ನಿನ್ನ ಸಾವು ಹತ್ತಿರದಲ್ಲಿದೆ ಎಂದು ವೃದ್ಧೆ ನುಡಿದಳು ಭವಿಷ್ಯ – ಅರೆಗಳಿಗೆಯಲ್ಲೇ ಸತ್ತೇ ಹೋದಳು ಯುವತಿ..!

ನಿನ್ನ ಸಾವು ಹತ್ತಿರದಲ್ಲಿದೆ ಎಂದು ವೃದ್ಧೆ ನುಡಿದಳು ಭವಿಷ್ಯ – ಅರೆಗಳಿಗೆಯಲ್ಲೇ ಸತ್ತೇ ಹೋದಳು ಯುವತಿ..!

ಆಕೆ ಚೆನ್ನಾಗಿಯೇ ಇದ್ದಳು. ಆದರೂ ಅದ್ಯಾಕೋ ತನ್ನ ಭವಿಷ್ಯ ಕೇಳಲು ಅಂಗೈ ಶಾಸ್ತ್ರ ಹೇಳುವ ಮಹಿಳೆಯೊಬ್ಬಳ ಬಳಿ ಹೋಗಿದ್ದಳು. ಆಕೆಯೋ ಇವಳ ಕೈ ನೋಡಿದವಳೇ ನಿನ್ನ ಸಾವು ಸಮೀಪಿಸುತ್ತಿದೆ. ನಿನ್ನ ಸಾವು ಹತ್ತಿರದಲ್ಲಿದೆ ಎಂದು ಹೇಳಿದಳು. ಈಕೆಗೆ ಅದು ಹೇಗೆ ಸಾಧ್ಯ ಎಂಬ ಅಚ್ಚರಿ ಜೊತೆಗೆ ಆತಂಕವೂ ಆಗಿತ್ತು. ಆನಂತರ ನಡೆದಿದ್ದು ಮಾತ್ರ ಯಾರೂ ಊಹಿಸಿಕೊಳ್ಳಲಾಗದ ಘಟನೆ.

ಇದನ್ನೂ ಓದಿ:ವಾಕಿಂಗ್ ಮಾಡದೆಯೇ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು – ಮೆಟ್ಟಿಲು ಹತ್ತಿದರೆ ಏನೆಲ್ಲಾ ಪ್ರಯೋಜನ?

ಅದೃಷ್ಟ ಹೇಳುವವರಿಗೆ ಮತ್ತು ಪಾಮ್ ರೀಡರ್‌ಗಳಿಗೆ ಹೆಸರುವಾಸಿಯಾಗಿರುವ ಮಾಸಿಯೊದಲ್ಲಿ ಒಂದು ವಿಲಕ್ಷಣ ಘಟನೆ ನಡೆದಿದೆ. ಅಂಗೈ ನೋಡಿ ಶಾಸ್ತ್ರ ಹೇಳುವ ಮಹಿಳೆಯೊಬ್ಬಳು ನುಡಿದ ಭವಿಷ್ಯ ಸತ್ಯವಾಗಿದೆ. ಆದರೆ, ಸತ್ಯವಾಗಿದ್ದಕ್ಕೆ ಕಾರಣ ಕೂಡಾ ಆಕೆಯೇ. ಆಕೆ ಮಾಡಿದ ನಂಬಿಕೆ ದ್ರೋಹಕ್ಕೆ ಯುವತಿಯೊಬ್ಬಳು ಬಲಿಯಾಗಿದ್ದಾಳೆ.

ಮಾಸಿಯೊದಲ್ಲಿ ಬ್ರೆಜಿಲಿಯನ್ ಮಹಿಳೆ  ಫೆರ್ನಾಂಡಾ ವಲೋಜ್ ಪಿಂಟೋ ಎಂಬಾಕೆ ಭವಿಷ್ಯದ ಬಗ್ಗೆ ತಿಳಿದುಕೊಳ್ಳಲು ಅಂಗೈ ನೋಡಿ ಶಾಸ್ತ್ರ ಹೇಳುವ ವೃದ್ಧೆಯೊಬ್ಬಳ ಬಳಿ ತೆರಳಿದ್ದಾಳೆ. ಕೈ ಕೊಟ್ಟು ನನ್ನ ಭವಿಷ್ಯ ನೋಡಿ ಅಂತಾ ಹೇಳಿದ್ದಾಳೆ. ಪಾಮ್ ರೀಡರ್ ಆಕೆಯನ್ನು ನೋಡುತ್ತಿದ್ದಂತೆ ನೀನು ಸಾವಿಗೆ ಹತ್ತಿರದಲ್ಲಿದ್ದೀಯಾ, ಶೀಘ್ರದಲ್ಲೇ ಸಾಯುವೆ ಎಂದು ಹೇಳಿದ್ದಾರೆ. ನಂತರ ಪಿಂಟೋಗೆ ಒಂದು ಚಾಕೊಲೇಟ್ ಅನ್ನು ನೀಡಿದ್ದಾಳೆ. ಚಾಕೋಲೇಟ್‌ನ್ನು ಪಿಂಟೋ ತಿಂದಿದ್ದಾಳೆ. ಪಾಮ್ ರೀಡರ್ ಕೊಟ್ಟ ಆ ಚಾಕೊಲೇಟ್ ತಿಂದ ಸ್ವಲ್ಪ ಹೊತ್ತಲ್ಲೇ ಯುವತಿ ಪಿಂಟೋ ಸಾವನ್ನಪ್ಪಿದ್ದಾಳೆ. ಚಾಕೊಲೇಟ್ ತಿಂದ ಕೂಡಲೇ ಪಿಂಟೋಗೆ ಎದೆಯುರಿ, ನೋವಿನಂತಹ ಲಕ್ಷಣಗಳು ಕಾಣಿಸಿಕೊಂಡಿತ್ತು.  ಆಕೆಯ ಸೋದರ ಸಂಬಂಧಿ ಬಿಯಾಂಕಾ ಕ್ರಿಸ್ಟಿನಾ ಈ ವಿವರ ಹಂಚಿಕೊಂಡಿದ್ದಾರೆ. ಈ ಬಗ್ಗೆ ಮಾತನಾಡಿದ ಅವರು, “ಫೆರ್ನಾಂಡಾ ವಲೋಜ್ ಪಿಂಟೋ ಚಾಕೊಲೇಟ್ ತಿಂದು ವಾಂತಿ ಮಾಡಿದಳು, ಎದೆಯಲ್ಲಿ ತೀರಾ ನೋವು ಕೂಡ ಕಾಣಿಸಿಕೊಂಡಿತ್ತು. ಕಣ್ಣೆಲ್ಲಾ ಮಂಜಾಗುತ್ತಿವೆ ಎಂದಳು. ಸುಮಾರು ಗಂಟೆ ಹೀಗೆ ಇಂತಹ ಲಕ್ಷಣಗಳನ್ನು ಪಿಂಟೋ ಅನುಭವಿಸಿದಳು” ಎಂದು ಕ್ರಿಸ್ಟಿನಾ ಹೇಳಿದರು. ವೃದ್ಧೆ ಕೊಟ್ಟ ಆ ಚಾಕೊಲೇಟ್ ಅನ್ನು ಯಾವುದೇ ಯೋಚನೆ ಮಾಡದೇ ಪಿಂಟೋ ಸೇವಿಸಿದಳು. ಆ ವೇಳೆ ಅವಳಿಗೆ ಹಸಿವಾಗಿತ್ತು, ಹೀಗಾಗಿ ಹಿಂದೆ ಮುಂದೆ ನೋಡದೇ ತಿಂದು ಬಿಟ್ಟಳು ಎಂದು ಕ್ರಿಸ್ಟಿನಾ ಮಾಹಿತಿ ನೀಡಿದರು. ಚಾಕೊಲೇಟ್ ತಿಂದ ನಂತರ ಪಿಂಟೋಗೆ ಇನ್ನಿಲ್ಲದ ಸಮಸ್ಯೆ ಕಾಡತೊಡಗಿತು, ಇದನ್ನೆಲ್ಲಾ ಕುಟುಂಬದವರೊಂದಿಗೆ ಮೆಸೇಜ್ ಮಾಡಿ ಹಂಚಿಕೊಂಡಿದ್ದಳು ಎಂದು ಕ್ರಿಸ್ಟಿನಾ ಹೇಳಿದರು. ನನ್ನ ದೇಹ ಸುಸ್ಥಿತಿಯಲ್ಲಿಲ್ಲ, ನನಗೇಕೋ ನಾನು ದೇವರ ಬಳಿ ಹೋಗುತ್ತಿದ್ದೇನೆ ಎಂದೆನಿಸುತ್ತಿದೆ. ನನಗೆ ಏಕೆ ಹೀಗಾಗುತ್ತಿದೆ ಎಂದು ತಿಳಿಯುತ್ತಿಲ್ಲ. ಪಾಮ್ ರೀಡರ್ ಒಂದು ಚಾಕೊಲೇಟ್ ಕೊಟ್ಟಿದ್ದರು. ಅದನ್ನು ಸೇವನೆ ಮಾಡಿದಾಗಿನಿಂದ ಹೀಗಾಗುತ್ತಿದೆ. ವಾಂತಿ, ಕಣ್ಣು ಮುಸುಕಾಗುವುದು, ಎದೆಯುರಿಯಂತಹ ಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ ಎಂದು ಅವರು ಪಠ್ಯ ಸಂದೇಶವೊಂದನ್ನು ಕಳುಹಿದ್ದರಂತೆ. ಕೊನೆಗೂ ಚಿತ್ರಹಿಂಸೆ ಅನುಭವಿಸಿದ ಪಿಂಟೋ ತನ್ನ ಕೊನೆಯುಸಿರೆಳೆದಿದ್ದಾಳೆ. ಆಕೆಯ ಶವಪರೀಕ್ಷೆಯಲ್ಲಿ ಅವಳ ದೇಹದಲ್ಲಿ ವಿಷ ಇರುವುದು ಪತ್ತೆಯಾಗಿದೆ. ಹೆಚ್ಚಿನ ಪ್ರಮಾಣದ ಕೀಟನಾಶಕಗಳಾದ ಸಲ್ಫೋಟೆಪ್ ಮತ್ತು ಟೆರ್ಬುಫೋಸ್ ಅಂಶ ಕಂಡುಬಂದಿದೆ. ಪೊಲೀಸರ ತನಿಖೆಯಿಂದ ಸತ್ಯ ಇನ್ನೂ ಹೊರಬರಬೇಕಿದೆ. ಆದರೆ ಚಾಕೊಲೇಟ್ ಸೇವಿಸಿದ ನಂತರ ಸಾವನ್ನಪ್ಪಿದ ಕಾರಣ ನಮಗೆ ಆ ವೃದ್ಧೆಯ ಮೇಲೆ ಹೆಚ್ಚು ಅನುಮಾನವಿದೆ” ಎಂದು ಪಿಂಟೊ ಅವರ ಮತ್ತೊಬ್ಬ ಸೋದರ ಸಂಬಂಧಿ ಲುಮೆನಿಟಾ ವಲೋಜ್ ಹೇಳಿದರು.

Sulekha