ಅದೇ ಶುಕ್ರವಾರ.. ಅದೇ ಸಂಜೆಯ ಸಮಯ..! – ಮತ್ತೆ ದುರಂತ ಕಂಡ ಅದೇ ಕೋರಮಂಡಲ್ ಎಕ್ಸ್‌ಪ್ರೆಸ್‌..!

ಅದೇ ಶುಕ್ರವಾರ.. ಅದೇ ಸಂಜೆಯ ಸಮಯ..! – ಮತ್ತೆ ದುರಂತ ಕಂಡ ಅದೇ ಕೋರಮಂಡಲ್ ಎಕ್ಸ್‌ಪ್ರೆಸ್‌..!

14 ವರ್ಷಗಳ ಹಿಂದಿನ ಆ ಕರಾಳ ಶುಕ್ರವಾರವನ್ನು ಅನೇಕರು ಮರೆತಿಲ್ಲ. ಯಾಕೆಂದರೆ, 2009ರ ಫೆಬ್ರವರಿ 13ರಂದು ಶುಕ್ರವಾರ ಸಂಜೆ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಸುಮಾರು 16ಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟಿದ್ದರು. 14 ವರ್ಷಗಳ ಹಿಂದೆಯೂ ಒಡಿಶಾದಲ್ಲಿ ಶುಕ್ರವಾರದಂದೇ, ಸಂಜೆ ವೇಳೆಯೇ ಇದೇ ಕೋರಮಂಡಲ್ ಎಕ್ಸ್‌ಪ್ರೆಸ್ ಅಪಘಾತಕ್ಕೀಡಾಗಿತ್ತು.

ಇದನ್ನೂ ಓದಿ:  ರೈಲು ದುರಂತಕ್ಕೆ ಮರುಗಿದ ಕ್ರಿಕೆಟಿಗರು – ಟ್ವೀಟ್ ಮೂಲಕ ನೊಂದ ಕುಟುಂಬಗಳಿಗೆ ಸಂತಾಪ

14 ವರ್ಷಗಳ ಹಿಂದೆ ಸಂಭವಿಸಿದ್ದ ಅಪಘಾತ ಈಗಿನ ದುರಂತದ ರೀತಿ ಭೀಕರವಾಗಿಲ್ಲದಿದ್ದರೂ ಒಡಿಶಾ ಹಾಗೂ ಕೋರಮಂಡಲ್ ಎಕ್ಸ್‌ಪ್ರೆಸ್ ಪ್ರಯಾಣಿಕರ ಪಾಲಿಗೆ ಕರಾಳ ಶುಕ್ರವಾರ ಆಗಿದ್ದಂತೂ ನಿಜ. ಅಂದು 2009ರ ಫೆಬ್ರವರಿ 13ರಂದು ಶುಕ್ರವಾರ ಸಂಜೆ ಕೋರಮಂಡಲ್ ಎಕ್ಸ್‌ಪ್ರೆಸ್ ರೈಲು ಒಡಿಶಾದ ಜಾಜ್ಪುರ್ ರಸ್ತೆ ರೈಲು ನಿಲ್ದಾಣದ ಮೂಲಕ ಅತಿವೇಗದಲ್ಲಿ ಹಾದು ಹೋಗುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಹೌರಾದಿಂದ ಚೆನ್ನೈಗೆ ತೆರಳುತ್ತಿದ್ದ ಕೋರಮಂಡಲ್ ಎಕ್ಸ್‌ಪ್ರೆಸ್ ನ 13 ಬೋಗಿಗಳು ಜಾಜ್ಪುರ್ ಬಳಿ ಹಳಿಗಳನ್ನು ಬದಲಾಯಿಸುವಾಗ ಹಳಿತಪ್ಪಿತ್ತು. ಅಪಘಾತವು ಸಂಜೆ 7:30 ರಿಂದ 7:40 ರ ನಡುವೆ ಸಂಭವಿಸಿತ್ತು. ದುರ್ಘಟನೆಯಲ್ಲಿ 16 ಮಂದಿ ಮೃತಪಟ್ಟಿದ್ದರು. ಹಳಿತಪ್ಪಿದ 13 ಬೋಗಿಗಳಲ್ಲಿ 11 ಸ್ಲೀಪರ್ ಮತ್ತು ಎರಡು ಸಾಮಾನ್ಯ ದರ್ಜೆಯ ಬೋಗಿಗಳಾಗಿದ್ದವು.

suddiyaana