ಮಲೇಷ್ಯಾದಲ್ಲಿ ‘ತಲೈವಾ’ ಹವಾ – ‘ಶಿವಾಜಿ’ ಸಿನಿಮಾ ಸ್ಟೈಲ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ವಾಗತಿಸಿದ ಪ್ರಧಾನಿ

ಮಲೇಷ್ಯಾದಲ್ಲಿ ‘ತಲೈವಾ’ ಹವಾ – ‘ಶಿವಾಜಿ’ ಸಿನಿಮಾ ಸ್ಟೈಲ್‌ನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಸ್ವಾಗತಿಸಿದ ಪ್ರಧಾನಿ

‘ಜೈಲರ್’ ಸಿನಿಮಾ ಸಕ್ಸಸ್‌ನ ಖುಷಿಯಲ್ಲಿದ್ದಾರೆ ಸೂಪರ್ ಸ್ಟಾರ್ ರಜಿನಿಕಾಂತ್. ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ರಜಿನಿಕಾಂತ್ ಮಲೇಷ್ಯಾ ಪ್ರವಾಸದಲ್ಲಿದ್ದಾರೆ. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಸೂಪರ್ ಸ್ಟಾರ್ ರಜಿನಿಕಾಂತ್ ಅವರನ್ನು ಭೇಟಿ ಮಾಡಲು ಆಹ್ವಾನ ನೀಡಿದ್ದರು. ಮಲೇಷ್ಯಾ ಪ್ರಧಾನಿಯವರನ್ನು ತಲೈವಾ ಭೇಟಿ ಮಾಡಿದ ಸಂಭ್ರಮ ನಿಜಕ್ಕೂ ಅಭಿಮಾನಿಗಳಿಗೆ ಫುಲ್ ಸರ್‌ಪ್ರೈಸ್ ಆಗಿದೆ. ಯಾಕೆಂದರೆ ಮಲೇಷ್ಯಾ ಪ್ರಧಾನಿ ರಜಿನಿಕಾಂತ್ ಅವರನ್ನು ವಿಶೇಷ ರೀತಿಯಲ್ಲಿ ಸ್ವಾಗತಿಸಿದ್ದಾರೆ.

ಇದನ್ನೂ ಓದಿ:  ‘ಜೈಲರ್’ ಸಿನಿಮಾದಲ್ಲಿ ಕೆಲಸ ಮಾಡಿದವರಿಗೆ ‘ಚಿನ್ನ’ದ ಉಡುಗೊರೆ – 300 ಮಂದಿಗೆ ನಿರ್ಮಾಪಕ ಕಲಾನಿಧಿ ಮಾರನ್ ಗೋಲ್ಡ್ ಗಿಫ್ಟ್

ರಜನಿಕಾಂತ್ ಅವರು ಪಂಚೆ ಹಾಗೂ ಬಿಳಿ ಬಣ್ಣದ ಶರ್ಟ್ ಧರಿಸಿ ಮಲೇಷ್ಯಾ ಪ್ರಧಾನಿಯವರ ಭೇಟಿಗೆ ಆಗಮಿಸಿದ್ದರು. ಮಲೇಷ್ಯಾ ಪ್ರಧಾನಿ ಅನ್ವರ್ ಇಬ್ರಾಹಿಂ ಅವರು ಪ್ರೀತಿಯಿಂದ ರಜಿನಿಕಾಂತ್ ಅವರನ್ನು ಸ್ವಾಗತಿಸಿದ್ದಾರೆ. ಪ್ರೀತಿಯಿಂದ ಅಪ್ಪುಗೆ ಕೊಟ್ಟಿದ್ದಾರೆ. ಆದರೆ, ಮಲೇಷ್ಯಾ ಪ್ರಧಾನಿ ಮಾಮೂಲಿಯಾಗಿ ಸೂಪರ್ ಸ್ಟಾರ್ ನ್ನು ವೆಲ್‌ಕಮ್ ಮಾಡಿಲ್ಲ. ಥೇಟ್ ‘ಶಿವಾಜಿ’ ಸಿನಿಮಾ ಸ್ಟೈಲ್‌ನಲ್ಲಿ ರಜನಿಕಾಂತ್ ಅವರನ್ನು ಸ್ವಾಗತಿಸಿದ್ದಾರೆ. ಸದ್ಯ ಈ ವಿಡಿಯೋ ನೋಡಿ ಅಭಿಮಾನಿಗಳು ಮಲೇಷ್ಯಾದಲ್ಲೂ ತಲೈವಾ ಹವಾ ಎಂದು ಖುಷಿ ಪಡುತ್ತಿದ್ದಾರೆ.

ರಜನಿಕಾಂತ್ ನಟನೆಯ ‘ಶಿವಾಜಿ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ರಜನಿ ಬಾಲ್ಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಅವರು ಮಾಡಿದ್ದ ಒಂದು ಸ್ಟೈಲ್ ಗಮನ ಸೆಳೆದಿತ್ತು. ಬೋಳು ತಲೆಯ ಮೇಲೆ ರಜನಿ ತಮ್ಮ ಬೆರಳನ್ನು ಆಡಿಸುವ ರೀತಿಯಲ್ಲಿ ಅವರ ಸ್ಟೈಲ್ ಇತ್ತು. ಮಲೇಷ್ಯಾ ಪ್ರಧಾನಿ ಕೂಡ ಇದೇ ರೀತಿಯಲ್ಲಿ ಸ್ಟೈಲ್ ಮಾಡಿದ್ದಾರೆ. ರಜಿನಿಕಾಂತ್ ಮತ್ತು ಮಲೇಷ್ಯಾ ಪ್ರಧಾನಿ ಇಬ್ಬರೂ ಕುಳಿತು ಕೆಲ ಹೊತ್ತು ಮಾತನಾಡಿದ್ದಾರೆ. ಈ ಫೋಟೋಗಳನ್ನು ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.

ರಜನಿಕಾಂತ್ ಅವರು ‘ಜೈಲರ್’ ಸಿನಿಮಾ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರ ಬರೋಬ್ಬರಿ 600 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಚಿತ್ರದ ಯಶಸ್ಸಿನ ಬೆನ್ನಲ್ಲೇ ಸನ್ ಪಿಕ್ಚರ್ಸ್ ರಜಿನಿಕಾಂತ್ ಜೊತೆ ಹೊಸ ಸಿನಿಮಾ ಘೋಷಿಸಿದೆ. ಈ ಚಿತ್ರವನ್ನು ಲೋಕೇಶ್ ಕನಗರಾಜ್ ನಿರ್ದೇಶನ ಮಾಡಲಿದ್ದಾರೆ. ಇದು ರಜಿನಿಕಾಂತ್ ಅವರು 171ನೇ ಸಿನಿಮಾ. ಈ ಚಿತ್ರಕ್ಕೆ ಸದ್ಯಕ್ಕೆ ‘ತಲೈವರ್ 171’ ಎಂದು ಶೀರ್ಷಿಕೆ ಇಡಲಾಗಿದೆ.

suddiyaana