ವ್ಯಾಗ್ನರ್ ಪಡೆಗೆ ಭಾರತೀಯ ಯುವಕರೇ ಟಾರ್ಗೆಟ್ – ಯುದ್ಧಕ್ಕೆ ಬಳಸಿಕೊಳ್ಳುತ್ತಿದ್ದ ಜಾಲ ಕೊನೆಗೂ ಪತ್ತೆ

ಕೆಲಸಕ್ಕೆ, ಪ್ರವಾಸಕ್ಕೆಂದು ತೆರಳಿದ್ದ ಭಾರತೀಯರನ್ನು ರಷ್ಯಾ ಸೇನೆ ಫುಲ್ ಟಾರ್ಗೆಟ್ ಮಾಡ್ತಿದೆ. ಸಿಕ್ಕಿದೇ ಚಾನ್ಸ್ ಅಂತಾ ಅಮಾಯಕರನ್ನು ಸೇನೆಗೆ ಸೇರಿಸಿಕೊಳ್ಳುತ್ತಿದೆ.. ಇತ್ತೀಚೆಗೆ ಭಾರತೀಯ ಮೂಲದ ಯುವಕನೊಬ್ಬ ಉಕ್ರೇನ್ ಹಾಗೂ ರಷ್ಯಾ ಯುದ್ಧ ಸಾವನ್ನಪ್ಪಿದ್ದ. ಈ ಬೆನ್ನಲ್ಲೇ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡಿದೆ.. ಕೆಲಸ ಕೊಡಿಸೋದಾಗಿ ಗೆ ಆಮಿಷವೊಡ್ಡಿದ ಜಾಲವನ್ನು ಸಿಬಿಐ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. 7 ಕಡೆ ದಾಳಿ ಮಾಡಿ ಮಾನವ ಕಳ್ಳಸಾಗಣೆ ಕುರಿತ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಎರಡನೇ ದಿನದಾಟದಲ್ಲಿ ಆಂಗ್ಲರು ಶೇಪ್ಔಟ್ – ಅಭಿಮಾನಿಗಳ ಮನಗೆದ್ದ ಕನ್ನಡಿಗ ಪಡಿಕ್ಕಲ್
ರಷ್ಯಾದಲ್ಲಿ ಕೆಲಸ ಕೊಡಿಸೋದಾಗಿ ಕೆಲವು ಏಜೆಂಟ್ಗಳು ಭಾರತೀಯ ಯುವಕರಿಗೆ ಆಮಿಷವೊಡ್ಡುತ್ತಿದ್ದರು. ಬಳಿಕ ರಷ್ಯಾ ಸೇನೆಗೆ ಸೇರುವಂತೆ ಒತ್ತಾಯಿಸುತ್ತಿದ್ದರು. ಈ ಪ್ರಕರಣ ಬೆಳಕಿಗೆ ಬರ್ತಿದ್ದಂತೆ ತನಿಖೆ ಆರಂಭಿಸಿದ್ದ ಸಿಬಿಐ ಅಧಿಕಾರಿಗಳು ಏಜೆಂಟ್ಗಳ ಜಾಲವನ್ನು ಪತ್ತೆಹಚ್ಚಿದ್ದಾರೆ. ಅಲ್ಲದೇ ಈ ಜಾಲ ಬಳಸ್ತಿದ್ದ ಯೂಟ್ಯೂಬ್ ಬಂದ್ ಮಾಡಲಾಗಿದೆ. ಅವರ ಸಂಪರ್ಕಗಳನ್ನು ಕಡಿತಗೊಳಿಸಿದ್ದು, ಶೋಧ ಕಾರ್ಯ ಶುರುವಾಗಿದೆ.
ಕಳೆದ ಒಂದೂವರೆ ವರ್ಷಗಳಿಂದ ಉಕ್ರೇನ್ ಹಾಗೂ ರಷ್ಯಾ ನಡುವಿನ ನಡೆಯುತ್ತಲೇ ಇದೆ. ಈಗಾಗಲೇ ಲಕ್ಷಾಂತರ ಸೈನಿಕರನ್ನು ಬಲಿ ಪಡೆದಿರುವ ಈ ಯುದ್ಧವು ತಣ್ಣಗಾಗುತ್ತಿಲ್ಲ. ಹೀಗೆ ಉಕ್ರೇನ್ ಮೇಲೆ ಸಮರ ಸಾರಿರುವ ರಷ್ಯಾ ಸೈನಿಕರ ಕೊರತೆಯನ್ನ ಅನುಭವಿಸುತ್ತಿದ್ದು, ಭಾರತದಿಂದ ರಷ್ಯಾಕ್ಕೆ ತೆರಳಿರುವ ಯುವಕರನ್ನು ಬಲವಂತವಾಗಿ ಯುದ್ಧಕ್ಕೆ ಬಳಿಸಿಕೊಳ್ಳುತ್ತಿದೆ. ಉದ್ಯೋಗ ಅರಸಿ ರಷ್ಯಾಕ್ಕೆ ಬರುವ ಯುವಕರನ್ನೇ ಟಾರ್ಗೆಟ್ ಮಾಡುವ ರಷ್ಯಾದ ವ್ಯಾಗ್ನರ್ ಪಡೆ, ಅಸಾಯಕ ಯುವಕರಿಗೆ ಉದ್ಯೋಗ ಆಮಿಷ ತೋರಿಸಿ ಯುದ್ಧಕ್ಕೆ ಬಲವಂತವಾಗಿ ಬಳಸಿಕೊಳ್ಳುತ್ತಿದೆ.