1 ಫುಡ್‌.. 20 ದಿನದಲ್ಲಿ ಮ್ಯಾಜಿಕ್! – ಕ್ರಿಕೆಟ್‌ಗಾಗಿ ಪಂತ್ ಇಷ್ಟೆಲ್ಲಾ ಮಾಡಿದ್ರಾ?
ರಿಷಭ್‌ ರಿಕವರಿ ಟೈಂ ಹೇಗಿತ್ತು?

1 ಫುಡ್‌.. 20 ದಿನದಲ್ಲಿ ಮ್ಯಾಜಿಕ್! – ಕ್ರಿಕೆಟ್‌ಗಾಗಿ ಪಂತ್ ಇಷ್ಟೆಲ್ಲಾ ಮಾಡಿದ್ರಾ?ರಿಷಭ್‌ ರಿಕವರಿ ಟೈಂ ಹೇಗಿತ್ತು?

ಕಳೆದ ಎರಡು ವರ್ಷಗಳ ಹಿಂದೆ ಭಾರತ ತಂಡದ ವಿಕೆಟ್ ಕೀಪರ್ ರಿಷಭ್‌ ಪಂತ್‌ ಭೀಕರ ಅಪಘಾತದಲ್ಲಿ ತೀವ್ರ  ಗಾಯಗೊಂಡಿದ್ರು.. ಸಾವಿನಂಚಿನ ವರೆಗೂ ತಲುಪಿದ್ರು.. ಕ್ರಿಕೆಟ್‌ ಆಡುವುದು ಬಿಡಿ, ಇನ್ನು ಓಡಾಟ ನಡೆಸುವುದೇ ಕಷ್ಟ ಅನ್ನೋ ಮಾತುಗಳು ಕೂಡ ಕೇಳಿ ಬಂದಿದ್ದವು.. ಆದರೆ ಪಂತ್ ಈ ಮಾತನ್ನೆಲ್ಲಾ ಸುಳ್ಳಾಗಿಸಿದ್ರು. ಅಚ್ಚರಿ ಎನ್ನುವಂತೆ ರಿಷಭ್‌ ಚೇತರಿಕೆ ಕಂಡ್ರು.. ಅಷ್ಟೇ ಬೇಗ ಬ್ಯಾಟ್‌ ಹಿಡಿದು ಮೈದಾನಕ್ಕೂ ಕೂಡ ಎಂಟ್ರಿ ಕೊಟ್ರು.. ಪಂತ್‌ ಇಷ್ಟೊಂದು ಬೇಗ ರಿಕವರಿ ಆಗಲು ಕಾರಣ ಅವರ ಡಯಟ್‌ ಪ್ಲಾನ್‌ ನಿಂದ. ಕಟ್ಟು ನಿಟ್ಟಾಗಿ ಪಂತ್‌ ಡಯಟ್‌ ಫಾಲೋ ಮಾಡಿದ್ದಾರೆ.. ಈ ವಿಚಾರವನ್ನ ರಿಷಭ್‌ ಪೌಷ್ಟಿಕಾಂಶ ತಜ್ಞೆ ರಿವೀಲ್‌ ಮಾಡಿದ್ದಾರೆ. ಅಷ್ಟೇ ಅಲ್ಲದೇ ಪಂತ್‌ ಯಾವ ಆಹಾರ ಸೇವಿಸ್ತಾ ಇದ್ರು.. ಲೈಫ್‌ ಸ್ಟೈಲ್‌ ಹೇಗೆ ಚೇಂಚ್‌ ಮಾಡಿಕೊಂಡ್ರು ಅಂತಾ ಹೇಳಿದ್ದಾರೆ.. ಅಷ್ಟಕ್ಕೂ ರಿಷಭ್‌ ಪಂತ್ ಪಾಲಿಸಿದ ಡಯಟ್ ಪ್ಲಾನ್ ಏನು‌ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ವನವಾಸ ಅಂತ್ಯ.. KL ಕಮ್ ಬ್ಯಾಕ್! – ಪಂತ್​ಗಿಂತ ರಾಹುಲ್ ಬೆಸ್ಟ್ ಹೇಗೆ?

2022 ಡಿಸೆಂಬರ್‌ 30.. ರಿಷಭ್‌ ಪಂತ್‌ ಪಾಲಿಗೆ ಕರಾಳ ದಿನ.. ಮನೆಯವರಿಗೆ ಸರ್‌ಪ್ರೈಸ್‌ ನೀಡಲು ಹೋಗಿ ಸಾವಿನ ಕದ ತಟ್ಟಿ ಬಂದಿದ್ರು.. ಡೆಹ್ರಾಡೂನ್‌ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಬೆಂಕಿಯ ಕೆನ್ನಾಲಿಗೆ ಭಸ್ಮವಾಗಿತ್ತು.. ಇತ್ತ ಪಂತ್‌ ರಸ್ತೆ ಬದಿಯಲ್ಲಿ ರಕ್ತಸಿಕ್ತವಾಗಿ ಬಿದ್ದಿದ್ರು.. ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಯ್ತು.. ಪಂತ್‌ ಸ್ಥಿತಿ ನೋಡಿ ಈತ ಇನ್ನು ಮೈದಾನಕ್ಕೆ ಇಳಿಯೋದು ಡೌಟ್‌ .. ಚೇತರಿಸಿಕೊಳ್ಳಲು 4 ವರ್ಷವೇ ಆಗ್ಬೋದು ಅಂತಾ  ಎಲ್ಡ್ರೂ ಮಾತಾಡಿಕೊಂಡಿದ್ದರು.. ಆದರೆ ಪಂತ್‌ ವಿಲ್‌ ಪವರ್‌ ಮಾತ್ರ ತುಂಬಾನೆ ಸ್ಟ್ರಾಂಗ್‌ ಇತ್ತು.. ಭೀಕರ ಅಪಘಾತದಲ್ಲಿ ರಿಷಭ್‌  ಅದೃಷ್ಟದ ರೀತಿಯಲ್ಲಿ ಬಚಾವ್ ಆದ್ರು.. ಅಷ್ಟೇ ಅಲ್ಲ  ಪಂತ್ ಬರೋಬ್ಬರಿ 453 ದಿನಗಳ ಬಳಿಕ ಕ್ರಿಕೆಟ್ ಅಖಾಡಕ್ಕೆ ಮರಳಿದ್ರು. ಐಪಿಎಲ್‌ ನಲ್ಲಿ ಡೆಲ್ಲಿ ಕ್ಯಾಪ್ಟನ್ ಆಗಿ ಹಾಗೇ ವಿಕೆಟ್ ಹಿಂದೆಯೂ ಕೂಡ ಮ್ಯಾಜಿಕ್ ಮಾಡಿದ್ರು. ಆದ್ರೆ ಇಂಥಾ ಪ್ರದರ್ಶನದ ಹಿಂದೆ ಪಂತ್ ದೊಡ್ಡ ತ್ಯಾಗವನ್ನೇ ಮಾಡಿದ್ದರು.

ಹೌದು.. ಅಪಘಾತದ ನಂತ್ರ ಪಂತ್‌ ಲೈಫ್‌ಸ್ಟೈಲ್‌ ಫುಲ್‌ ಚೇಂಜ್‌ ಆಯ್ತು..  ಚೇತರಿಕೆಯ ಸಮಯದಲ್ಲಿ ಕೆಲವು ಔಷಧೀಯ ಪ್ರಭಾವದಿಂದಲೋ ಏನೋ ರಿಷಬ್ ತೂಕ ಕೂಡ ಹೆಚ್ಚಿಸಿಕೊಂಡಿದ್ದರು. ಅವರಿಗೆ ಒಂದು ಹೆಜ್ಜೆ ಇಡಲು ಆಗ್ತಿರ್ಲಿಲ್ಲ.. ಅಪಘಾತಕ್ಕೂ ಮುನ್ನ ಪಂತ್‌ ಫಿಟ್‌ನೆಸ್‌ ಕಡೆಗೆ ಅಷ್ಟೊಂದಾಗಿ ಗಮನಹರಿಸ್ತಿರ್ಲಿಲ್ಲ.. ಆದ್ರೆ ಅಪಘಾತದ ನಂತ್ರ ಡಯೆಟ್‌ ಅನಿವಾರ್ಯ ಆಯ್ತು. ಕೆಲ ಸಮಸ್ಯೆಗಳಿಂದ ಪಾರಾಗಲು ಪಂತ್‌ ಕಟ್ಟುನಿಟ್ಟಿನ ಡಯೆಟ್‌ ಪ್ಲ್ಯಾನ್ ಮಾಡಿದ್ರು..‌ ಡಯೆಟಿಶಿಯನ್ ಹೇಳಿದ್ದನ್ನೆಲ್ಲಾ ಚಾಚು ತಪ್ಪದೇ ಪಾಲಿಸಿದ್ರು.. ಇದ್ರಿಂದಾಗಿ ಪಂತ್‌ಗೆ ಓಡಾಡಲು ಸಾಧ್ಯ ಆಯ್ತು.. ಅಷ್ಟೇ ಅಲ್ಲ 16 ಕೆ.ಜಿ ತೂಕ ಇಳಿಸಿಕೊಂಡ್ರು ರಿಷಭ್‌.. ಈಗ ಟೀಮ್ ಇಂಡಿಯಾ ಪರವೂ ಮ್ಯಾಚ್​ ವಿನ್ನಿಂಗ್ ಪರ್ಫಾಮೆನ್ಸ್ ನೀಡುತ್ತಿರುವ ವಿಕೆಟ್ ಕೀಪರ್ ಹೇಗೆ ಚೇತರಿಸಿಕೊಂಡರು? ಅವರು ಪಾಲಿಸಿದ ಡಯಟ್ ಪ್ಲಾನ್ ಏನು ಎಂಬುದರ ಕುರಿತು ಪೌಷ್ಟಿಕಾಂಶ ತಜ್ಞೆ ಶ್ವೇತಾ ಶಾ ಅವರು ಬಹಿರಂಗಪಡಿಸಿದ್ದಾರೆ.

ರಿಷಭ್ ಪಂತ್ ಡಯಟ್ ಪ್ಲಾನ್  ಬಗ್ಗೆ ಪಾಡ್‌ ಕಾಸ್ಟ್‌ ವೊಂದ್ರಲ್ಲಿ ಶ್ವೇತಾ ಶಾ ಮಾತನಾಡಿದ್ದಾರೆ.  ಖಿಚಡಿ ಆಹಾರದೊಂದಿಗೆ ರಿಷಭ್​ರನ್ನು ಹೇಗೆ ಗುಣಪಡಿಸಲಾಯಿತು ಎಂದು ಹೇಳಿದ್ದಾರೆ. ಪಂತ್‌ಗೆ ಶ್ವೇತಾ ಅಪಘಾತಕ್ಕೂ ಮುನ್ನ ಅಂದ್ರೆ 2 ವರ್ಷಗಳಿಂದ ಪರಿಚಯವಿದ್ರು.. ಪಂತ್ ಜೀವನಶೈಲಿ ಹೇಗಿರುತ್ತದೆ? ಏನು ತಿನ್ನುತ್ತಾರೆ ಎಲ್ಲವೂ ತಿಳಿದಿತ್ತು. ಅಪಘಾತದ 5-6 ತಿಂಗಳ ನಂತರ ಜೂಮ್​ಕಾಲ್​ನಲ್ಲಿ ಅವರೊಂದಿಗೆ ಪಂತ್‌ ಮಾತನಾಡಿದ್ರು. ಆಗ ಕೆಲವೊಂದು ಸಮಸ್ಯೆಗಳನ್ನು  ಹೇಳಿಕೊಂಡಿದ್ರಂತೆ.

ನನಗೆ ಸ್ವಲ್ಪವೂ ತಿನ್ನಲು ಸಾಧ್ಯವಾಗುತ್ತಿಲ್ಲ. ನನಗೆ 1 ನಿಮಿಷವೂ ನಡೆಯಲು ಸಾಧ್ಯವಾಗುತ್ತಿಲ್ಲ ಎಂದು ಪಂತ್ ಹೇಳಿದ್ದರು. ಈ ವೇಳೆ ಶ್ವೇತಾ ಎಲ್ಲಾ ಔಷಧಿಗಳನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಪಂತ್ ಔಷಧಿಗಳನ್ನು ನಿಲ್ಲಿಸಿದರು. ಇದಾದ ನಂತರ  ಖಿಚಡಿ ಡಯಟ್ ಆರಂಭಿಸಲು ಹೇಳಿದ್ರು. ಆರೋಗ್ಯ  ಗುಣಪಡಿಸಲು ಖಿಚಡಿ ಉತ್ತಮ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಇದ್ರಲ್ಲಿ ಉತ್ತಮ ಗುಣಮಟ್ಟದ ಪ್ರೋಟೀನ್ ಇದೆ.  ಬೇಳೆಕಾಳುಗಳು ಮತ್ತು ಅಕ್ಕಿ ಒಟ್ಟಾಗಿ ಅಮೈನೋ ಆಮ್ಲಗಳನ್ನು ತಯಾರಿಸುತ್ತವೆ. ಶಸ್ತ್ರಚಿಕಿತ್ಸೆಯ ನಂತರ, ದೇಹಕ್ಕೆ ಮೃದುವಾದ, ಸುಲಭವಾಗಿ ಜೀರ್ಣವಾಗುವ ಆಹಾರಗಳು ಬೇಕಾಗುತ್ತವೆ. ಖಿಚಡಿ ಈ ಅವಶ್ಯಕತೆಗೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತದೆ. ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಉಂಟುಮಾಡದೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಖಿಚಡಿಯಲ್ಲಿ ನಾರಿನಂಶ ಹೆಚ್ಚಿರುವ ಕಾರಣ ಪ್ರೋಟೀನ್ ಅಂಶ ಹೆಚ್ಚಿರುತ್ತದೆ. ಇದು ಹಸಿವನ್ನು ನಿಯಂತ್ರಿಸಲು ಮತ್ತು ಅತಿಯಾಗಿ ತಿನ್ನುವುದನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಖಿಚಡಿ ಪಂತ್‌ಗೆ ಬೆಸ್ಟ್‌ ಫುಡ್‌ ಆಗಿತ್ತು. ಇನ್ನು ಈ ಸಮಯದಲ್ಲಿ ಕೋಲಮ್ ಅಥವಾ ಸೋನಾ ಮಸೂರಿಯಂತಹ ಸುಲಭವಾಗಿ ಜೀರ್ಣವಾಗುವ ಅನ್ನವನ್ನು ಆರಿಸಿಕೊಳ್ಳಬೇಕು.  ಸಂಸ್ಕರಿಸಿದ ಆಹಾರ ಅಥವಾ ಬಾಸ್ಮತಿ ಅಕ್ಕಿ ತಿನ್ನಬಾರದು  ಎಂದು ಹೇಳಿದ್ದರು. ಅಷ್ಟೇ ಅಲ್ಲ ಮಾಂಸಹಾರವನ್ನ ತ್ಯಜಿಸಬೇಕು ಅಂತಾ ಹೇಳಿದ್ರು.. ಪಂತ್‌ ಕೂಡ ಡಯೆಟಿಶಿಯನ್ ಹೇಳಿದ್ದನ್ನೆಲ್ಲಾ ಫಾಲೋ ಮಾಡಲು ಶುರು ಮಾಡಿದ್ರು.. ಈ ಡಯಟ್ ಫಾಲೋ ಮಾಡಿದ ಕಾರಣ ರಿಷಭ್ ಅವರ ಶೇಕಡಾ 50 ರಷ್ಟು ಸಮಸ್ಯೆ‌ ಖಿಚಡಿ ಆಹಾರದಿಂದ ಪರಿಹಾರ ಆಯ್ತು. ಕೇವಲ 20 ದಿನಗಳಲ್ಲಿ ದೇಹದಲ್ಲಿ ಸಾಕಷ್ಟು ಬದಲಾವಣೆ ಆಯ್ತು. ದೇಹದಲ್ಲಿ ಉರಿಯೂತ ಕಡಿಮೆಯಾಯ್ತು. ಕೈಯಲ್ಲಿ ಮತ್ತೊಂದು ಉರಿಯೂತ ಆಗಿದ್ದ ಕಾರಣ ನಿಂಬೆ, ಕಪ್ಪು ಒಣದ್ರಾಕ್ಷಿ, ಕರಿಮೆಣಸು ಮತ್ತು ಗೊಂಡ ಕಟೀರ ವಿವಿಧ ರೀತಿಯ ಕಷಾಯವನ್ನ ತೆಗೆದುಕೊಳ್ಳುವಂತೆ ಶ್ವೇತಾ ಶಾ ಸೂಚಿಸಿದ್ರು. ಇದು ಮೂಳೆಗಳ ಚೇತರಿಕೆಗೆ ನೆರವಾಗಿತ್ತು.

ಆರೋಗ್ಯದಲ್ಲಿ ಚೇತರಿಗೆ ಕಾಣ್ತಾ ಇದ್ದಂತೆ ಪಂತ್‌ ಕ್ರಿಕೆಟ್‌ ಕಡೆಗೂ ಗಮನ ಕೊಡೋದಿಕ್ಕೆ ಶುರುಮಾಡಿದ್ರು.. ಫಿಟ್ನೆಸ್ ಸಾಧಿಸುವ ಹಂತದಲ್ಲಿ ದಿನಕ್ಕೆ ಎರಡುವರೆ ಗಂಟೆ ಬ್ಯಾಟಿಂಗ್ ಅಭ್ಯಾಸ ಮಾಡ್ತಾ ಇದ್ರು. ಬಳಿಕ  45 ನಿಮಿಷಗಳ ಕಾಲ ಕೀಪಿಂಗ್ ಅಭ್ಯಾಸವನ್ನೂ ನಡೆಸಿದ್ರು. ಹೀಗೆ ಹಂತ ಹಂತವಾಗಿ ಕ್ರಿಕೆಟ್‌ ಅಭ್ಯಾಸ ಮಾಡಿ  ಫಾರ್ಮ್‌ಗೆ ಮರಳುವಲ್ಲಿ ಯಶಸ್ವಿಯಾದ್ರು.. ಒಟ್ನಲ್ಲಿ ಸಾವನ್ನೇ ಗೆದ್ದು ಬಂದಿರೋ ರಿಷಭ್‌ ಸೆಕೆಂಡ್ ಇನ್ನಿಂಗ್ಸ್ ತುಂಬಾನೇ ಅದ್ಭುತವಾಗಿದೆ. ಸಣ್ಣ ಗಾಯ ಆದ್ರೂ ಲೈಫೇ ಮುಗೀತು ಅನ್ನೋರ ನಡುವೆ ಪಂತ್ ಗ್ರೇಟ್‌ ಕಮ್‌ಬ್ಯಾಕ್‌ ಮಾಡಿದ್ದಾರೆ. ತನ್ನಿಂದ ಏನು ಆಗಲ್ಲ ಅಂತಾ ಕೈ ಚೆಲ್ಲಿ ಕೂರುವವರಿಗೆ ಮಾದರಿ ಆಗಿದ್ದಾರೆ ಪಂತ್‌.

Shwetha M

Leave a Reply

Your email address will not be published. Required fields are marked *