ಕರಡಿಗಳನ್ನು ತಬ್ಬಿ ಮುದ್ದಾಡಲು ಕೆಲಸಗಾರರು ಬೇಕಾಗಿದ್ದಾರೆ! – ಜಾಬ್ ಆಫರ್ ಕೊಟ್ಟಿದ್ದು ಯಾರು?
ಅನೇಕರು ಸಾಕುಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ತಮ್ಮ ಮುದ್ದಿನ ಪ್ರಾಣಿಗಳನ್ನು ಮನೆ ಸದಸ್ಯರಂತೆ ನೋಡಿಕೊಳ್ಳುತ್ತಾರೆ. ಕೆಲವರು ಅವುಗಳ ಕಾಳಜಿ ವಹಿಸಲು ಕೆಲಸದವರನ್ನು ನೇಮಿಸುವುದನ್ನು ನಾವು ಕೇಳಿದ್ದೇವೆ. ಇನ್ನೂ ಕಾಡು ಪ್ರಾಣಿಗಳ ವಿಚಾರಕ್ಕೆ ಬಂದಾಗ ಅವುಗಳು ತಮ್ಮ ಪಾಡಿಗೆ ಆಹಾರ ಹುಡುಕಿಕೊಂಡು ಗುಹೆಗಳಲ್ಲಿ, ಮರದಲ್ಲಿ ವಾಸಿಸುತ್ತವೆ. ಅವುಗಳ ಕಾಳಜಿ ವಹಿಸೋದು ಬಿಡಿ, ಅವುಗಳ ಬಳಿ ತೆರಳಲು ಭಯಪಡುತ್ತೇವೆ. ಆದರೆ ಇಲ್ಲೊಂದು ಕಡೆ ಕರಡಿಯನ್ನು ತಬ್ಬಿಕೊಂಡು ಮುದ್ದಾಡಲು ಕೆಲಸಗಾರರು ಬೇಕಾಗಿದ್ದಾರಂತೆ. ಅದಕ್ಕಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಇದನ್ನೂ ಓದಿ: ಕಳ್ಳರ ಪತ್ತೆಗೆ ಕಾಲೇಜು ಶೌಚಾಲಯದಲ್ಲಿ ಸಿಸಿಟಿವಿ! – ಬೆಚ್ಚಿ ಬಿದ್ದ ಸ್ಟೂಡೆಂಟ್ಸ್
ಅಮೆರಿಕಾದ ವನ್ಯಜೀವಿ ಏಜೆನ್ಸಿಯೊಂದು ಕರಡಿಯನ್ನು ತಬ್ಬಿಕೊಂಡು ಮುದ್ದಾಡಲು ಜನ ಬೇಕಾಗಿದ್ದಾರೆ ಅಂತಾ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಭಾರಿ ವೈರಲ್ ಆಗಿದೆ.
ಅಳಿವಿನಂಚಿರುವ ಈ ಕಪ್ಪು ಕರಡಿಗಳನ್ನು ಸಂರಕ್ಷಿಸುವುದು ಈ ಏಜೆನ್ಸಿಯ ಪ್ರಮುಖ ಧ್ಯೇಯವಾಗಿದೆಯಂತೆ. ಹೀಗಾಗಿ ಅವುಗಳನ್ನು ಹೆಚ್ಚು ಕಾಳಜಿಯಿಂದ ನೋಡಿಕೊಳ್ಳಲು ಕೆಲಸಗಾರರು ಬೇಕಾಗಿದ್ದಾರೆ ಎಂದು ಪೋಸ್ಟ್ ಮಾಡಿದ್ದಾರೆ. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಲು ಮಾರ್ಚ್ 30 ರವರೆಗೆ ಅವಕಾಶ ನೀಡಲಾಗಿದೆ. ಅಷ್ಟೇ ಅಲ್ಲದೇ ಈ ಕೆಲಸಕ್ಕೆ ಏನೆಲ್ಲಾ ಅರ್ಹತೆಗಳಿರಬೇಕು ಎಂದು ಪೋಸ್ಟ್ ನಲ್ಲಿ ತಿಳಿಸಲಾಗಿದೆ.
ಈ ಉದ್ಯೋಗಕ್ಕಾಗಿ ಅರ್ಜಿದಾರರು ನೈಸರ್ಗಿಕ ಸಂಪನ್ಮೂಲ ಸಂರಕ್ಷಣೆ, ಜೈವಿಕ ವಿಜ್ಞಾನ ಅಥವಾ ಅಂತದ್ದೇ ಅಧ್ಯಯನದ ಕ್ಷೇತ್ರದಲ್ಲಿ ಅನುಭವ ಅಥವಾ ವಿದ್ಯಾರ್ಹತೆ ಹೊಂದಿರಬೇಕು. ಜೊತೆಗೆ ಪ್ರಯಾಸಕರ ಪರಿಸ್ಥಿತಿಗಳನ್ನು ನಿಭಾಯಿಸುವ ಸಾಮರ್ಥ್ಯ ಇರಬೇಕು. ಈ ಕೆಲಸವು ಅಮೆರಿಕನ್ ಕಪ್ಪು ಕರಡಿಗಳು ಹಾಗೂ ಮಾನವನ ನಡುವಿನ ಸಂಘರ್ಷವನ್ನು ನಿರ್ವಹಿಸುವುದು ಮತ್ತು ಸಹಜವಾಗಿ, ಮರಿಗಳನ್ನು ಮುದ್ದಾಡುವ ಕೆಲಸವಾಗಿರುತ್ತದೆ ಎಂದು ಪೋಸ್ಟ್ನಲ್ಲಿ ವಿವರವಾಗಿ ಹಂಚಿಕೊಳ್ಳಲಾಗಿದೆ.