ಭಾರಿ ಇಳಿಕೆ ಕಂಡ ಟೊಮ್ಯಾಟೊ ಬೆಲೆ – ಕೆಜಿಗೆ 40 ರೂಪಾಯಿಗೆ ಮಾರಾಟ!
ಬೆಂಗಳೂರು: ಭಾರಿ ಏರಿಕೆ ಕಂಡಿದ್ದ ಟೊಮ್ಯಾಟೊ ಬೆಲೆಯಲ್ಲಿ ಈಗ ದಿಢೀರ್ ಇಳಿಕೆ ಕಂಡಿದೆ. 200 ರ ಗಡಿ ದಾಟಿ ಗ್ರಾಹಕರ ನಿದ್ದೆಗೆಡಿಸಿದ್ದ ಟೊಮ್ಯಾಟೊ ಬೆಲೆ ಈಗ ಮಾರುಕಟ್ಟೆಯಲ್ಲಿ ಕೆಜಿಗೆ 40 ರಿಂದ 50 ರೂಪಾಯಿಗೆ ಮಾರಾಟವಾಗುತ್ತಿದೆ.
ಇದನ್ನೂ ಓದಿ: ಏರ್ ಇಂಡಿಯಾದ ಹೊಸ ಲೋಗೊ ಅನಾವರಣ – ವಿನ್ಯಾಸ ಹೇಗಿದೆ ಗೊತ್ತಾ?
15 ಕೆಜಿಯ ಒಂದು ಬಾಕ್ಸ್ ಟೊಮ್ಯಾಟೊಗೆ 200 ರಿಂದ 2,600 ರೂಪಾಯಿ ಗಡಿ ದಾಟಿ ಸರ್ವಕಾಲಿಕ ದಾಖಲೆ ಬರೆದಿತ್ತು. ಆದರೆ ಇದೀಗ ಟೊಮ್ಯಾಟೊ ಬೆಲೆ ಭಾರಿ ಇಳಿಕೆಯಾಗಿದ್ದು, ಒಂದು ಬಾಕ್ಸ್ ಟೊಮ್ಯಾಟೊ ಬೆಲೆ ಕೇವಲ 400 ರಿಂದ 700 ರೂಪಾಯಿಗೆ ಮಾರಾಟವಾಗುತ್ತಿದೆ. ಈಗ ಟೊಮ್ಯಾಟೊ ಬೆಲೆ ಶೇ. 65 ರಿಂದ 70 ರಷ್ಟು ಇಳಿಕೆ ಕಂಡಿದೆ.
ಮಳೆ ಇದ್ದ ಕಾರಣದಿಂದ ರೈತರಿಂದ ಮಾರುಕಟ್ಟೆಗೆ ಟೊಮೆಟೊ ಸರಬರಾಜು ಆಗದ ಕಾರಣ ದರ ಜಾಸ್ತಿ ಆಗಿತ್ತು. ಮಳೆ ನಿಂತ ಕಾರಣ ಇದೀಗ ಟೊಮೆಟೊ ಸರಬರಾಜು ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೆಂಪು ಸುಂದರಿಯ ಬೆಲೆ ಕಡಿಮೆ ಆಗಿದೆ. ಬೆಲೆ ಕಡಿಮೆ ಆದ ಮೇಲೆ ಗ್ರಾಹಕರು ಬರುತ್ತಿಲ್ಲ ಎಂದು ವ್ಯಾಪಾರಸ್ಥರು ಹೇಳುತ್ತಿದ್ದಾರೆ.