ದತ್ತು ಮಗಳು ನಾಪತ್ತೆಯಾಗಿದ್ದ ನೋವು ಸಾವಿಗೆ ಕಾರಣವಾಯ್ತಾ?- ಕಾಪು ಲೀಲಾಧರ ಶೆಟ್ಟಿ ದಂಪತಿ ದುರಂತ ಅಂತ್ಯ ಕಂಡು ಕಣ್ಣೀರಿಟ್ಟ ಜನ

ದತ್ತು ಮಗಳು ನಾಪತ್ತೆಯಾಗಿದ್ದ ನೋವು ಸಾವಿಗೆ ಕಾರಣವಾಯ್ತಾ?- ಕಾಪು ಲೀಲಾಧರ ಶೆಟ್ಟಿ ದಂಪತಿ ದುರಂತ ಅಂತ್ಯ ಕಂಡು ಕಣ್ಣೀರಿಟ್ಟ ಜನ

ಕಾಪು ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂದರ ಶೆಟ್ಟಿಯವರ ದುರಂತ ಅಂತ್ಯಕ್ಕೆ ಕಾಪು ಜನತೆ ಕಂಬನಿ ಮಿಡಿದಿದ್ದಾರೆ. ಲೀಲಾಧರ ಶೆಟ್ಟಿಯವರ ವ್ಯಕ್ತಿತ್ವ ಏನು ಅನ್ನೋದು ದಂಪತಿಯ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡ ಅಪಾರ ಜನಸ್ತೋಮವೇ ಸಾಕ್ಷಿಯಾಗಿದೆ. ಸಮಾಜ ಸೇವಕ, ರಂಗಕರ್ಮಿ, ನೊಂದವರ ಪಾಲಿನ ಆಶಾಕಿರಣವಾಗಿದ್ದ ಲೀಲಾಧರ ಶೆಟ್ಟಿಯವರ ವೈಯಕ್ತಿಕ ಬದುಕಿನ ಆ ಒಂದು ನೋವು ಜೀವಕ್ಕೆ ಕಂಟಕವಾಗುತ್ತದೆ ಅನ್ನೋದನ್ನು ಯಾರೂ ಊಹಿಸಿರಲಿಲ್ಲ.

ಇದನ್ನೂ ಓದಿ: ಕಾಪು ಲೀಲಾಧರ ಶೆಟ್ಟಿ, ವಸುಂದರಾ ಶೆಟ್ಟಿ ದಂಪತಿ ದುರಂತ ಅಂತ್ಯ – ಜೊತೆಯಲ್ಲೇ ನೇಣಿಗೆ ಶರಣಾದ ದಂಪತಿ

ಕಾಪು ಜನತೆಯ ಪ್ರೀತಿಯ ಲೀಲಣ್ಣ ಇನ್ನು ನೆನಪು ಮಾತ್ರ. ಕಾಪು ಲೀಲಾಧರ ಶೆಟ್ಟಿ ಮತ್ತು ಅವರ ಪತ್ನಿ ವಸುಂದರ ಶೆಟ್ಟಿ ಆತ್ಮಹತ್ಯೆಯ ಸುದ್ದಿ ಕೇಳಿ ಕಾಪುವಿನ ಜನ ದಂಗಾಗಿ ಹೋಗಿದ್ದರು. ಯಾಕೆಂದರೆ, ಎಲ್ಲರ ಪ್ರೀತಿಯ ಲೀಲಣ್ಣ ಸಮಾಜಸೇವೆಗೆ ಹೆಸರದಾವರು. ನೊಂದವರ ಪಾಲಿನ ಆಶಾಕಿರಣ, ಧಾರ್ಮಿಕ ಮತ್ತು ಸಾಮಾಜಿಕ ಸೇವೆಗೆ ಎತ್ತಿದ ಕೈ. ಗಂಡನ ಸೇವೆಗೆ ಸದಾ ಪತ್ನಿಯ ಬೆಂಬಲ. ಕಾಪು ತಾಲೂಕಿನ ರಂಗ ತರಂಗ ನಾಟಕ ಸಂಸ್ಥೆಯ ಸ್ಥಾಪಕ ಕೆ. ಲೀಲಾದರ ಶೆಟ್ಟಿ(68) ಮತ್ತು ಅವರ ಪತ್ನಿ ವಸುಂದರ ಶೆಟ್ಟಿ(58) ಅವರ ಈ ದುರಂತ ಅಂತ್ಯಕ್ಕೆ ಕಾರಣ ಬಯಲಾಗಿದೆ. ಉಡುಪಿ ಜಿಲ್ಲೆಯ ಕಾಪು ತಾಲೂಕಿನ ನಿವಾಸದಿಂದ 17 ವರ್ಷದ ದತ್ತು ಮಗಳು ನಾಪತ್ತೆಯಾಗಿದ್ದಳು. ಲೀಲಣ್ಣ ದಂಪತಿಗೆ ಮಕ್ಕಳಿರಲಿಲ್ಲ. ಹೀಗಾಗಿ ದತ್ತು ಮಗಳನ್ನು ಮುದ್ದಿನಿಂದ ಸಾಕಿದ್ದರು. ಆದರೆ, ದತ್ತು ಮಗಳು ಮನೆ ಬಿಟ್ಟುಹೋದ ನೋವು ದಂಪತಿಯನ್ನು ತೀವ್ರವಾಗಿ ಕಾಡಿತ್ತು. ಮಾನಸಿಕವಾಗಿ ಕುಗ್ಗಿಸಿತ್ತು. ಹೀಗಾಗಿ

ಡಿಸೆಂಬರ್ 12ರ ರಾತ್ರಿ 11:20 ರಿಂದ ಡಿಸೆಂಬರ್ 13 ರ ಬೆಳಗ್ಗೆ 12:30 ರ ನಡುವೆ ದಂಪತಿ ಸೀರೆ ಬಳಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ಮೃತ ದಂಪತಿ ಮಗಳು ಕಾಣೆಯಾದ ಬಗ್ಗೆ ಮೃತ ಲೀಲಾಧರ್ ಅವರ ಸಂಬಂಧಿ ಮೋಹನ್ ಕುಮಾರ್ ಡಿ ಶೆಟ್ಟಿ ಅವರು ದೂರು ನೀಡಿದ್ದು ದೂರಿನ ಆಧಾರದ ಮೇಲೆ ಕಾಪು ಪೊಲೀಸರು ಅಪಹರಣ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ಹಿಂದೆ ಕಾಪು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಲೀಲಾಧರ್ ಅವರು ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದರು. ಅವರ ಹೆಸರಾಂತ ನಾಟಕ ತಂಡವು ಅವರ ಜನಪ್ರಿಯತೆಗೆ ಸಾಕ್ಷಿಯಾಗಿದೆ ಮತ್ತು ಅವರು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದರು.

Sulekha