರಡು ನಾಲಗೆಗಳನ್ನು ಹೊಂದಿದ್ದಾಳೆ. ಆಕೆ ತನ್ನ ಎರಡು ನಾಲಗೆಯ ಪೋಟೋ, ವಿಡಿಯೋಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾಳೆ. ಸದ್ಯ ಇದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ಇದನ್ನೂ ಓದಿ: ವಜ್ರಕ್ಕಾಗಿ ರಸ್ತೆಯಲ್ಲೆಲ್ಲಾ ಹುಡುಕಾಡಿದ ಜನ ! – ಡೈಮಂಡ್‌ ಸಿಕ್ಕ  ಖುಷಿಯಲ್ಲಿದ್ದವರಿಗೆ ಕಾದಿತ್ತು ಶಾಕ್‌!

ವೈರಲ್‌ ಆದ ವಿಡಿಯೋದಲ್ಲಿ ಆಕೆ ನೂಡಲ್ಸ್‌ ತಿನ್ನುತ್ತಿದ್ದಾಳೆ. ಅವಳು ನೂಡಲ್ಸ್ ತಿನ್ನುವ ರೀತಿ ನಿಮಗೆ ತಲೆತಿರುಗುವಂತೆ ಮಾಡುತ್ತದೆ. ಬಲವಂತವಾಗಿ ನೂಡಲ್ಸ್ ತೆಗೆದುಕೊಂಡು ತಿನ್ನಲು ನಾಲಗೆ ಚಾಚಿದ್ದಾಳೆ. ಆಗ ಅವಳ ಬಾಯಿಂದ ಎರಡು ನಾಲಗೆಗಳು ಹೊರಬಂದವು. ಎರಡೂ ನಾಲಗೆಗಳು ನೂಡಲ್ಸ್ ಸುತ್ತಿ ಒಳಗೆ ತೆಗೆದುಕೊಂಡು ಹೋಗುತ್ತಿವೆ. ಮಾಹಿತಿಯ ಪ್ರಕಾರ, ಈ ಯುವತಿಗೆ ವಿಶೇಷ ಆಪರೇಷನ್ ಮಾಡಲಾಗಿದ್ದು, ಹೊಲಿಗೆ ಹಾಕಲಾಗಿದೆ.

ತನ್ನ ವಿಚಿತ್ರ ನಾಲಗೆಯ ಬಗ್ಗೆ ಆಕೆ ಮಾತನಾಡಿದ್ದಾಳೆ. ನಾಲಗೆಯನ್ನು ಎರಡು ಭಾಗಗಳಾಗಿ ಕತ್ತರಿಸುವ ಪ್ರಕ್ರಿಯೆಯು ತಾನು ನಿರೀಕ್ಷಿಸಿದ್ದಕ್ಕಿಂತ ಸುಲಭವಾಗಿದೆ. ಕೇವಲ 15 ನಿಮಿಷಗಳನ್ನು ತೆಗೆದುಕೊಂಡಿತು ಎಂದು ಆ ಯುವತಿ ಹೇಳಿದ್ದಾಳೆ.

ಶಸ್ತ್ರಚಿಕಿತ್ಸೆ ಕಾರ್ಯಾಚರಣೆಯ ನಂತರ ಅವಳ ಬಾಯಿಂದ ಲಾಲಾರಸ ಹರಿಯಲು ಪ್ರಾರಂಭಿಸಿತು ಮತ್ತು ಅವಳ ನಾಲಗೆ ಊದಿಕೊಂಡಿತು. ನೋವು ಮತ್ತು ಊತ ಕಡಿಮೆಯಾಗಲು 24 ಗಂಟೆಗಳು ಬೇಕಾಯಿತು. ಆದರೆ ಎರಡೂ ನಾಲಗೆಗಳು ಹಲ್ಲುಗಳನ್ನು ಎಳೆಯುತ್ತಿರುವಂತೆ ಭಾಸವಾಗುತ್ತಿದೆ ಎಂದಿದ್ದಾಳೆ. ತಿನ್ನಲು ಅಥವಾ ಕುಡಿಯಲು ಏನೂ ಆಗುತ್ತಿಲ್ಲ ಎಂದು ಅವಳು ತನ್ನ ವಿಚಿತ್ರ ಗೋಳನ್ನು ವಿವರಿಸಿದ್ದಾಳೆ.

Shwetha M