‘ಪಠಾಣ್’ ಸಿನಿಮಾದ ಎರಡನೇ ಹಾಡು ರಿಲೀಸ್ – ಶಾರುಖ್, ದೀಪಿಕಾ ರೋಮ್ಯಾಂಟಿಕ್ ಸಾಂಗ್‌ಗೆ ಫ್ಯಾನ್ಸ್ ಫಿದಾ

‘ಪಠಾಣ್’ ಸಿನಿಮಾದ ಎರಡನೇ ಹಾಡು ರಿಲೀಸ್ – ಶಾರುಖ್, ದೀಪಿಕಾ ರೋಮ್ಯಾಂಟಿಕ್ ಸಾಂಗ್‌ಗೆ ಫ್ಯಾನ್ಸ್ ಫಿದಾ

ಬಾಲಿವುಡ್ ಕಿಂಗ್‌ಖಾನ್ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ‘ಪಠಾಣ್’ ಸಿನಿಮಾದ ಭೇಷರಮ್ ರಂಗ್ ಹಾಡಿನ ವಿವಾದ ಇನ್ನೂ ತಣ್ಣಗಾಗಿಲ್ಲ. ಇದರ ನಡುವೆಯೇ ‘ಪಠಾಣ್’ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. ಎರಡು ದಿನಗಳ ಹಿಂದೆಯಷ್ಟೇ ಈ ಹಾಡಿನ ಒಂದೇ ಒಂದು ಫೋಟೋವನ್ನು ಚಿತ್ರತಂಡ ರಿಲೀಸ್ ಮಾಡಿತ್ತು. ದೀಪಿಕಾ ಪಡುಕೋಣೆ ಈ ಹಾಡಿನಲ್ಲೂ ಕೂಡಾ ಸಖತ್ ಹಾಟ್ ಆಗಿಯೇ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ:  ಆಸ್ಕರ್ ರೇಸ್‌ ಗೆ ಕನ್ನಡದ ಕಾಂತಾರ- ವಿಜಯ್ ಕಿರಗಂದೂರು ಸ್ಪಷ್ಟನೆ

‘ಪಠಾಣ್’ ಸಿನಿಮಾದ ಎರಡನೇ ಹಾಡಿನಲ್ಲೂ ದೀಪಿಕಾ ಪಡುಕೋಣೆ ಸಖತ್ ಗ್ಲಾಮರ್ ಆಗಿ ಕಾಣಿಸಿಕೊಂಡಿದ್ದಾರೆ. ಶಾರುಖ್ ಮತ್ತು ದೀಪಿಕಾ ಪಡುಕೋಣೆಯ ರೋಮ್ಯಾಂಟಿಕ್ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಪಠಾಣ್ ಸಿನಿಮಾದ ‘ಜೂಮೇ ಜೋ ಪಠಾಣ್’ ಹೆಸರಿನ ಈ ಹಾಡು ಅಭಿಮಾನಿಗಳ ಬಾಯಲ್ಲಿ ಗುನುಗುನಿಸುತ್ತಿದೆ. ಮೊದಲ ಹಾಡಿನಲ್ಲಿ ದೀಪಿಕಾ ಕೇಸರಿ ಬಣ್ಣದ ಬಿಕಿನಿ ಹಾಕಿದ್ದು ವಿವಾದಕ್ಕೆ ಕಾರಣವಾಗಿತ್ತು. ಆದರೂ, ಚಿತ್ರತಂಡ ಈ ಕುರಿತು ತಲೆ ಕೆಡಿಸಿಕೊಂಡಿರಲಿಲ್ಲ. ಪಠಾಣ್ ಸಿನಿಮಾ ಜನವರಿ 25ಕ್ಕೆ ಜಗತ್ತಿನಾದ್ಯಂತ ಬಿಡುಗಡೆ ಆಗುತ್ತಿದೆ. ಎರಡನೇ ಹಾಡು ಬಿಡುಗಡೆಯ ಬೆನ್ನಲ್ಲೇ ಪ್ರತಿಷ್ಠಿತ ಎಂಪಾಯರ್ ಮ್ಯಾಗಜಿನ್ ಸಾರ್ವಕಾಲಿಕ ಶ್ರೇಷ್ಠ ನಟರ ಪಟ್ಟಿ ರಿಲೀಸ್ ಮಾಡಿದ್ದು, ಅದರಲ್ಲಿ ಶಾರುಖ್ ಖಾನ್ ಹೆಸರು ಇದೆ. ಭಾರತದ ನಟರಲ್ಲಿ ಈ ಸ್ಥಾನವನ್ನು ಪಡೆದ ಏಕೈಕ ನಟ ಶಾರುಖ್ ಖಾನ್ ಎನ್ನುವುದು ವಿಶೇಷ. ಇನ್ನು ಸಿನಿಮಾದ ಮೊದಲ ಹಾಡಿನ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದ ಶಾರುಖ್ ಖಾನ್, ವಿವಾದ ಮಾಡುವ ಮೂಲಕ ಸಿನಿಮಾಗೆ ಮತ್ತಷ್ಟು ಪ್ರಚಾರ ಕೊಟ್ಟಿದ್ದೀರಿ, ನಿಮಗೆ ಧನ್ಯವಾದಗಳು ಎಂದು ಹೇಳಿದ್ದರು.

suddiyaana