ಅನಿಮಲ್ ಸಿನಿಮಾದ ಆ ದೃಶ್ಯ ನೋಡಿ ಹೆತ್ತವರಿಗೆ ಆಘಾತ – ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯ ಬೇಕಿತ್ತಾ ಎಂದು ನಟಿ ತೃಪ್ತಿಗೆ ಹೆತ್ತವರ ಪ್ರಶ್ನೆ

ಅನಿಮಲ್ ಸಿನಿಮಾದ ಆ ದೃಶ್ಯ ನೋಡಿ ಹೆತ್ತವರಿಗೆ ಆಘಾತ – ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯ ಬೇಕಿತ್ತಾ ಎಂದು ನಟಿ ತೃಪ್ತಿಗೆ ಹೆತ್ತವರ ಪ್ರಶ್ನೆ

ಅನಿಮಲ್ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಧೂಳೆಬ್ಬಿಸುತ್ತಿದೆ. ಅನಿಮಲ್ ಚಿತ್ರದಲ್ಲಿ ಕೆಲವೊಂದು ದೃಶ್ಯಗಳು ಸಾಕಷ್ಟು ಚರ್ಚೆಗೂ ಕಾರಣವಾಗಿದೆ. ಅದರಲ್ಲೂ ರಣಬೀರ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡ ನಟಿ ತೃಪ್ತಿಅವರನ್ನು ಸಿನಿಮಾದಲ್ಲಿ ನೋಡಿ ಹೆತ್ತವರು ಶಾಕ್ ಆಗಿದ್ದಾರಂತೆ. ಈ ಬಗ್ಗೆ ಸ್ವತಃ ತೃಪ್ತಿ ಅವರೇ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ಕಿಚ್ಚನ ಚಪ್ಪಾಳೆ ಬಗ್ಗೆ ನಮ್ರತಾ ಮತ್ತು ವಿನಯ್ ಅನುಮಾನ – ಸುದೀಪ್ ಮೇಲೆ ಇಂಥಾ ಅನುಮಾನ ಸರಿಯೇ ಬಿಗ್‌ಬಾಸ್?

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡುತ್ತಿದೆ. ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ನಡುವಿನ ಕೆಮಿಸ್ಟ್ರಿ ಕೆಲಸ ಮಾಡಿದೆ. ಇದರ ಜೊತೆಗೆ ನಟಿ ತೃಪ್ತಿ ದಿಮ್ರಿ ಪಾತ್ರವೂ ಕ್ರೇಜ್ ಸೃಷ್ಟಿ ಮಾಡುತ್ತಿದೆ. ‘ಅನಿಮಲ್’ ಚಿತ್ರದಲ್ಲಿ ರಣಬೀರ್ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ತೃಪ್ತಿ ನಟಿಸಿದ್ದಾರೆ. ಈ ದೃಶ್ಯಗಳಿಂದಾಗಿಯೇ ಅವರು ಗಮನ ಸೆಳೆದಿದ್ದಾರೆ. ತೃಪ್ತಿ ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರ ಹಿಂಬಾಲಕರ ಸಂಖ್ಯೆ ಹೆಚ್ಚುತ್ತಿದೆ. ಆದರೆ,  ಇದೀಗ ಅವರು ಸಂದರ್ಶನವೊಂದರಲ್ಲಿ ತನ್ನ ಅಭಿನಯಕ್ಕೆ ಹೆತ್ತವರ ಪ್ರತಿಕ್ರಿಯೆ ಹೇಗಿತ್ತು ಎಂಬ ಬಗ್ಗೆ ಮಾತನಾಡಿದ್ದಾರೆ. ‘ಅನಿಮಲ್’ ಚಿತ್ರವನ್ನು ತೃಪ್ತಿ ಅವರ ತಂದೆ, ತಾಯಿ ವೀಕ್ಷಿಸಿದ್ದಾರೆ. ಅದರಲ್ಲಿ ಬರುವ ದೃಶ್ಯಗಳನ್ನು ನೋಡಿ ಅವರು ಆಘಾತಕ್ಕೊಳಗಾಗಿದ್ದಾರಂತೆ. ‘ಅನಿಮಲ್ ಸಿನಿಮಾ ನೋಡಿ ನನ್ನ ಪಾಲಕರು ಆಘಾತಕ್ಕೊಳಗಾಗಿದ್ದರು. ನಾವು ಈ ರೀತಿಯ ಸಿನಿಮಾಗಳನ್ನು ನೋಡಿಲ್ಲ, ಆ ದೃಶ್ಯಗಳಿಂದ ಉಂಟಾದ ಶಾಕ್‌ನಿಂದ ಹೊರಬರಲು ಅವರಿಗೆ ಸ್ವಲ್ಪ ಸಮಯ ಬೇಕಾಯಿತು. ಪೋಷಕರಾದವರಿಗೆ ಹಾಗೆ ಅನಿಸುವುದು ಸಹಜ. ಆದರೆ ಅವರು ನನ್ನನ್ನು ಅರ್ಥಮಾಡಿಕೊಂಡರು’ ಎಂದಿದ್ದಾರೆ ತೃಪ್ತಿ. ‘ಯಾವುದೇ ತಪ್ಪು ಮಾಡುತ್ತಿಲ್ಲ ಎಂದು ನಾನು ಅವರಿಗೆ ಹೇಳಿದೆ. ನಾನು ಸುರಕ್ಷಿತವಾಗಿ ಇರುತ್ತೇನೆ. ಅಂತಹ ದೃಶ್ಯಗಳನ್ನು ಮಾಡಲು ನನಗೆ ಯಾವುದೇ ತೊಂದರೆ ಇಲ್ಲ. ನಾನೊಬ್ಬ ನಟಿ ಮತ್ತು ನಾನು ಒಂದು ಪಾತ್ರಕ್ಕೆ 100 ಪ್ರತಿಶತ ನೀಡಬೇಕು’ ಎಂದು ಹೆತ್ತವರಿಗೆ ವಿವರಿಸಿದ್ದಾಗೆ ತೃಪ್ತಿ ಹೇಳಿಕೊಂಡಿದ್ದಾರೆ.

‘ಅನಿಮಲ್’ ಸಿನಿಮಾದ ಇಂಟಿಮೇಟ್ ದೃಶ್ಯ ಮಾಡುವಾಗ ಸೆಟ್ನಲ್ಲಿ ಇದ್ದಿದ್ದು ಕೇವಲ ನಾಲ್ಕು ಮಂದಿ ಮಾತ್ರ. ನಟ ರಣಬೀರ್ ಕಪೂರ್, ತೃಪ್ತಿ, ನಿರ್ದೇಶಕ ಸಂದೀಪ್ ರೆಡ್ಡಿ ವಂಗ ಹಾಗೂ ಛಾಯಾಗ್ರಾಹಕ ಮಾತ್ರ ಶೂಟಿಂಗ್ ಸ್ಪಾಟ್ನಲ್ಲಿದ್ದರು. ಹೀಗಾಗಿ, ಯಾವುದೇ ಒತ್ತಡ, ಮುಜುಗರ ಇಲ್ಲದೆ ಈ ದೃಶ್ಯವನ್ನು ಶೂಟ್ ಮಾಡಲಾಯಿತು. ಕಂಫರ್ಟ್ ಇದೆಯೇ ಎಂದು ನಿರ್ದೇಶಕರು ಆಗಾಗ ತೃಪ್ತಿ ಅವರನ್ನು ಕೇಳುತ್ತಲೇ ಇದ್ದರು ಎಂದು ಹೇಳಿಕೊಂಡಿದ್ದಾರೆ ತೃಪ್ತಿ.

Sulekha