ರಸ್ತೆಯಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ಕೊಟ್ಟ ಅಧಿಕಾರಿ –  ಕಾರಣ ಕೇಳಿ ತಬ್ಬಿಬ್ಬಾದ ವ್ಯಾಪಾರಿ

ರಸ್ತೆಯಲ್ಲಿ ಚಹಾ ಮಾರುತ್ತಿದ್ದ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ಕೊಟ್ಟ ಅಧಿಕಾರಿ –  ಕಾರಣ ಕೇಳಿ ತಬ್ಬಿಬ್ಬಾದ ವ್ಯಾಪಾರಿ

ಯಾವುದಾದರೂ ತಪ್ಪು ಮಾಡಿದಾಗ ಪೊಲೀಸರು ಶೋಕಾಸ್‌ ನೋಟಿಸ್‌ ಜಾರಿ ಮಾಡುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಅಧಿಕಾರಿ ತಮ್ಮ ಕಚೇರಿಯ ಹತ್ತಿರದಲ್ಲಿ ಟೀ ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಶೋಕಾಸ್ ನೋಟಿಸ್‌ ಜಾರಿ ಮಾಡಿದ್ದಾರೆ. ಶೋಕಾಸ್‌ ನೋಟಿಸ್‌ನಲ್ಲಿ ಅಧಿಕಾರಿ ಕೊಟ್ಟ ಕಾರಣ ಎಲ್ಲರನ್ನು ಶಾಕ್‌ ಆಗುವಂತೆ ಮಾಡಿದೆ.

ರಾಜಸ್ಥಾನದ ಝಲಾವರ್‌ ಜಿಲ್ಲೆಯ ಪಂಚಾಯತ್‌ ಕಚೇರಿಯ  ಸ್ವಚ್ಛ ಭಾರತ್ ಮಿಷನ್‌ನ ಬ್ಲಾಕ್ ಕೋ-ಆರ್ಡಿನೇಟರ್ ಅಧಿಕಾರಿಯೊಬ್ಬರು ತಮ್ಮ ಕಚೇರಿಯ ಸನಿಹದಲ್ಲಿಯೇ ಚಹಾ ಮಾರುತ್ತಿದ್ದ ಚಾಯ್‌ವಾಲಾನಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ನ ಪ್ರತಿ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂಓದಿ: ಮೊದಲ ಮಹಿಳಾ ಕಾವಡಿಯಾಗಿ ʼದಿ ಎಲಿಫೆಂಟ್‌ ವಿಸ್ಪ​ರರ್ಸ್‌ʼ ಖ್ಯಾತಿಯ ಬೆಳ್ಳಿ ನೇಮಕ

ಝಲಾವರ್ ಜಿಲ್ಲೆಯ ಮಾಜ್ರಾದ ಮನೋಹರರ್‌ ಥಾಣಾ ಪಂಚಾಯತ್‌ ಸಮಿತಿಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಈ ನೋಟಿಸ್‌ ಸೋಶಿಯ್‌ ಮೀಡಿಯಾದಲ್ಲಿ ವ್ಯಾಪಕ ಚರ್ಚೆಗೂ ಕಾರಣವಾಗಿದೆ. ಬ್ಲಾಕ್‌ ಕೋ ಆರ್ಡಿನೇಟರ್‌ ಅಧಿಕಾರಿ ಮೋಹನ್‌ ಲಾಲ್‌ ಎನ್ನುವವರು,  ಚಾಯ್‌ವಾಲಾ ಬಿರಮ್‌ಚಂದ್‌ ಎನ್ನುವ ವ್ಯಕ್ತಿಗೆ ಶೋಕಾಸ್‌ ನೋಟಿಸ್‌ ಜಾರಿ ಮಾಡಿದ್ದಾರೆ.

ಬಿರಮ್‌ ಚಂದ್‌ ಪಂಚಾಯತ್‌ ಆಫೀಸ್‌ನ ಸಮೀಪವೇ ಚಹಾ ಅಂಗಡಿ ಇರಿಸಿಕೊಂಡಿದ್ದಾರೆ. ಇಷ್ಟು ಸಮೀಪದಲ್ಲಿ ಟೀ ಅಂಗಡಿ ಇರಿಸಿಕೊಂಡಿದ್ದೂ ಪಂಚಾಯತ್‌ಗೆ ಸರಿಯಾದ ಸಮಯದಲ್ಲಿ ಚಹಾ ತಲುಪುತ್ತಿಲ್ಲ. ಇತ್ತೀಚೆಗಷ್ಟೇ ನಿಮಗೆ ಪಂಚಾಯತ್‌ ಆಫೀಸ್‌ಗೆ ಚಹಾ ತರುವಂತೆ ಹೇಳಲಾಗಿತ್ತು. ಆದರೆ, ನೀವು ಸರಿಯಾದ ಸಮಯಕ್ಕೆ ಚಹಾ ತಂದುಕೊಟ್ಟಿರುವುದಿಲ್ಲ. ಈ ಕುರಿತಾಗಿ ಈ ಹಿಂದೆಯೇ ನಿಮಗೆ ಒಂದು ನೋಟಿಸ್‌ ಜಾರಿ ಮಾಡಲಾಗಿತ್ತು. ಅದಕ್ಕೆ ನೀವು ಯಾವುದೇ ತೃಪ್ತಿದಾಯಕ ಉತ್ತರ ನೀಡಿಲ್ಲ. ಇನ್ನು ಮುಂದೆ ಪಂಚಾಯತ್‌ ಆಫೀಸ್‌ನಿಂದ ಚಹಾ ತರುವಂತೆ ಸೂಚನೆ ನೀಡಿದಾಗ, ಎಮ್ಮೆಯ ಹಾಲನ್ನು ಕರೆದು ಫ್ರೆಶ್‌ ಆಗಿ ಚಹಾ ಮಾಡಿ ಪಂಚಾಯತ್‌ ಆಫೀಸ್‌ಗೆ ನೀಡಬೇಕು. ಸರಿಯಾದ ಸಮಯದಲ್ಲಿ ಚಹಾ ನೀಡದೇ ಇರುವುದು ಪಂಚಾಯತ್‌ ಬಗ್ಗೆ ಇರುವ ನಿಮ್ಮ ನಿರ್ಲಕ್ಷ್ಯವನ್ನು ತೋರುತ್ತದೆ. ಇದನ್ನು ಪಂಚಾಯತ್‌ ಯಾವುದೇ ಕಾರಣಕ್ಕೂ ಸಹಿಸಿಕೊಳ್ಳೋದಿಲ್ಲ.

ಇನ್ನು ಮುಂದೆ ಏನಾದರೂ ಪಂಚಾಯತ್‌ ಆಫೀಸ್‌ನ ಅಧಿಕಾರಿಗಳು ಚಹಾ ತನ್ನಿ ಎಂದು ಹೇಳಿದಾಗ, ಹಿಂದೆ ಮಾಡಿರುವ ಚಹಾವನ್ನು ತರುವುದಲ್ಲ. ಅದರ ಬದಲು ಆಗಲೇ ಎಮ್ಮೆಯಿಂದ ಕರೆದ ಹಾಲನ್ನು ಬಳಸಿಕೊಂಡು ಚಹಾ ಮಾಡಿ ತರಬೇಕು. ಹಾಗೇನಾದರೂ ಇದನ್ನು ಮಾಡಲು ವಿಫಲವಾದಲ್ಲಿ ನಿಮ್ಮ ಅಂಗಡಿಯ ಪಾತ್ರೆಗಳು, ಚಹಾ ಮಾಡುವ ಸ್ಟೌಗಳನ್ನು ಪಂಚಾಯತ್‌ ವಶಪಡಿಸಿಕೊಳ್ಳಲಿದೆ ಎಂದು ನೋಟಿಸ್‌ ಜಾರಿ ಮಾಡಿದ್ದಾರೆ.

ಈ ಶೋಕಾಸ್‌ ನೋಟಿಸ್‌ ಅನ್ನು ಪಂಚಾಯತ್‌ ಆಫೀಸ್‌ಗೆ ರಜೆ ಇರುವ ದಿನವಾದ ಶನಿವಾರ ಹಾಗೂ ಭಾನುವಾರದಂದು ಎಂದು ವರದಿಯಾಗಿದೆ. ಈ ವೈರಲ್ ನೋಟಿಸ್ ಕುರಿತು ಬ್ಲಾಕ್ ಸಂಯೋಜಕರನ್ನು ಮಾತನಾಡಿದ್ದಾರೆ. ಈ ನೋಟಿಸ್ ಸಂಪೂರ್ಣ ನಕಲಿಯಾಗಿದ್ದು, ಮೋಜಿಗಾಗಿ ಕಂಪ್ಯೂಟರ್ ಆಪರೇಟರ್ ಪ್ರಿಂಟ್ ಔಟ್ ಮಾಡಿದ್ದಾರೆ ವೈರಲ್‌ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಆದರೆ ಬ್ಲಾಕ್ ಸಂಯೋಜಕ ನೀಡಿರುವ ಹೇಳಿಕೆ ಮತ್ತೆ ಹಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕಚೇರಿಯ ಭೋಜನ ವಿರಾಮದ ವೇಳೆ ತಮಾಷೆಗಾಗಿ ನಮ್ಮ ಕಂಪ್ಯೂಟರ್‌ ಆಪರೇಟರ್‌ ಈ ನೋಟಿಸ್‌ಅನ್ನು ಟೈಪ್‌ ಮಾಡಿ, ಅದನ್ನು ಚಾಯ್‌ವಾಲಾನಿಗೆ ನೀಡಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ. ಆದರೆ, ಈ ಪತ್ರ ವೈರಲ್‌ ಆದ ಬೆನ್ನಲ್ಲಿಯೇ ಬ್ಲಾಕ್‌ ಸಂಯೋಜಕ ಮೋಹನ್‌ಲಾಲ್‌ಗೆ ಮೇಲಾಧಿಕಾರಿ ಸ್ಪಷ್ಟನೆ ನೀಡುವಂತೆ ತಿಳಿಸಿದ್ದಾರೆ.

suddiyaana