ಐಷಾರಾಮಿ ಕಾರು ಖರೀದಿಸಿದ ರಾಖಿ ಭಾಯ್ – ರಾಕಿಂಗ್ ಸ್ಟಾರ್ ಯಶ್ ಕಾರಿನ ಬೆಲೆ 3 ಕೋಟಿ..!

ರಾಕಿಂಗ್ ಸ್ಟಾರ್ ಯಶ್ ರಾವಣ ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್ ನಟ ಯಶ್ ಅವರಿಗೆ ಕಾರುಗಳೆಂದರೇ ಸಿಕ್ಕಾಪಟ್ಟೆ ಕ್ರೇಜ್. ಯಶ್ ಬಳಿ ಹಲವಾರು ಐಶಾರಾಮಿ ಕಾರುಗಳಿವೆ. ಇದೀಗ ತಮ್ಮ ಕಾರು ಸಂಗ್ರಹಕ್ಕೆ ಹೊಸ ಕಾರೊಂದನ್ನು ಸೇರಿಸಿಕೊಂಡಿದ್ದಾರೆ.
ಇದನ್ನೂ ಓದಿ: BIGG BOSS 12ಕ್ಕೆ ಕಿಚ್ಚನೇ ಬಾಸ್! – ಸುದೀಪ್ ಹಾಕಿದ ಕಂಡೀಷನ್ಸ್ ಏನು?
ಸ್ಯಾಂಡಲ್‌ವುಡ್ ನಟ ಯಶ್ ಈಗ ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಸಕ್ಸಸ್ ನಂತರ ರಾಕಿಂಗ್ ಸ್ಟಾರ್ ಯಶ್, ದೊಡ್ಡಮಟ್ಟದ ಪ್ರಾಜೆಕ್ಟ್ಗಳಲ್ಲಿ ನಟಿಸುತ್ತಿದ್ದಾರೆ. ದೊಡ್ಡ-ದೊಡ್ಡ ಪ್ರಾಜೆಕ್ಟ್ಗಳ ಮೇಲೆ ಬಂಡವಾಳ ಕೂಡಾ ಹೂಡಿದ್ದಾರೆ. ಯಶ್ ತನ್ನ ಸಂಭಾವನೆಗೆ ತಕ್ಕಂತೆ ಐಶಾರಾಮಿ ಜೀವನಶೈಲಿಯನ್ನೂ ಅಳವಡಿಸಿಕೊಂಡಿದ್ದಾರೆ. ಐಶಾರಾಮಿ ಮನೆ, ಕಾರುಗಳಂತೂ ಸಾಕಷ್ಟಿವೆ. ಇದೀಗ ಅವರು ಹೊಸದೊಂದು ಕಾರೊಂದನ್ನು ಖರೀದಿ ಮಾಡಿದ್ದಾರೆ. ಕಾರಿನಷ್ಟೆ, ಕಾರಿನ ನಂಬರ್ ಪ್ಲೇಟ್ ಸಹ ಗಮನ ಸೆಳೆಯುತ್ತಿದೆ. ಸಿನಿಮಾ ಚಿತ್ರೀಕರಣಕ್ಕಾಗಿ ಮುಂಬೈನಲ್ಲಿ ಹೆಚ್ಚಿನ ಸಮಯವನ್ನು ಯಶ್ ಕಳೆಯುತ್ತಿದ್ದು, ಅಲ್ಲಿನ ಓಡಾಟಕ್ಕಾಗಿ ಐಶಾರಾಮಿ ಕಾರು ಖರೀದಿ ಮಾಡಿದ್ದಾರೆ.
ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರನ್ನು ಯಶ್ ಖರೀದಿ ಮಾಡಿದ್ದಾರೆ. ಈ ಕಾರು ಹಲವು ವೈಶಿಷ್ಟ್ಯಗಳನ್ನು ಒಳಗೊಂಡಿದ್ದು, ಅದ್ಭುತವಾದ ಕಂಫರ್ಟ್ ಹೊಂದಿದೆ. ಯಶ್ ಖರೀದಿ ಮಾಡಿರುವ ಲೆಕ್ಸಸ್ನ ಎಲ್ಎಂ 350ಎಚ್ 4ಎಸ್ ಅಲ್ಟ್ರಾ ಲೆಕ್ಷುರಿ ಕಾರಿನ ಬೆಲೆ ಸುಮಾರು 3 ಕೋಟಿ ರೂಪಾಯಿ. ನೀಲಿ ಬಣ್ಣದ ಕಾರನ್ನು ಯಶ್ ಖರೀದಿ ಮಾಡಿದ್ದು, ಏಪ್ರಿಲ್ ತಿಂಗಳಲ್ಲಿ ಈ ಕಾರಿನ ನೊಂದಣಿ ಆಗಿದೆ. ವಿಶೇಷವೆಂದರೆ ಮಹಾರಾಷ್ಟ್ರದಲ್ಲಿ ಈ ಕಾರಿನ ನೊಂದಣಿಯನ್ನು ನಟ ಯಶ್ ಮಾಡಿಸಿದ್ದಾರೆ. ಇದೇ ಕಾರಿನಲ್ಲಿ ಮುಂಬೈ ಏರ್ ಪೋರ್ಟ್ಗೆ ರಾಕಿ ಭಾಯ್ ಬಂದಿಳಿದ್ದಾರೆ. ಯಶ್ ಹೊಸ ಕಾರ್ ಮೇಲೆ MH47C 8055 ನಂಬರ್ ಪ್ಲೇಟ್ ಅಳವಡಿಸಲಾಗಿದೆ. ಈಗಾಗಲೇ ಯಶ್ ಬಳಿ ಇರೋ ಎಲ್ಲಾ ಕಾರ್ಗಳ ನಂಬರ್ ಪ್ಲೇಟ್ 8055 ಇದೇ ನಂಬರಿನಲ್ಲಿದೆ. ಸದ್ಯ ಟಾಕ್ಸಿಕ್ ಮತ್ತು ರಾಮಾಯಣ ಸಿನಿಮಾದ ಗ್ಲಿಂಪ್ಸ್ ಬಿಡುಗಡೆ ಮಧ್ಯೆದಲ್ಲೇ ರಾಕಿಂಗ್ ಸ್ಟಾರ್ ಯಶ್ ಯುಎಸ್ ಪ್ರವಾಸಕ್ಕೆ ಮುಂದಾಗಿದ್ದಾರೆ. ಟಾಕ್ಸಿಕ್ ಹಾಗೂ ರಾಮಾಯಣ ಸಿನಿಮಾಗಳ ಬಿಡುವಿಲ್ಲದ ಶೂಟಿಂಗ್‌ನಲ್ಲಿ ಯಶ್ ಭಾಗಿಯಾಗಿದ್ರು. ಇದೀಗ ಕುಟುಂಬದ ಜೊತೆ ಕಾಲ ಕಳೆಯಲು ಯುಎಸ್ ಪ್ರವಾಸಕ್ಕೆ ಯಶ್ ಕುಟುಂಬ ಹೊರಟಿದ್ದು, ವಿಮಾನ ನಿಲ್ದಾಣದ ವೀಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿವೆ.

ನೋಡಿರಿ

