ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ – ಈ ತಿಂಗಳಿನಲ್ಲಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ!

ತಿರುಪತಿ ತಿಮ್ಮಪ್ಪನ ಭಕ್ತರಿಗೆ ಮಹತ್ವದ ಸುದ್ದಿ – ಈ ತಿಂಗಳಿನಲ್ಲಿ ತಿರುಪತಿಯಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ!

ತಿರುಪತಿ ಬಾಲಾಜಿ ಅಥವಾ ಶ್ರೀ ವೆಂಕಟೇಶ್ವರ ಸ್ವಾಮಿ ದೇವಾಲಯವು ಹಿಂದೂ ಪುರಾಣದ ಅತ್ಯಂತ ಪ್ರಮುಖ ಹೆಗ್ಗುರುತುಗಳಲ್ಲಿ ಒಂದಾಗಿದೆ. ತಿರುಪತಿ ತಿಮ್ಮಪ್ಪ ಅಂದ್ರೆ ಬೇಡಿದ್ದನ್ನು ಕರುಣಿಸುವ ದೇವರು ಅಂತಾ ಪ್ರಸಿದ್ಧಿ ಪಡೆದಿದೆ. ಹೀಗಾಯೇ  ಶ್ರೀನಿವಾಸನ ದಿವ್ಯ ಮಂಗಳ ರೂಪದ ದರ್ಶನ ಪಡೆಯಲು ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ. ಇದೀಗ ಮೇ ತಿಂಗಳಿನಲ್ಲಿ ತಿಮ್ಮಪ್ಪನ ದೇಗುಲಕ್ಕೆ ತೆರಳುವವರಿಗೆ ಮಹತ್ವದ ಸುದ್ದಿಯೊಂದಿದೆ. ಮೇ ತಿಂಗಳಿನಿಂದ ದೇಗುಲದಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನೂ ಓದಿ: ಸಮುದ್ರದೊಳಗಿರುವ ದ್ವಾರಕಾ ನಗರದ ಇತಿಹಾಸವೇನು?- ದ್ವಾರಕಾ ನಗರಿ ಅನ್ನೋದು ಕಟ್ಟು ಕಥೆನಾ? ನಿಜಾನಾ?

ಹೌದು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಮೇ ತಿಂಗಳಿನಲ್ಲಿ ತಿಮ್ಮಪ್ಪನ ದರ್ಶನ ಪಡೆಯುವವರಾಗಿದ್ರರೆ ನೀವು ಈ ಪ್ಲಾನ್‌ಅನ್ನು ಮುಂದೂಡುವುದು ಒಳ್ಳೆಯದು. ಯಾಕಂದ್ರೆ ಮೇ ತಿಂಗಳು ಬೇಸಿಗೆ ರಜೆಯ ತಿಂಗಳು. ಅದೇ ಸಮಯದಲ್ಲಿ ತಿರುಮಲದಲ್ಲಿ ಸಂಚಾರ ದಟ್ಟಣೆಯು ಹೆಚ್ಚಲಿದೆ. ಆಗ, ತಿರುಮಲದಲ್ಲಿ ದರ್ಶನ ಪಡೆಯಲು 48 ಗಂಟೆಗಳು ಬೇಕಾಗಬಹುದು.

ಮೇ ತಿಂಗಳ ವಿಶೇಷ ಪ್ರವೇಶ ದರ್ಶನ ಟೋಕನ್‌ಗಳನ್ನು ಫೆಬ್ರವರಿ 24ರಂದು ಬೆಳಗ್ಗೆ 10 ಗಂಟೆಗೆ ಟಿಟಿಡಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಟಿಟಿಡಿ ಮೇ ತಿಂಗಳ ಕೋಟಾ ರೂ.300/- ವಿಶೇಷ ಪ್ರವೇಶ ದರ್ಶನ ಟಿಕೆಟ್‌ಗಳನ್ನು ಟಿಟಿಡಿ ವೆಬ್‌ಸೈಟ್‌ http://ttdevasthanams.ap.gov.in ನಲ್ಲಿ ಕಾಯ್ದಿರಿಸುವಂತೆ ಟಿಟಿಡಿ ವಿನಂತಿಸಿದೆ. ನಕಲಿ ವೆಬ್‌ಸೈಟ್‌ಗಳನ್ನು ಆಶ್ರಯಿಸಿ ವಂಚನೆಗೆ ಒಳಗಾಗಬೇಡಿ ಎಂದು ಟಿಟಿಡಿ ಭಕ್ತರಿಗೆ ಮನವಿ ಮಾಡಿದೆ.

Shwetha M