ಉಕ್ರೇನ್ನಲ್ಲಿ ಬೀಡುಬಿಟ್ಟಿರುವ ರಷ್ಯಾಗೆ ದೊಡ್ಡ ಶಾಕ್! – ಸೇನಾಪಡೆಗಳಿಗೆ ಇಲಿ ಜ್ವರ, ಕಣ್ಣಲ್ಲಿ ರಕ್ತಸ್ರಾವ!

ರಷ್ಯಾ ಮತ್ತು ಉಕ್ರೇನ್ ಯುದ್ಧ ಧಗಧಗಿಸ್ತಿದೆ. ಈಗಾಗಲೇ ಲಕ್ಷಾಂತರ ಜನರನ್ನ ಬಲಿ ತೆಗೆದುಕೊಂಡಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಇದೇ ಸಮಯದಲ್ಲಿ ರಷ್ಯಾ ಕೂಡ ತನ್ನ ದಾಳಿಯನ್ನ ಮತ್ತಷ್ಟು ಭೀಕರಗೊಳಿಸಿ, ಶತ್ರುವಿನ ಮೇಲೆ ಎರಗುತ್ತಿದೆ. ಈ ಯುದ್ಧದಲ್ಲಿ ರಷ್ಯಾ ಸೇನೆ ಶೇ.87ರಷ್ಚು ಸಕ್ರಿಯ ಯೋಧರನ್ನು ಈಗಾಗಲೇ ಕಳೆದುಕೊಂಡಿದೆ. ಈ ಬೆನ್ನಲ್ಲೇ ರಷ್ಯಾ ಸೇನೆಗೆ ಮತ್ತೊಂದು ಶಾಕ್ ಎದುರಾಗಿದೆ. ಉಕ್ರೇನ್ನಲ್ಲಿ ಬೀಡುಬಿಟ್ಟಿರುವ ರಷ್ಯಾದ ಸೇನಾ ಪಡೆಗಳಲ್ಲಿ ಇಲಿಜ್ವರ ಕಾಣಿಸಿಕೊಂಡಿದ್ದು, ಮತ್ತಷ್ಟು ಸೈನಿಕರನ್ನು ಕಳೆದುಕೊಳ್ಳುವ ಭೀತಿಯಲ್ಲಿ ರಷ್ಯಾ ಇದೆ.
ಇದನ್ನೂ ಓದಿ: 2 ನಿಮಿಷ ನಿನ್ನ ಧ್ವನಿ ಕೇಳಬೇಕು ಅಂತಾ ಪತ್ನಿಗೆ ಫೋನ್ ಮಾಡಿದ! – ಕೆಲವೇ ಕ್ಷಣದಲ್ಲಿ ಸೂಸೈಡ್ ಮಾಡ್ಕೊಂಡ ಪತಿ!
ಹೌದು, 2022ರ ಫೆಬ್ರವರಿ ತಿಂಗಳಲ್ಲಿ ರಷ್ಯಾ, ಉಕ್ರೇನ್ ಯುದ್ಧ ಆರಂಭವಾಯ್ತು. ರಷ್ಯಾ ಸೇನೆ ಉಕ್ರೆನ್ ಮೇಲೆ ಭೀಕರ ದಾಳಿ ನಡೆಸುತ್ತಲೇ ಇದೆ. ಇದೀಗ ಉಕ್ರೇನ್ನಲ್ಲಿ ಬೀಡುಬಿಟ್ಟಿರುವ ರಷ್ಯಾದ ಸೇನಾ ಪಡೆಗಳಲ್ಲಿ ಇಲಿಜ್ವರ ಕಾಣಿಸಿಕೊಂಡಿದೆ. ಸೈನಿಕರು ಕಣ್ಣಲ್ಲಿ ರಕ್ತಸ್ರಾವ, ತೀವ್ರ ಜ್ವರದಂಥ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎನ್ನುವ ವಿಚಾರ ಬಹಿರಂಗಗೊಂಡಿದೆ.
ಈ ಬಗ್ಗೆ ಉಕ್ರೇನ್ನ ಮುಖ್ಯ ಗುಪ್ತಚರ ಸಂಸ್ಥೆ ನಿರ್ದೇಶನಾಲಯ ಮಾಹಿತಿ ನೀಡಿದೆ. ಕುಪ್ಯಾನ್ಸ್ಕ್ ನಗರದಲ್ಲಿ ದೀರ್ಘಕಾಲದಿಂದ ಯುದ್ಧ ನಡೆಸುತ್ತಿರುವ ರಷ್ಯಾ ಪಡೆಯ ಸೈನಿಕರಲ್ಲಿ ಈ ಜ್ವರ ವರದಿಯಾಗಿದೆ ಎಂದು ತಿಳಿಸಿದೆ. ಆದರೆ, ಈ ವರದಿಯನ್ನು ರಷ್ಯಾದ ಕಮಾಂಡರ್ಗಳು ತಳ್ಳಿಹಾಕಿದ್ದು, ಅಂಥ ಯಾವುದೇ ಸಮಸ್ಯೆಗಳೂ ಸೈನಿಕರಿಗೆ ಇಲ್ಲ. ಯಾವುದೇ ರೋಗವೂ ಪಡೆಗಳಲ್ಲಿ ವರದಿಯಾಗಿಲ್ಲ ಎಂದಿದ್ದಾರೆ.