ಐಪಿಎಲ್ 2025 ರಲ್ಲಿ ಟ್ವಿಸ್ಟ್.. – ಇನ್ಮುಂದೆ 74 ಅಲ್ಲ, 84 ಪಂದ್ಯಗಳ ಆಯೋಜನೆ!

ಐಪಿಎಲ್ 2025 ರಲ್ಲಿ ಟ್ವಿಸ್ಟ್.. – ಇನ್ಮುಂದೆ 74 ಅಲ್ಲ, 84 ಪಂದ್ಯಗಳ ಆಯೋಜನೆ!

ಈ ಬಾರಿಯ ಐಪಿಎಲ್‌ಗೆ ಮೆಗಾ ಹರಾಜು ಘೋಷಣೆಯಾಗಿದ್ದು, ಎಷ್ಟು ಆಟಗಾರರನ್ನು ಉಳಿಸಿಕೊಳ್ಳಲು ಅವಕಾಶ ಸಿಗುತ್ತದೆ ಎಂಬುದು ಹಲವರ ನಿರೀಕ್ಷೆ. ಆದರೆ ಮುಂದಿನ ಐಪಿಎಲ್ ಸರಣಿಗೂ ಮುನ್ನ ವಿವಿಧ ಹೊಸ ಬದಲಾವಣೆಗಳನ್ನು ತರಲು ಬಿಸಿಸಿಐ ನಿರ್ಧರಿಸಿದೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಸ್ಲಮ್ ಹುಡುಗ ಈಗ ಸೂಪರ್ ಸ್ಟಾರ್ –  RCB ವೇಗಿಯ ರೇಂಜ್ ಫುಲ್ ಚೇಂಜ್

2 ತಿಂಗಳು ಕ್ರಿಕೆಟ್ ಪ್ರೇಮಿಗಳಿಗೆ ಭರ್ಜರಿ ಮನರಂಜನೆ ನೀಡುವ ಐಪಿಎಲ್ನಲ್ಲಿ ಒಟ್ಟು 74 ಪಂದ್ಯಗಳನ್ನ ಆಡಿಸಲಾಗುತ್ತೆ. ಬಟ್ 2025ರ ಐಪಿಎಲ್ ಸೀಸನ್ಗೆ ಇನ್ನೂ 10 ಎಕ್ಸ್ಟ್ರಾ ಪಂದ್ಯಗಳನ್ನ ಆಡಿಸೋಕೆ ಬಿಸಿಸಿಐ ಸಿದ್ಧತೆ ನಡೆಸಿದೆ. ಈವರಗೆ ಐಪಿಎಲ್ನಲ್ಲಿ ಪ್ಲೇಆಫ್ ಸೇರಿ ಒಟ್ಟು 74 ಪಂದ್ಯಗಳನ್ನಾಡಲಾಗುತ್ತಿತ್ತು. ಆದ್ರೆ ಮುಂದಿನ ಬಾರಿ ಒಟ್ಟು 84 ಮ್ಯಾಚ್ ಆಡಿಸೋ ನಿರ್ಧಾರಕ್ಕೆ ಬರಲಾಗಿದೆ. ಈ ಬಗ್ಗೆ ಮಾತನಾಡಿರುವ ಬಿಸಿಸಿಐ ಕಾರ್ಯದರ್ಶಿ ಜೈಶಾ ಆಟಗಾರರ ಮೇಲಿನ ಹೊರೆಯನ್ನೂ ಸಹ ಪರಿಗಣಿಸಬೇಕಾಗುತ್ತದೆ. ಹೀಗಾಗಿ ಶೀಘ್ರದಲ್ಲೇ ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ.

ಒಟ್ನಲ್ಲಿ 18ನೇ ಸೀಸನ್ಗೆ ಹತ್ತು ಹಲವು ಹೊಸ ಬದಲಾವಣೆಗಳೊಂದಿಗೆ ಐಪಿಎಲ್ ನಡೆಸೋಕೆ ಬಿಸಿಸಿಐ ಮೆಗಾ ಪ್ಲ್ಯಾನ್ ಮಾಡ್ತಿದೆ. ಮತ್ತೊಂದ್ಕಡೆ ಆರ್ಸಿಬಿ ಫ್ರಾಂಚೈಸಿಗಳಲ್ಲೂ ಮಹತ್ವದ ನಿರ್ಣಯಗಳನ್ನ ಕೈಗೊಳ್ಳಲಾಗ್ತಿದೆ.  ವರ್ಷದ ಕೊನೆಯಲ್ಲಿ ನಡೆಯಲಿರುವ ಮೆಗಾ ಆಕ್ಷನ್ನಲ್ಲಿ ತಮಗೆ ಬೇಕಾದ ಆಟಗಾರರನ್ನು ಖರೀದಿ ಮಾಡಲು ಮುಂದಾಗಿದೆ. ಕ್ವಾಲಿಟಿ ಆಟಾಗರರ ಖರೀದಿ ಮಾಡಿ ಬಲಿಷ್ಠ ತಂಡ ಕಟ್ಟುವ ಪ್ಲಾನ್ ಆರ್ಸಿಬಿಯದ್ದು. ಹಾಗಾಗಿ ಕೆ.ಎಲ್ ರಾಹುಲ್ ಮುತ್ತು ಜಸ್ಪ್ರೀತ್ ಬುಮ್ರಾ ಮೇಲೆ ಕಣ್ಣಿಟ್ಟಿದೆ.

Shwetha M

Leave a Reply

Your email address will not be published. Required fields are marked *