ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ

ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನ

ಖ್ಯಾತ ಕೃಷಿ ವಿಜ್ಞಾನಿ ಹಾಗೂ ಹಸಿರು ಕ್ರಾಂತಿಯ ಹರಿಕಾರ ಎಂ.ಎಸ್. ಸ್ವಾಮಿನಾಥನ್ ನಿಧನರಾಗಿದ್ದಾರೆ. ಅಧಿಕ ಇಳುವರಿಯ ಭತ್ತದ ತಳಿ ಅಭಿವೃದ್ಧಿಯಿಂದ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸುವ ಮೂಲಕ ಹಸಿರು ಕ್ರಾಂತಿಯ ಹರಿಕಾರ ಎಂದೇ ಎಂ.ಎಸ್. ಸ್ವಾಮಿನಾಥನ್ ಖ್ಯಾತರಾಗಿದ್ದರು. ಇವರು ಚೆನ್ನೈನಲ್ಲಿ ಶುಕ್ರವಾರ ಬೆಳಗ್ಗೆ 11.20ಕ್ಕೆ ಇಹಲೋಕ ತ್ಯಜಿಸಿದ್ದಾರೆ.

ಇದನ್ನೂ ಓದಿ: ಇ-ಮೇಲ್ ಮೂಲಕ ಬಂದಿದ್ದ ಜಾಮೀನು ಪಿಡಿಎಫ್ ಓಪನ್‌ ಮಾಡಲು ಪೊಲೀಸರು ವಿಫಲ! – 3 ವರ್ಷ ಜೈಲಿನಲ್ಲೇ ಉಳಿದ ವ್ಯಕ್ತಿ!

ಮಣ್ಕೊಂಬು ಸಾಂಬಸಿವನ್ ಸ್ವಾಮಿನಾಥನ್ ಆಗಸ್ಟ್ 7, 1925 ರಂದು ತಮಿಳುನಾಡಿನ ತಂಜಾವೂರು ಜಿಲ್ಲೆಯಲ್ಲಿ ಜನಿಸಿದ್ದರು. ಹಸಿರು ಕ್ರಾಂತಿ ಯೋಜನೆಯ ಮೂಲಕ, ಅವರು ಭಾರತದಲ್ಲಿ ಕೃಷಿ ಕ್ಷೇತ್ರದ ಪರಿವರ್ತನೆಯನ್ನು ಪ್ರಾರಂಭಿಸಿದರು. ಹಾಗೂ ದೇಶಾದ್ಯಂತ ವಿಸ್ತರಿಸಿದರು. ಬಡ ರೈತರು ತಮ್ಮ ಹೊಲಗಳಲ್ಲಿ ಮರಗಳನ್ನು ಬೆಳೆಸಲು ಪ್ರೋತ್ಸಾಹಿಸಿದರು. ಮತ್ತು ಸ್ವಾವಲಂಬನೆಯ ಹಾದಿಯನ್ನು ತೋರಿಸಿದರು. ಭಾರತದಲ್ಲಿ ತೀವ್ರ ಧಾನ್ಯದ ಕೊರತೆ ಉಂಟಾದಾಗ, ಅವರು ಹೊಲಗಳಲ್ಲಿ ಸುಧಾರಿತ ಬೀಜಗಳನ್ನು ಬೆಳೆಸಿದರು ಮತ್ತು ರೈತರಿಗೆ ಹೆಚ್ಚಿನ ಇಳುವರಿ ಪಡೆಯುವ ಮಾರ್ಗವನ್ನು ತೋರಿಸಿದರು. ಅವರ ಕೊಡುಗೆಯ ಫಲವಾಗಿ ಕೇವಲ 25 ವರ್ಷಗಳಲ್ಲಿ ಭಾರತೀಯ ರೈತರನ್ನು ಕೃಷಿಯಲ್ಲಿ ಸ್ವಾವಲಂಬಿಗಳನ್ನಾಗಿ ಮಾಡಿ ಹಸಿರು ಕ್ರಾಂತಿಯ ಹರಿಕಾರರೆನಿಸಿಕೊಂಡರು.

ವಿಶ್ವ ಸಂಸ್ಥೆಯ ಪರಿಸರ ಕಾರ್ಯಕ್ರಮವು ಸ್ವಾಮಿನಾಥನ್ ಅವರನ್ನು ‘ಅರ್ಥಿಕ ಪರಿಸರ ವಿಜ್ಞಾನದ ಪಿತಾಮಹ’ ಎಂದು ಬಣ್ಣಿಸಿದೆ. 1960 ಹಾಗೂ 70ರ ದಶಕದಲ್ಲಿ ರಾಸಾಯನಿಕ ಹಾಗೂ ಜೈವಿಕ ತಂತ್ರಜ್ಞಾನದ ಮೂಲಕ ಅಕ್ಕಿ ಮತ್ತು ಗೋಧಿಯ ಉತ್ಪಾದನೆ ಹೆಚ್ಚಿಸಲು ರೂಪಿಸಲಾದ ಹಸಿರು ಕ್ರಾಂತಿ ಯೋಜನೆಯಲ್ಲಿ ಕೇಂದ್ರ ಕೃಷಿ ಸಚಿವರಾಗಿದ್ದ ಸಿ.ಸುಬ್ರಮಣಿಯಂ, ಜಗಜೀವನ್ ರಾಮ್ ಅವರೊಂದಿಗೆ ಸ್ವಾಮಿನಾಥನ್ ಕೆಲಸ ಮಾಡಿದ್ದರು.

ಸ್ವಾಮಿನಾಥನ್ ಅವರು ಭಾರತೀಯ ಕೃಷಿ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಗಾಗಿ ಅನೇಕ ಗೌರವಗಳನ್ನು ಪಡೆದರು. ಪದ್ಮಶ್ರೀ (1967) ಪದ್ಮಭೂಷಣ (1972) ಪದ್ಮವಿಭೂಷಣ (1989) ಅಂತರಾಷ್ಟ್ರೀಯ ಪ್ರಶಸ್ತಿಗಳು ವೋಲ್ವೋ ಅಂತರಾಷ್ಟ್ರೀಯ ಪರಿಸರ ಪ್ರಶಸ್ತಿ (1999) ವಿವಿಧ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಗೌರವಗಳು 1990 ರಲ್ಲಿ ಚೆನ್ನೈನಲ್ಲಿ ಎಂಎಸ್ ಸ್ವಾಮಿನಾಥನ್ ರಿಸರ್ಚ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಇದು ಕೃಷಿ ಸಂಶೋಧನೆ ಕ್ಷೇತ್ರದಲ್ಲಿ ನಾವೀನ್ಯತೆಯನ್ನು ಉತ್ತೇಜಿಸಿತು ಮತ್ತು ಅವರ ಸ್ಫೂರ್ತಿಯೊಂದಿಗೆ ಪ್ರಮುಖ ಯೋಜನೆಗಳನ್ನು ಪ್ರಾರಂಭಿಸಿತು. ಅವರ ಸಮರ್ಪಿತ ಕೊಡುಗೆಯಿಂದಾಗಿ, ಅವರು ಭಾರತೀಯ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೊಸ ಮಾನದಂಡಗಳನ್ನು ಸ್ಥಾಪಿಸಿದರು ಮತ್ತು ದೇಶದ ಆಹಾರ ಭದ್ರತೆಯನ್ನು ಬಲಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಜಬಲ್ಪುರದಲ್ಲಿರುವ ಜವಾಹರಲಾಲ್ ನೆಹರು ಕೃಷಿ ವಿಶ್ವವಿದ್ಯಾಲಯವು ಭಾರತದ ಅತ್ಯುತ್ತಮ ಕೃಷಿ ಕೇಂದ್ರಗಳಲ್ಲಿ ಒಂದಾಗಿದೆ, ಇದನ್ನು ಅವರ ಪ್ರಯತ್ನದ ಪರಿಣಾಮ ಎಂದೇ ಪರಿಗಣಿಸಬಹುದು. ಏಕೆಂದರೆ ಭಾರತದಲ್ಲಿ ಉತ್ತಮ ಗುಣಮಟ್ಟದ ಕೃಷಿಯ ಮೊದಲ ಪ್ರಯತ್ನವನ್ನು ಸ್ವಾಮಿನಾಥನ್ ಮಾಡಿದ್ದಾರೆ.

Sulekha