ರೋಹಿತ್ & ಕೊಹ್ಲಿ ಸ್ಥಾನಕ್ಕೆ ಐವರ ರೇಸ್ – ಕೆಎಲ್ ರಾಹುಲ್ ಸ್ಲಾಟ್ ಇನ್ನಾದ್ರೂ ಫಿಕ್ಸ್ ಆಗುತ್ತಾ?
ಕರುಣ್, ಶ್ರೇಯಸ್, ಪಡಿಕ್ಕಲ್ ಗೆ ಲಕ್?

ಪೋಸ್ಟ್ ಪೋನ್ ಆಗಿದ್ದ ಐಪಿಎಲ್ ರೀ ಶೆಡ್ಯೂಲ್ ಆಯ್ತು. ಮೇ 17ರಿಂದ ಮ್ಯಾಚಸ್ ಮತ್ತೆ ಸ್ಟಾರ್ಟ್.. ಜೂನ್ 3ಕ್ಕೆ ಫೈನಲ್ ಫೈಟ್. ಸೋ ಇಲ್ಲಿಗೆ 18ನೇ ಸೀಸನ್ ಐಪಿಎಲ್ ಮುಕ್ತಾಯ. ಆ ನಂತ್ರ ಟೀಂ ಇಂಡಿಯಾ ಮತ್ತೆ ತನ್ನ ಜರ್ನಿ ಕಂಟಿನ್ಯೂ ಮಾಡ್ಬೇಕು. ಇಂಗ್ಲೆಂಡ್ ಪ್ರವಾಸದ ಮೂಲಕ ಹೊಸ ಸಮರ ಶುರುವಾಗುತ್ತೆ. ಆದ್ರೆ ಈ ಪ್ರವಾಸಕ್ಕೆ ಸಾಲು ಸಾಲು ಸವಾಲುಗಳೇ ಎದುರಾಗುತ್ತೆ. ಟೀಂ ಅನೌನ್ಸ್ ಮಾಡೋದೂ ಕೂಡ ದೊಡ್ಡ ಚಾಲೆಂಜಿಂಗ್. ಇಬ್ಬರು ಲೆಜೆಂಡರಿ ಕ್ರಿಕೆಟಿಗರ ಯುಗಾಂತ್ಯ ಬಿಸಿಸಿಐಗೆ ತಲೆಬಿಸಿ ತಂದಿಟ್ಟಿದೆ.
ಇದನ್ನೂ ಓದಿ : ಹೇಗಿದೆ ಭಾರತದ ಬ್ರಹ್ಮೋಸ್ ಶಕ್ತಿ ವೈರಿ ಎದೆಯಲ್ಲಿ ನಡುಕ ಹುಟ್ಟಿಸುತ್ತೆ
ಟೀಂ ಇಂಡಿಯಾ ಈಗ ಮೊದ್ಲಿನಂತಿಲ್ಲ. ಐಪಿಎಲ್ಗೂ ಮುನ್ನ ಇದ್ದ ತಂಡಕ್ಕೂ ಮುಂದಿನ ಪಂದ್ಯಗಳಿಗೂ ಬಹುದೊಡ್ಡ ವ್ಯತ್ಯಾಸವೇ ಆಗಲಿದೆ. ಇಷ್ಟು ದಿನ ಆಟಗಾರರಿಗಾಗಿ ಮ್ಯಾಚ್ ನೋಡ್ತಿದ್ದವ್ರು ಇನ್ಮುಂದೆ ಸೋಲು ಗೆಲುವಿಗಾಗಿ ನೋಡ್ಬೇಕಾಗುತ್ತೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ನಿವೃತ್ತಿ ಆ ಮಟ್ಟಿಗಿನ ಎಫೆಕ್ಟ್ ನೀಡಲಿದೆ. ಇದೀಗ ರೋಹಿತ್ ಮತ್ತು ವಿರಾಟ್ ಸ್ಥಾನಕ್ಕೆ ಹೊಸಬರ ನೇಮಕ ಮಾಡೋಕೆ ಬಿಸಿಸಿಐಗೂ ಅಷ್ಟು ಸುಲಭ ಇಲ್ಲ. ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ ಸರಣಿಗೂ ಹೊಸ ಟೀಂ ಕಣಕ್ಕಿಳಿಸೋ ಚಾಲೆಂಜ್ ಇದೆ. ಇಬ್ಬರ ಸ್ಥಾನವನ್ನ ಯಾರು ಸಮರ್ಥವಾಗಿ ಮುನ್ನಡೆಸಬಲ್ಲರು ಅನ್ನೋ ಪ್ರಶ್ನೆಗಳು ಮೂಡಿವೆ. ಆಟಗಾರರ ನಡುವೆ ಪೈಪೋಟಿ ಶುರುವಾಗಿದೆ. ಅದ್ರಲ್ಲೂ ಈ ಐವರು ಪ್ಲೇಯರ್ಸ್ ಟಾಪ್ ರೇಸ್ನಲ್ಲಿದ್ದಾರೆ.
2 ಸ್ಥಾನಕ್ಕಾಗಿ ಐವರ ಪೈಪೋಟಿ!
ಕೊಹ್ಲಿ ಅಥವಾ ರೋಹಿತ್ ಸ್ಥಾನ ತುಂಬುತ್ತಾರಾ ರಾಹುಲ್?
ಏಕದಿನದ ಸಕ್ಸಸ್ ಬೆನ್ನಲ್ಲೇ ಟೆಸ್ಟ್ ಗೂ ಕಾಲಿಡ್ತಾರಾ ಶ್ರೇಯಸ್ ಅಯ್ಯರ್?
ತ್ರಿಶತಕವೀರ ಕರುಣ್ ನಾಯರ್ ಗೆ ತೆರೆಯುತ್ತಾ ಬಿಸಿಸಿಐ ಬಾಗಿಲು?
ಕ್ಲಾಸಿಕ್ ಬ್ಯಾಟರ್ ದೇವದತ್ ಪಡಿಕ್ಕಲ್ ಹೆಸರು ಕೂಡ ಮುಂಚೂಣಿ
ಐಪಿಎಲ್ ನಲ್ಲಿ ಮಿಂಚುತ್ತಿರೋ ಸಾಯಿ ಸುದರ್ಶನ್ ಹೆಸರು ಆಯ್ಕೆ ಚರ್ಚೆ