ನನ್ನನ್ನು ಮದುವೆಯಾಗುವವನಿಗೆ ರೀಲ್ಸ್ ಗೊತ್ತಿದ್ರೆ ಸಾಕು! – ವಿವಾಹವಾಗಲು ಹೊರಟ ಯುವತಿಯ ವಿಭಿನ್ನ ಬೇಡಿಕೆ..!

ಇದು ಸ್ಮಾರ್ಟ್ ಫೋನ್ ಜಮಾನ. ಫೋನ್ ಜನರ ಜೀವನದ ಒಂದು ಭಾಗವೇ ಆಗಿ ಹೋಗಿದೆ. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋ ವರೆಗೂ ಫೋನ್ ಕೈಯಲ್ಲಿ ಇರಲೇಬೇಕು. ದಿನವಿಡೀ ಸೋಶಿಯಲ್ ಮೀಡಿಯಾ ಕಾಲಕಳೆಯುತ್ತಾರೆ. ಇನ್ನು ಯುವತಿಯರ ಬಗ್ಗೆ ಕೇಳಬೇಕೆ? ಸೆಲ್ಫಿ, ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇಲ್ಲೊಬ್ಬಳು ಯುವತಿಯೂ ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್ ಆಗಿದ್ದಾಳೆ. ಇದೀಗ ಆಕೆ ಮದುವೆಯಾಗಲು ಮುಂದಾಗಿದ್ದು, ತನ್ನ ಬಾಳ ಸಂಗಾತಿಯಾಗಿ ಬರುವವ ಯಾವೆಲ್ಲಾ ಕೆಲಸಗಳನ್ನು ಕಲಿತಿರಬೇಕು ಅಂತಾ ಜಾಹಿರಾತು ನೀಡಿದ್ದು, ಭಾರಿ ವೈರಲ್ ಆಗಿದೆ.
ಯುವತಿಯೊಬ್ಬಳು ಮದುವೆಯಾಗಲು ಹೊರಟಿದ್ದಾಳೆ. ತಾನು ಮದುವೆಯಾಗು ಯುವಕನಿಗೆ ಯಾವೆಲ್ಲಾ ಕೆಲಸಗಳು ಗೊತ್ತಿರಬೇಕು ಅಂತಾ ಪಟ್ಟಿ ಮಾಡಿ ಮ್ಯಾಟ್ರಿಮೋನಿಯಲ್ ಸೈಟ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದೀಗ ಈ ಪೋಸ್ಟ್ ದೊಡ್ಡ ಮಟ್ಟಿನಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಟಾಯ್ಲೆಟ್ ಕಮೋಡ್ಗಿಂತಲೂ 2,000 ಪಟ್ಟು ಕೊಳಕು ಅಡುಗೆ ಮನೆಯಲ್ಲಿರುವ ಈ ವಸ್ತು!
ರಿಯಾ ಎಂಬ ಮಹಿಳೆ ಮ್ಯಾಟ್ರಿಮೋನಿಯಲ್ ತನ್ನ ಪ್ರೊಫೈಲ್ ಮಾಡಿದ್ದಾಳೆ. ಅದರಲ್ಲಿ ಜಾಹೀರಾತ ಒಂದನ್ನು ಹಂಚಿಕೊಂಡಿದ್ದಾಳೆ. ಈ ಜಾಹಿರಾತಿನಲ್ಲಿ ತನ್ನ ಜೀವನ ಸಂಗಾತಿಯಲ್ಲಿ ಯಾವ ಗುಣ ಅಥವಾ ಆತ ಏನೆಲ್ಲಾ ಕಲಿತಿರಬೇಕು ಎಂಬ ವಿಚಾರಗಳನ್ನ ಹಂಚಿಕೊಂಡಿದ್ದಾಳೆ.
ರಿಯಾ ಕೊಟ್ಟ ಮ್ಯಾಟ್ರಿಮೋನಿಯಲ್ ಜಾಹೀರಾತಿನ ಪೋಟೋವನ್ನ ಆಯುಷಿ ಗುಪ್ತಾ ಎಂಬ ಮಹಿಳೆ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಇದರಲ್ಲಿ ನಾನು ಮದುವೆಯಾಗುಲು ಬಯಸುವ ಯುವಕ ನನ್ನ ಜತೆಯಲ್ಲಿ ರೀಲ್ಸ್ ಮಾಡಬೇಕು. ನಾವಿಬ್ಬರೂ ಜತೆಯಾಗಿ ಮದುವೆಯ ಬಳಿಕ ರೀಲ್ಸ್ ಮಾಡುವ ಇಚ್ಛೆಸುತ್ತೇನೆ. ಅಲ್ಲದೆ ಪ್ರೀಮಿಯರ್ ಪ್ರೊ ಎಡಿಟಿಂಗ್ ಮಾಡೋದು ಆತನಿಗೆ ತಿಳಿದಿರಬೇಕು ಎಂದು ಜಾಹೀರಾತಿನಲ್ಲಿ ಬರೆದಿದ್ದಾಳೆ. ಜತೆಗೆ ಆಕೆಯ ಇ-ಮೇಲ್ ಐಡಿಯನ್ನೂ ಹಾಕಿ ಆಸಕ್ತರು ಇದಕ್ಕೆ ಮೇಲ್ ಮಾಡಿ ಎಂದು ಉಲ್ಲೇಖಿಸಿದ್ದಾರೆ.
ಸದ್ಯ ರಿಯಾ ಜಾಹೀರಾತಿಗೆ ಜನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದು, ನೀನು ಜೀವನ ಸಂಗಾತಿಯನ್ನು ಹುಡುಕುವುದಕ್ಕಿಂತ ವಿಡಿಯೋ ಎಡಿಟರ್ ಮತ್ತು ಕ್ಯಾಂಪೇನ್ ಮ್ಯಾನೇಜರ್ ಅನ್ನೇ ಹುಡುಕಿಕೋ ಎಂದು ಕಾಮೆಂಟ್ ಮಾಡಿದ್ದಾರೆ.