ಸಿಲ್ಕ್‌ ಸ್ಮಿತಾ ಕಚ್ಚಿದ್ದ ಸೇಬಿಗೂ ಫುಲ್‌ ಡಿಮ್ಯಾಂಡ್‌! – ಆ ಕಾಲದಲ್ಲಿ ಹಣ್ಣು ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

ಸಿಲ್ಕ್‌ ಸ್ಮಿತಾ ಕಚ್ಚಿದ್ದ ಸೇಬಿಗೂ ಫುಲ್‌ ಡಿಮ್ಯಾಂಡ್‌! – ಆ ಕಾಲದಲ್ಲಿ ಹಣ್ಣು ಹರಾಜಾಗಿದ್ದು ಎಷ್ಟು ಬೆಲೆಗೆ ಗೊತ್ತಾ?

80ರ ದಶಕದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿ ಸಿಲ್ಕ್​ ಸ್ಮಿತಾ ಬಹುಬೇಡಿಕೆಯ ನಟಿಯಾಗಿದ್ದರು. ಸಿಲ್ಕ್ ಸ್ಮಿತಾ ಹೆಚ್ಚಾಗಿ ಮಾದಕ ದೃಶ್ಯಗಳಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆವರ ನಟನೆ , ಡ್ಯಾನ್ಸ್‌ ಪಡ್ಡೆಹುಡುಗರ ನಿದ್ದೆಗೆಡಿಸುವಂತೆ ಮಾಡುತ್ತಿತ್ತು. ಸಿಲ್ಕ್ ಸ್ಮಿತಾ ಸಿನಿಮಾದಲ್ಲಿ ಕುಣಿದ್ರೆ ಚಿತ್ರ ಸೂಪರ್ ಹಿಟ್ ಎನ್ನುವ ಕಾಲವೊಂದಿತ್ತು. ಈಕೆಯ ಡ್ಯಾನ್ಸ್ ನೋಡಲೆಂದೇ ಜನ ಥಿಯೇಟರ್‌ಗೆ ಹೋಗ್ತಿದ್ರು. ಸಿಲ್ಕ್ ಸ್ಮಿತಾ ಕ್ರೇಜ್ ಎಷ್ಟರ ಮಟ್ಟಿಗಿತ್ತು ಎನ್ನುವುದಕ್ಕೆ ಸಾಕ್ಷಿ ಆಕೆ ಕಚ್ಚಿದ ಸೇಬು  ಹರಾಜಿನಲ್ಲಿ ಮಾರಾಟವಾಗಿತ್ತು ಬೆಲೆ.

ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ವಿಚ್ಛೇದನ ಪಡೆದಿದ್ದ ಸಿಲ್ಕ್‌ ಸ್ಮಿತಾ ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 80 ದಶಕದಲ್ಲಿ ಐಟಂ ಸಾಂಗ್​ಗಳಿಗೆ ಹೆಚ್ಚಾಗಿ ಸೊಂಟ ಬಳುಕಿಸುತ್ತಿದ್ದರು. ಹೊಳೆಯುವ ಕಣ್ಣುಗಳು, ಸುವಾಸನೆಯ ಕೂದಲು ಮತ್ತು ದ್ರಾವಿಡ ಮೈಬಣ್ಣ ಪಡ್ಡೆ ಹುಡುಗರನ್ನು ನಿದ್ದೆಗೆಡಿಸುವಂತೆ ಮಾಡಿತ್ತು. ರಜನಿಕಾಂತ್ ಅವರ ಚಿತ್ರ ಮೂಂಡ್ರು ಮುಗಮ್ ಮೂಲಕ ಮತ್ತಷ್ಟು ಜನಪ್ರಿಯರಾದ ಸಿಲ್ಕ್ ಸ್ಮಿತಾ, ಬಳಿಕ ಸಿನಿಮಾ ಅಂದ್ರೆ ಸಿಲ್ಕ್ ಸಾಂಗ್ ಇರಲೇಬೇಕು ಎನ್ನುವ ಮಟ್ಟಕ್ಕೆ ಬೆಳೆದಿದ್ರು.. ಸಿನಿಮಾ ರಂಗದಲ್ಲಿ ಉತ್ತುಂಗದಲ್ಲಿ ಇರುವಾಗಲೇ ಅವರ ಆತ್ಮಹತ್ಯೆ ಸುದ್ದಿ ಅಭಿಮಾನಿಗಳಲ್ಲಿ ದೊಡ್ಡ ಆಘಾತವನ್ನುಂಟು ಮಾಡಿತು.

ಇದನ್ನೂ ಓದಿ: ಗಳಿಕೆಯಲ್ಲಿ ದಾಖಲೆ ಬರೆದ ‘ಜವಾನ್’ ಸಿನಿಮಾ – ದಕ್ಷಿಣ ಭಾರತದ ‘ಕೆಜಿಎಫ್ 2’ ‘ಬಾಹುಬಲಿ 2’ ಚಿತ್ರದ ಗಳಿಕೆ ಮೀರಿಸಿದ ‘ಜವಾನ್’

ಇದೀಗ ಸಿಲ್ಕ್​ ಸ್ಮಿತಾ ಅವರ ಕುರಿತಾದ ಇಂಟೆರೆಸ್ಟಿಂಗ್​ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಸಿನಿಮಾವೊಂದರ ಚಿತ್ರೀಕರಣದ ವೇಳೆ ಸಿಲ್ಕ್ ಸ್ಮಿತಾ ಸೇಬು ಹಣ್ಣನ್ನು ಕಚ್ಚಿ ತನ್ನ ಬಳಿ ಇಟ್ಟುಕೊಂಡಿದ್ದರಂತೆ. ಶೂಟಿಂಗ್ ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರುಇದನ್ನು ಗಮನಿಸಿ ಸೇಬು ಹಣ್ಣು ಕದ್ದು ಓಡಿಹೋದರಂತೆ. ಅದರ ನಂತರ, ಅವರು ಸೇಬು ಹಣ್ಣನ್ನು ಸಿಲ್ಕ್​ ಸ್ಮಿತಾ ಅವರು ಕಚ್ಚಿದ ಹಣ್ಣು ಎಂದು ಹರಾಜು ಹಾಕಿದರಂತೆ. 2 ರೂಪಾಯಿಗಿಂತಲೂ ಕಡಿಮೆ ಬೆಲೆಯಿದ್ದ ಸೇಬು ಹಣ್ಣನ್ನು ಆ ಕಾಲದಲ್ಲೇ ಹರಾಜಿನಲ್ಲಿ 350 ರೂಪಾಯಿಗೆ ಖರೀದಿ ಮಾಡಿದರಂತೆ. ಅಭಿಮಾನಿಯೊಬ್ಬ ಖರೀದಿ ಮಾಡಿದರು ಎಂದು ಹಿರಿಯ ಪತ್ರಕರ್ತ ಸೆಯ್ಯರ್ ಬಾಲು ಎಂಬುವರು ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದಾರೆ. ಆಗಿನ ಕಾಲದಲ್ಲಿ 350 ರೂಪಾಯಿ ಅಂದರೆ ಇಂದು 4 ಸಾವಿರ ರೂಪಾಯಿಗೂ ಅಧಿಕವಾಗಿದೆ.

Shwetha M