ವೈಎಸ್‌ಆರ್‌ಟಿಪಿ ನಾಯಕಿಯನ್ನು ಕಾರು ಸಮೇತ ಎಳೆದೊಯ್ದ ಪೊಲೀಸರು!

ವೈಎಸ್‌ಆರ್‌ಟಿಪಿ ನಾಯಕಿಯನ್ನು ಕಾರು ಸಮೇತ ಎಳೆದೊಯ್ದ ಪೊಲೀಸರು!

ಹೈದರಾಬಾದ್: ತೆಲಂಗಾಣದಲ್ಲಿ ರಾಜಕೀಯ ಹೈಡ್ರಾಮಾ ಜೋರಾಗಿಯೇ ಸಾಗುತ್ತಿದೆ. ಟಿಆರ್‌ಎಸ್ ಕಾರ್ಯಕರ್ತರು ತಮ್ಮ ಕಾರಿನ ಮೇಲೆ ದಾಳಿ ಮಾಡಿದ್ದಾರೆ ಎಂದು ಆರೋಪಿಸಿದ ವೈಎಸ್‌ಆರ್‌ಟಿಪಿ ನಾಯಕಿ ವೈಎಸ್ ಶರ್ಮಿಳಾ ಅವರನ್ನು ಪೊಲೀಸರು ಕಾರು ಸಮೇತ ಎಳೆದೊಯ್ದಿದ್ದಾರೆ. ಜಖಂಗೊಂಡ ಕಾರನ್ನು ಚಲಾಯಿಸಿ ಮುಖ್ಯಮಂತ್ರಿಯವರ ನಿವಾಸದ ಬಳಿ ಬಂದ ಶರ್ಮಿಳಾಗೆ ಪೊಲೀಸರು ತಡೆಯೊಡ್ಡಿದ್ದಾರೆ. ಸೋಮಾಜಿಗುಡದ ಯಶೋದಾ ಆಸ್ಪತ್ರೆ ಬಳಿ ಜನನಿಬಿಡ ರಸ್ತೆಯಲ್ಲಿ ಪ್ರಗತಿ ಭವನದತ್ತ  ಕಾರನ್ನು ಚಲಾಯಿಸುತ್ತಿದ್ದ ವೇಳೆ ಈ ಹೈಡ್ರಾಮಾ ನಡೆದಿದೆ.

ಇದನ್ನೂ ಓದಿ:   ಸೈಲೆಂಟ್ ಸುನಿಲ್ ಗೆ ಬಿಜೆಪಿ ಸೇರ್ಪಡೆಯಾಗಲು ಅವಕಾಶವಿಲ್ಲ -ನಳೀನ್ ಕುಮಾರ್ ಕಟೀಲ್

ನಿನ್ನೆಯ ಘರ್ಷಣೆಯಲ್ಲಿ ಹಾನಿಗೊಳಗಾದ ಕಾರಿನ ಚಾಲಕನ ಸೀಟಿನಲ್ಲಿ ಇಂದು ಬೆಳಿಗ್ಗೆ ವೈ.ಎಸ್.ಶರ್ಮಿಳಾ ಅವರು ಕುಳಿತು ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಹೋಗಲು ಪ್ರಯತ್ನಿಸಿದರು. ಈ ವೇಳೆ ಪೊಲೀಸರು, ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ವೈ.ಎಸ್.ಶರ್ಮಿಳಾ ಅವರ ಕಾರನ್ನು ಕ್ರೇನ್ ಮೂಲಕ ಎಳೆದೊಯ್ದಿದ್ದಾರೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಪಕ್ಷದ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  ಪಕ್ಷದ ಕಾರ್ಯಕರ್ತರು ಪ್ರತಿಭಟನೆ ನಡೆಸಿ ರಸ್ತೆಗಳನ್ನು ತಡೆದಿದ್ದಾರೆ. ಅನ್ಯಾಯ ಮತ್ತು ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿದ್ರೆ ಬಂಧಿಸುತ್ತೀರಾ ಎಂದು ವೈಎಸ್‌ಆರ್‌ಟಿಪಿ ನಾಯಕಿ ಪೊಲೀಸ್ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

suddiyaana