ವ್ಯಾಗ್ನರ್​​​​ ಪಡೆಗೆ ಭಾರತೀಯ ಯುವಕರೇ ಟಾರ್ಗೆಟ್‌ – ಯುದ್ಧಕ್ಕೆ ಬಳಸಿಕೊಳ್ಳುತ್ತಿದ್ದ ಜಾಲ ಕೊನೆಗೂ ಪತ್ತೆ

ವ್ಯಾಗ್ನರ್​​​​ ಪಡೆಗೆ ಭಾರತೀಯ ಯುವಕರೇ ಟಾರ್ಗೆಟ್‌ – ಯುದ್ಧಕ್ಕೆ ಬಳಸಿಕೊಳ್ಳುತ್ತಿದ್ದ ಜಾಲ ಕೊನೆಗೂ ಪತ್ತೆ

ಕೆಲಸಕ್ಕೆ, ಪ್ರವಾಸಕ್ಕೆಂದು ತೆರಳಿದ್ದ ಭಾರತೀಯರನ್ನು ರಷ್ಯಾ ಸೇನೆ ಫುಲ್‌ ಟಾರ್ಗೆಟ್‌ ಮಾಡ್ತಿದೆ. ಸಿಕ್ಕಿದೇ ಚಾನ್ಸ್‌ ಅಂತಾ ಅಮಾಯಕರನ್ನು ಸೇನೆಗೆ ಸೇರಿಸಿಕೊಳ್ಳುತ್ತಿದೆ.. ಇತ್ತೀಚೆಗೆ ಭಾರತೀಯ ಮೂಲದ ಯುವಕನೊಬ್ಬ ಉಕ್ರೇನ್‌ ಹಾಗೂ ರಷ್ಯಾ ಯುದ್ಧ ಸಾವನ್ನಪ್ಪಿದ್ದ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.. ಕೆಲಸ ಕೊಡಿಸೋದಾಗಿ ಗೆ ಆಮಿಷವೊಡ್ಡಿದ ಜಾಲವನ್ನು ಸಿಬಿಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 7 ಕಡೆ ದಾಳಿ ಮಾಡಿ ಮಾನವ ಕಳ್ಳಸಾಗಣೆ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಎರಡನೇ ದಿನದಾಟದಲ್ಲಿ ಆಂಗ್ಲರು ಶೇಪ್ಔಟ್ – ಅಭಿಮಾನಿಗಳ ಮನಗೆದ್ದ ಕನ್ನಡಿಗ ಪಡಿಕ್ಕಲ್

ರಷ್ಯಾದಲ್ಲಿ ಕೆಲಸ ಕೊಡಿಸೋದಾಗಿ ಕೆಲವು ಏಜೆಂಟ್‌ಗಳು ಭಾರತೀಯ ಯುವಕರಿಗೆ ಆಮಿಷವೊಡ್ಡುತ್ತಿದ್ದರು. ಬಳಿಕ ರಷ್ಯಾ ಸೇನೆಗೆ ಸೇರುವಂತೆ ಒತ್ತಾಯಿಸುತ್ತಿದ್ದರು. ಈ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ತನಿಖೆ ಆರಂಭಿಸಿದ್ದ ಸಿಬಿಐ ಅಧಿಕಾರಿಗಳು ಏಜೆಂಟ್‌ಗಳ ಜಾಲವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೇ ಈ ಜಾಲ ಬಳಸ್ತಿದ್ದ ಯೂಟ್ಯೂಬ್ ಬಂದ್ ಮಾಡಲಾಗಿದೆ. ಅವರ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಶೋಧ ಕಾರ್ಯ ಶುರುವಾಗಿದೆ.

ಕಳೆದ ಒಂದೂವರೆ ವರ್ಷಗಳಿಂದ ಉಕ್ರೇನ್​ ಹಾಗೂ ರಷ್ಯಾ ನಡುವಿನ ನಡೆಯುತ್ತಲೇ ಇದೆ. ಈಗಾಗಲೇ ಲಕ್ಷಾಂತರ ಸೈನಿಕರನ್ನು ಬಲಿ ಪಡೆದಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಹೀಗೆ ಉಕ್ರೇನ್​​ ಮೇಲೆ ಸಮರ ಸಾರಿರುವ ರಷ್ಯಾ ಸೈನಿಕರ ಕೊರತೆಯನ್ನ ಅನುಭವಿಸುತ್ತಿದ್ದು, ಭಾರತದಿಂದ ರಷ್ಯಾಕ್ಕೆ ತೆರಳಿರುವ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಿಸಿಕೊಳ್ಳುತ್ತಿದೆ. ಉದ್ಯೋಗ ಅರಸಿ ರಷ್ಯಾಕ್ಕೆ ಬರುವ ಯುವಕರನ್ನೇ ಟಾರ್ಗೆಟ್​​ ಮಾಡುವ ರಷ್ಯಾದ ವ್ಯಾಗ್ನರ್​​​​ ಪಡೆ, ಅಸಾಯಕ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯುದ್ಧಕ್ಕೆ ಬಲವಂತವಾಗಿ ಬಳಸಿಕೊಳ್ಳುತ್ತಿದೆ.

Shwetha M