ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಹೋದ ಅಂಗಡಿ ಮಾಲೀಕ – ಆಮೇಲೆ ನಡೆದಿದ್ದು ದೊಡ್ಡ ಅವಾಂತರ

ರಾತ್ರಿಯಿಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಹೋದ ಅಂಗಡಿ ಮಾಲೀಕ – ಆಮೇಲೆ ನಡೆದಿದ್ದು ದೊಡ್ಡ ಅವಾಂತರ

ಬೆಂಗಳೂರು: ರಾತ್ರಿ ಇಡೀ ಮೊಬೈಲ್ ಚಾರ್ಜ್ ಗೆ ಇಟ್ಟು ಮಲಗುವವರು ಕೊಂಚ ಯೋಚಿಸಬೇಕಾಗಿದೆ. ಇತ್ತೀಚಿನ ದಿನಗಳಲ್ಲಂತೂ ಮೊಬೈಲ್ ಸ್ಪೋಟದಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಇದರಿಂದಾಗಿ ನಿಮ್ಮ ಜೀವಕ್ಕೆ ಆಪತ್ತು ಎದುರಾಗೋ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: ಮನೆಯಲ್ಲಿ ಬೆಂಕಿಯ ರುದ್ರನರ್ತನ – ಬಾತ್‌ರೂಮ್‌ನಲ್ಲಿ ಅಡಗಿ ಕುಳಿತರೂ ಬದುಕಲಿಲ್ಲ ದಂಪತಿ..!

ಮೊಬೈಲ್ ಅಂಗಡಿ ಮಾಲೀಕನೊಬ್ಬ ರಾತ್ರಿ ಇಡೀ ಮೊಬೈಲ್ ಚಾರ್ಜ್ ಇಟ್ಟು ಹೋಗಿದ್ದಾನೆ. ಮುಂಜಾನೆ ವೇಳೆ ಶಾಕ್ ಸರ್ಕ್ಯೂಟ್ ನಿಂದಾಗಿ ಮೊಬೈಲ್ ಸ್ಪೋಟಗೊಂಡಿದ್ದು, ಇದರ ಪರಿಣಾಮ ಅಂಗಡಿ ಸಂಪೂರ್ಣ ಭಸ್ಮವಾಗಿದೆ.

ಈ ಘಟನೆ ಬೆಂಗಳೂರಿನ ವಿಜಯನಗರದಲ್ಲಿ ಬೆಳಗ್ಗೆ 7 ಗಂಟೆಗೆ ಘಟನೆ ನಡೆದಿದೆ. ಅಂಗಡಿ ಮಾಲೀಕ ರಾತ್ರಿ ಮೊಬೈಲ್​ ಚಾರ್ಜ್​​ ಇಟ್ಟು ಮನೆಗೆ ಹೋಗಿದ್ದ. ಇಂದು ಬೆಳಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಮಾಲೀಕನಿಗೆ ಶಾಕ್ ಆಗಿದೆ. ಶಾರ್ಟ್​ಸರ್ಕ್ಯೂಟ್​ನಿಂದ ಅಂಗಡಿ ಸಂಪೂರ್ಣ ಬೆಂಕಿಗಾಹುತಿಯಾಗಿದೆ.

ಸುದ್ದಿ ತಿಳಿದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಘಟನೆ ವಿಜಯನಗರ ಪೊಲೀಸ್  ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿ, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

suddiyaana