ವಾಟರ್‌ ಡಿಸ್ಪೆನ್ಸರ್‌ ಬೆಲೆ ನೂರು, ಇನ್ನೂರಲ್ಲ.. ಬರೋಬ್ಬರಿ 41,000 ರೂಪಾಯಿ!

ವಾಟರ್‌ ಡಿಸ್ಪೆನ್ಸರ್‌ ಬೆಲೆ ನೂರು, ಇನ್ನೂರಲ್ಲ.. ಬರೋಬ್ಬರಿ 41,000 ರೂಪಾಯಿ!

ಅಂಗಡಿಗಳಲ್ಲಿ ವಾಟರ್‌ ಡಿಸ್ಪೆನ್ಸರ್‌ ಖರಿದಿಸುವುದಾದರೆ ಅದರ ಬೆಲೆ  300 ರಿಂದ 400 ರೂಪಾಯಿ ಇರುತ್ತೆ. ಹೆಚ್ಚಂದೆ 1000 ರೂಪಾಯಿ ಇರಬಹುದು. ಆದ್ರೆ ಇಲ್ಲೊಬ್ಬಳು ಮಹಿಳೆ ವಾಟರ್‌ ಡಿಸ್ಪೆನ್ಸರ್‌ ಅನ್ನು ಮಾರಾಟ ಮಾಡಲು ಮುಂದಾಗಿದ್ದು, ಆಕೆ ಆ ವಾಟರ್‌ ಡಿಸ್ಪೆನ್ಸರ್‌ ಗೆ ನಿಗಧಿಪಡಿಸಿರುವ ಬೆಲೆ ನೋಡಿ ಎಲ್ಲರೂ ಶಾಕ್‌ ಆಗುವಂತಾಗಿದೆ.

ಹೌದು, ಸಿಲಿಕಾನ್‌ ಸಿಟಿ ಬೆಂಗಳೂರಿನ ಮಹಿಳೆಯೊಬ್ಬಳು ವಾಟರ್‌ ಡಿಸ್ಪೆನ್ಸರ್‌ ಅನ್ನು ಮಾರಾಡ ಮಾಡಲು ಮುಂದಾಗಿದ್ದಾರೆ. ವಾಟರ್‌ ಡಿಸ್ಪೆನ್ಸರ್‌ ಮಾರಾಟ ಮಾಡಲು ಆಕೆ ವಿಧಿಸಿರುವ ಬೆಲೆ ನೂರು, ಇನ್ನೂರಲ್ಲ. ಬರೋಬ್ಬರಿ 41,000 ರೂ.ಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಮಹಿಳೆ ಹೇಳಿದ ದರ ಕೇಳಿ ನೆಟ್ಟಿಗರು ಶಾಕ್‌ ಆಗಿದ್ದಾರೆ.

ಇದನ್ನೂ ಓದಿ: 8ನೇ ಮಹಡಿಯಿಂದ ಬಿದ್ದ ಲಿಫ್ಟ್- ಐವರು ಟೆಕ್ಕಿಗಳಿಗೆ ಗಂಭೀರ ಗಾಯ

ಮೇಘನಾ ಅಲ್ಲಾ ಎಂಬಾಕೆ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, 2 ನೀರಿನ ಕ್ಯಾನ್‌ ಜೊತೆಗೆ ವಾಟರ್‌ ಡಿಸ್ಪೆನ್ಸರ್‌ ಇರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಇದರ ಬೆಲೆ 500 ಡಾಲರ್‌ (ಅಂದಾಜು 41,000 ರೂಪಾಯಿ). ಬೆಂಗಳೂರಿನಿಂದ ಹೊರಗೆ ಹೋಗುತ್ತಿರುವುದರಿಂದ ಇದನ್ನು ಮಾರಾಟ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಈ ಪೋಸ್ಟ್‌ ಭಾರಿ ವೈರಲ್‌ ಆಗಿದೆ. ವಾಟರ್‌ ಡಿಸ್ಪೆನ್ಸರ್‌ ಮಾರಾಟಕ್ಕೆ ಆಕೆ ವಿಧಿಸಿರುವ ರೇಟ್‌ ಕೇಳಿ ಜನ ದಂಗಾಗಿದ್ದಾರೆ.

ಈ ಪೋಸ್ಟ್‌ ವೈರಲ್‌ ಆಗುತ್ತಿದ್ದಂತೆ ಆ ಮಹಿಳೆಯನ್ನು ಅನೇಕರು ಗೇಲಿ ಮಾಡಿದ್ದಾರೆ. ಸೋಶಿಯಲ್‌ ಮೀಡಿಯಾ ಬಳಕೆದಾರರು ನಾನಾ ರೀತಿ ಕಾಮೆಂಟ್‌ ಮಾಡುತ್ತಿದ್ದಾರೆ. ‘ಇದು ಸಾರಿಗೆ ವೆಚ್ಚವನ್ನೂ ಒಳಗೊಂಡಿದೆಯೇ’ ಎಂದು ನೆಟ್ಟಿಗರೊಬ್ಬರು ತಮಾಷೆ ಮಾಡಿ ಕಾಮೆಂಟ್‌ ಮೂಲಕ ಪ್ರಶ್ನಿಸಿದ್ದಾರೆ. ‘ವಾಟರ್‌ ಡಿಸ್ಪೆನ್ಸರ್‌ಗೆ 500 ಡಾಲರ್‌ ದರ ಸ್ವಲ್ಪ ದುಬಾರಿಯಾಯಿತು’ ಎಂದು ಮತ್ತೊಬ್ಬ ನೆಟ್ಟಿಗ ಕಾಮೆಂಟ್‌ ಮಾಡಿದ್ದಾರೆ. ‘ನೀರನ್ನೂ ಸೇರಿಸಿ ರೇಟ್‌ ಹಾಕಿದ್ದೀರಾ’ ಎಂದು ಇನ್ನೊಬ್ಬರು ಗೇಲಿ ಮಾಡಿ ಪ್ರಶ್ನಿಸಿದ್ದಾರೆ. ‘ಈ ರೀತಿಯ ಪೋಸ್ಟ್‌ ಮೂಲಕ ಏನು ಹೇಳಲು ಹೊರಟಿದ್ದೀರಿ’ ಎಂದು ಒಬ್ಬರು ಪ್ರಶ್ನಿಸಿದ್ದಾರೆ.

Shwetha M