ಮದುವೆ ಎಂದರೇನು ಎಂದು ಪರೀಕ್ಷೆಯಲ್ಲಿ ಪ್ರಶ್ನೆ! – ವಿದ್ಯಾರ್ಥಿನಿಯ ಉತ್ತರಕ್ಕೆ ಶಿಕ್ಷಕರೇ ತಬ್ಬಿಬ್ಬು!
ಕೆಲವು ಮಕ್ಕಳು ಪರೀಕ್ಷೆ ವೇಳೆ ಓದುವುದಿಲ್ಲ. ಪ್ರಶ್ನೆ ಪತ್ರಿಕೆಯಲ್ಲಿ ಒಂದು ಪ್ರಶ್ನೆ ಕೇಳಿದ್ರೆ ಉತ್ತರ ಪತ್ರಿಕೆಯಲ್ಲಿ ಅವರದ್ದೇ ಆದ ವ್ಯಾಖ್ಯಾನಗಳನ್ನು ಬರೆದಿರುತ್ತಾರೆ. ಇದನ್ನು ನೋಡಿದ ಶಿಕ್ಷಕರಿಗೆ ತಾವೇ ಪಾಠ ಮಾಡಿದ್ದಾ ಅಂತಾ ಪ್ರಶ್ನೆ ಉದ್ಭವವಾಗುವುದು ಸಾಮಾನ್ಯ. ಇಲ್ಲೊಂದು ವಿದ್ಯಾರ್ಥಿನಿ ಉತ್ತರ ಪತ್ರಿಕೆಯಲ್ಲಿ ಮದುವೆಯ ಬಗ್ಗೆ ತನ್ನದೇ ಆದ ವ್ಯಾಖ್ಯಾನ ನೀಡಿದ್ದಾಳೆ. ಇದನ್ನು ಓದಿದ ಶಿಕ್ಷಕರಿಗೆ ಒಂದು ಕ್ಷಣ ತಲೆತಿರುಗಿದಂತೆ ಆಗಿದೆ.
ಪರೀಕ್ಷೆ ವೇಳೆ ಮದುವೆ ಎಂದರೇನು ಎಂದು ಪ್ರಶ್ನೆಯನ್ನು ನೀಡಲಾಗಿತ್ತು. ಈ ವೇಳೆ ವಿದ್ಯಾರ್ಥಿನಿಯೊಬ್ಬಳು ಮದುವೆಯ ಬಗ್ಗೆ ತನ್ನದೇ ಆದ ವಿಚಿತ್ರ ವ್ಯಾಖ್ಯಾನ ನೀಡಿದ್ದಾಳೆ. ಆಕೆ ಬರೆದ ಉತ್ತರ ಪತ್ರಿಕೆ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಇದನ್ನು ನೋಡಿದ ನಂತರ ಈ ಪುಟ್ಟ ವಿದ್ಯಾರ್ಥಿ ಯಾರು ಎಂದು ಸೋಶಿಯಲ್ ಮೀಡಿಯಾ ಬಳಕೆದಾರರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಲಕ್ಷಾಂತರ ರೂಪಾಯಿ ಬೆಲೆಬಾಳುವ ಚಿನ್ನದ ಸರ ನುಂಗಿದ ಎಮ್ಮೆ! – ಬಂಗಾರದ ಆಸೆಗೆ ಹೊಟ್ಟೆಯನ್ನೇ ಸೀಳಿದ ಮಾಲೀಕರು!
ಉತ್ತರ ಪತ್ರಿಕೆಯಲ್ಲಿ ಏನಿದೆ?
ಹುಡುಗಿಯ ಹೆತ್ತವರು ಹೇಳುವುದು, ಈಗ ನೀನು ದೊಡ್ಡವಳಾಗಿದ್ದೀಯ, ಇಷ್ಟು ವರ್ಷ ನಿನ್ನನ್ನು ಪೋಷಿಸಿದ್ದೆವು.. ಇನ್ನು ನಮ್ಮದಲ್ಲ. ನಂತರ ಹುಡುಗನನ್ನು ಆಯ್ಕೆಮಾಡಲಾಗುತ್ತದೆ ಮತ್ತು ಪ್ರಕ್ರಿಯೆಯು ಪ್ರಾರಂಭವಾಗುತ್ತದೆ. ಹುಡುಗಿಯ ಪೋಷಕರು ತಮ್ಮ ಮಗಳ ಮದುವೆಗಾಗಿ ತಮ್ಮ ಮಗಳನ್ನು ಸಾಕುವ ಪುರುಷನನ್ನು ಹುಡುಕುತ್ತಾರೆ. ನಂತರ ಹುಡುಗಿ ಮತ್ತು ಹುಡುಗ ಭೇಟಿಯಾಗುತ್ತಾರೆ. ತಂದೆ-ತಾಯಿ ನಿಶ್ಚಯಿಸಿದವರನ್ನೇ ಮಗಳು ಮದುವೆಯಾಗುತ್ತಾಳೆ ಎಂದು ಉತ್ತರ ಪತ್ರಿಕೆಯಲ್ಲಿ ಬರೆದಿದ್ದಾಳೆ.
ವಿದ್ಯಾರ್ಥಿನಿ ಬರೆದ ಉತ್ತರ ಶಿಕ್ಷಕರ ಒಂದು ಕ್ಷಣ ದಂಗಾಗುವಂತೆ ಮಾಡಿದೆ. ವಿದ್ಯಾರ್ಥಿನಿ ಬರೆದ ಉತ್ತರದ ಮೇಲೆ ಕೆಂಪು ಶಾಯಿಯಲ್ಲಿ ಶಿಕ್ಷಕರು ಗೀಚಿದ್ದಾರೆ. ಆಕೆಯ ಅಸಂಬದ್ದ ಉತ್ತರಕ್ಕೆ ಶೂನ್ಯ ಅಂಕಗಳನ್ನು ನೀಡಿ, ತನ್ನನ್ನು ಭೇಟಿಯಾಗುವಂತೆ ಉತ್ತರ ಪತ್ರಿಕೆಯಲ್ಲಿ ಗೀಚಿದ್ದಾರೆ.
ಈ ಚಿತ್ರವನ್ನು @srpdaa ಖಾತೆಯಿಂದ ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ. ಈ ಪೋಸ್ಟ್ ಅನ್ನು ಈಗಾಗಲೇ 15 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.. ಅವರು ವಿವಿಧ ಕಾಮೆಂಟ್ಗಳನ್ನು ಮಾಡುವ ಮೂಲಕ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ.