ಅಬ್ಬಾಬ್ಬಾ.. ಈ ಸ್ವೀಟ್‌ ನ ಒಂದು ಕೆಜಿ ಬೆಲೆ ಬರೋಬ್ಬರಿ 21,000 ರೂಪಾಯಿ! – ಏನಿದರ ವಿಶೇಷತೆ ಗೊತ್ತಾ?

ಅಬ್ಬಾಬ್ಬಾ.. ಈ ಸ್ವೀಟ್‌ ನ ಒಂದು ಕೆಜಿ ಬೆಲೆ ಬರೋಬ್ಬರಿ 21,000 ರೂಪಾಯಿ! – ಏನಿದರ ವಿಶೇಷತೆ ಗೊತ್ತಾ?

ದೇಶದಾದ್ಯಂತ ದೀಪಾವಳಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಜನರು ಈಗಾಗಲೇ ಹೂವು, ಹಣ್ಣುಗಳ ಖರೀದಿಯಲ್ಲಿ ಬ್ಯೂಸಿಯಾಗಿದ್ದಾರೆ. ದೀಪಗಳನ್ನು ಹಚ್ಚಿ, ಸಿಹಿ ಹಂಚಿ ಸಂಭ್ರಮಿಸುವ ಜನಸಾಮಾನ್ಯರು ಹಬ್ಬದ ಪ್ರಯುಕ್ತ ಮನೆಯಲ್ಲಿ ಸಿಹಿ ತಿಂಡಿ-ತಿನಿಸುಗಳನ್ನು ತಯಾರಿಸುತ್ತಿದ್ದಾರೆ. ಇನ್ನೂ ಹಲವರು ಸಮಯದ ಅಭಾವ ಇರುವ ಕಾರಣ ಹೊರಗಿನಿಂದ ಹೆಚ್ಚಿನ ಪ್ರಮಾಣದಲ್ಲಿ ಸ್ವೀಟ್​ ತರುತ್ತಾರೆ. ಆದ್ರೆ, ಇಲ್ಲೊಂದು ಸಿಹಿ ತಿಂಡಿಗಳ ಮಳಿಗೆ ಅಲ್ಲಿನ ವಿಶೇಷ ಸ್ಪೀಟ್‌ ಅನ್ನು ಮಾರಾಟ ಮಾಡುತ್ತಿದೆ. ಸ್ವೀಟ್‌ ಅನ್ನು ಖರೀಸಲು ಹೊರಟ ಗ್ರಾಹಕರು ಅದರ ಬೆಲೆ ಕೇಳಿ ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ಎಲ್ಲಾ ಅಂಗಡಿಗಳು ಅಲ್ಲಿನ ಒಂದೊಂದು ಖಾದ್ಯದ ರುಚಿಯಿಂದಾಗಿ ಫೇಮಸ್‌ ಆಗಿರುತ್ತವೆ. ಆ ಸಿಹಿ ತಿನಿಸುಗೆ ದೊಡ್ಡ ಅಭಿಮಾನಿ ಬಳಗವೇ ಇರುತ್ತವೆ. ಅಹಮದಾಬಾದ್‌ನ ಸ್ವೀಟ್‌ ಅಂಗಡಿಯೊಂದು ವಿಶೇಷ ಸಿಹಿ ತಿಂಡಿಯಿಂದಾಗಿ ಸಿಕ್ಕಾಪಟ್ಟೆ ಫೇಮಸ್‌ ಆಗಿದೆ. ಹೀಗಾಗಿ ಅಲ್ಲಿನ ಸಿಹಿ ತಿನಿಸಿಗೆ ಭಾರಿ ಡಿಮ್ಯಾಂಡ್‌ ಶುರುವಾಗಿದೆ. ‘ಸ್ವರ್ಣ ಮುದ್ರಾ’ ಎಂಬ ಸ್ವೀಟ್​ ಸಿಕ್ಕಾಪಟ್ಟೆ ಜನಪ್ರಿಯತೆ ಗಳಿಸಿದ್ದು, ಇದರ ಪ್ರತಿ ಕೆಜಿಗೆ 21,000 ರೂ. ಬೆಲೆ ನಿಗದಿಯಾಗಿದೆ. ಸದ್ಯಕ್ಕೆ ಇದು ಅತ್ಯಂತ ದುಬಾರಿ ಸ್ವೀಟ್​ ಆಫ್​ ಅಹಮದಾಬಾದ್​ ಆಗಿದೆ. ಈ ಸುದ್ದಿ ಕೇಳಿ ಸಿಹಿಪ್ರಿಯರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ.

ಇದನ್ನೂ ಓದಿ: ದೀಪಾವಳಿ ಹಬ್ಬದ ಖುಷಿಯಲ್ಲಿ ಪಟಾಕಿ ಬಗ್ಗೆ ಎಚ್ಚರವಿರಲಿ – ಚಿಕಿತ್ಸೆಗೆ ತಕ್ಷಣವೇ ಸ್ಪಂದಿಸಲು ಕಣ್ಣಿನ ಆಸ್ಪತ್ರೆಗಳು ಸಜ್ಜು..!

‘ಸ್ವರ್ಣ ಮುದ್ರಾ’ ಹೆಸರಿನ ಸಿಹಿತಿಂಡಿ ಅಹಮದಾಬಾದ್‌ನಲ್ಲಿ ಜನಪ್ರಿಯವಾಗುತ್ತಿದೆ. ದೀಪಾವಳಿಗೂ ಮುನ್ನವೇ ಜನರು ಸಿಹಿತಿಂಡಿಗಳನ್ನು ಸಂಗ್ರಹಿಸುತ್ತಿರುವುದರಿಂದ, ಅದರ ಮೇಲೆ 24-ಕ್ಯಾರೆಟ್ ಚಿನ್ನದ ಪದರವನ್ನು ಬಳಸುವ ಈ ಖಾದ್ಯವು ಹೆಚ್ಚಿನ ಆಕರ್ಷಣೆಯನ್ನು ಪಡೆದುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.

ಸಿಹಿತಿಂಡಿಯ ಬೆಲೆ ಕೆಜಿಗೆ 21,000 ರೂ. ಇದ್ದು, ಅದರ ಒಂದು ತುಂಡು ಬೆಲೆ 1,400 ರೂ. ಒಂದು ಕಿಲೋಗ್ರಾಂ ಸ್ವರ್ಣ ಮುದ್ರಾ ಸಿಹಿತಿಂಡಿಯಲ್ಲಿ 15 ತುಂಡುಗಳಿವೆ. ಇದು ಬಾದಾಮಿ, ಬ್ಲೂಬೆರ್ರಿ, ಪಿಸ್ತಾ ಮತ್ತು ಕ್ರ್ಯಾನ್‌ಬೆರಿಗಳಂತಹ ವಿವಿಧ ಪದಾರ್ಥಗಳನ್ನು ಒಳಗೊಂಡಿದೆ. ಇದನ್ನು ಅಹಮದಾಬಾದ್‌ನ ಗ್ವಾಲಿಯಾ ಎಸ್‌ಬಿಆರ್ ಔಟ್‌ಲೆಟ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ.

ಈ ವರ್ಷ ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ವಿಶೇಷವಾಗಿ ತಯಾರಿಸಲಾಗಿದ್ದು, ಇದಕ್ಕೆ ಉತ್ತಮ ಪ್ರತಿಕ್ರಿಯೆ ಕೂಡ ದೊರಕುತ್ತಿದ್ದು, ಸ್ವೀಟ್​ ಆರ್ಡರ್ ಪಡೆದು ಅದಕ್ಕೆ ತಕ್ಕಂತೆ ತಯಾರಿ ನಡೆಸುತ್ತಿದ್ದೇವೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳನ್ನು ಹೊರತುಪಡಿಸಿ, 350 ರೂ.ನಿಂದ 15,000 ರೂ.ವರೆಗಿನ ಸಿಹಿತಿಂಡಿಗಳು ಮತ್ತು ಡ್ರೈ ಫ್ರೂಟ್ಸ್‌ಗಳಿಗಾಗಿ ಔಟ್‌ಲೆಟ್ ಅನೇಕ ಆರ್ಡರ್‌ಗಳನ್ನು ತೆಗೆದುಕೊಳ್ಳುತ್ತಿದೆ ಎಂದು  ಅಂಗಡಿ ಮಾಲಕಿ ರವೀನಾ ತಿಲ್ವಾನಿ ತಿಳಿಸಿದ್ದಾರೆ.

ಕೆಲವರು ತಮ್ಮ ಆರ್ಡರ್​ಗಳನ್ನೂ ಕಸ್ಟಮೈಸ್ ಮಾಡಿಸುತ್ತಿದ್ದಾರೆ. ಸ್ವರ್ಣ ಮುದ್ರಾ ಸಿಹಿತಿಂಡಿಗಳು ಇದೀಗ ಸ್ವೀಟ್​ ಖರೀದಿಸಲು ಆಗಮಿಸುವವರ ಗಮನ ಸೆಳೆಯುತ್ತಿವೆ ಎಂದು ತಿಳಿಸಿದ್ದಾರೆ.

Shwetha M