ಇದು ಅಸಲಿ ರಾಮರಾಜ್ಯ – ಜೈಲು ಖಾಲಿ ಖಾಲಿ.. ಖಾಕಿಗಿಲ್ಲ ಕೆಲಸ
6 ವರ್ಷದಿಂದ ಅಪರಾಧಗಳೇ ಇಲ್ಲ!

ಇದು ಅಸಲಿ ರಾಮರಾಜ್ಯ – ಜೈಲು ಖಾಲಿ ಖಾಲಿ.. ಖಾಕಿಗಿಲ್ಲ ಕೆಲಸ6 ವರ್ಷದಿಂದ ಅಪರಾಧಗಳೇ ಇಲ್ಲ!

ನಮ್ಮ ದೇಶದ ಸಾಕಷ್ಟು ಜನರ ಕನಸು.. ನಮ್ಮ ದೇಶವೂ ರಾಮ ರಾಜ್ಯ ಆಗಬೇಕು ಅನ್ನೋದು. ಮಹಾತ್ಮಾ ಗಾಂಧಿಜೀ ಅವರ ಕನಸಿನಿಂದಲೇ ಈ ಒಂದು ಕಲ್ಪನೆ ನಮ್ಮಲ್ಲಿ ಬಿತ್ತಲಾಗಿದೆ. ಆದರೆ ನಮ್ಮ ದೇಶದಲ್ಲಿ ಇದು ಆಗೋದು ಅಷ್ಟು ಸುಲಭವಲ್ಲ.. ದಿನ ನಿತ್ಯ ಕ್ರೈಂ ರೇಟ್‌ ಹೆಚ್ಚಾಗುತ್ತಲೇ ಹೋಗುತ್ತಿದೆ ಹೊರತು ಕಮ್ಮಿಯಾಗುತ್ತಿಲ್ಲ. ಅಧಿಕಾರಕ್ಕೆ  ಯಾವುದೇ  ಸರ್ಕಾರ ಬರಲಿ,  ಯಾವುದೇ ನಾಯಕರಿರಲಿ ರಾಮರಾಜ್ಯವನ್ನು ಧರೆಗಿಳಿಸುವಲ್ಲಿ ಸಕ್ಸಸ್ ಆಗುತ್ತಿಲ್ಲ. ಆದ್ರೆ ನಾವು ಹೇಳುತ್ತಾ ಇರೋ ದೇಶದ ಬಗ್ಗೆ ಶಾಕ್ ಆಗ್ತೀರಾ.. ರಾಮರಾಜ್ಯ ಅಂದ್ರೆ ಇದೆ ಎನ್ನುವ ಮಟ್ಟಿಗೆ ತನ್ನ ದೇಶದಲ್ಲಿ ಅಪರಾಧಗಳನ್ನು ಹತ್ತಿಕ್ಕಿದೆ.

ಇದನ್ನೂ ಓದಿ: IPL ಹರಾಜಿಗೆ ಶಾರ್ಟ್ ಲಿಸ್ಟ್ ರಿಲೀಸ್ – 2 ಸೆಟ್.. 12 ಪ್ಲೇಯರ್ಸ್.. ಬೆಲೆ ಎಷ್ಟು?

ನಮ್ಮ ದೇಶ ಬಿಡಿ ನಮ್ಮ ರಾಜ್ಯದ ಜೈಲುಗಳು ಯಾವಾಗಲು ಫುಲ್ ಆಗಿರುತ್ತೆ. ಅಷ್ಟರಮಟ್ಟಿಗೆ ಕ್ರೈಂ ರೇಟ್ ಹೆಚ್ಚಾಗಿರುತ್ತೆ. ಹೀಗಿರುವಾಗ ಜಗತ್ತಿನಲ್ಲಿ ಯಾವುದಾದರೂ ಒಂದು ದೇಶ ಖಾಲಿ ಜೈಲುಗಳನ್ನು ಹೊಂದಿರುವ ಕಲ್ಪನೆಯನ್ನು ಕೂಡ ಮಾಡಿಕೊಳ್ಳಲು ಸಾಧ್ಯವಿಲ್ಲ. ಆದ್ರೆ  ನೆದರಲ್ಯಾಂಡ್‌ ದೇಶದಲ್ಲಿ ಕಳೆದ ಆರು  ವರ್ಷಗಳಿಂದ ಎಲ್ಲಾ ಜೈಲುಗಳು ಖಾಲಿ ಇವೆ. ಒಬ್ಬನೇ ಒಬ್ಬ ಅಪರಾಧಿಯಾಗಲಿ, ಆರೋಪಿಯಾಗಲಿ ಈ ದೇಶದ ಜೈಲಿನೊಳಗೆ ಇಲ್ಲ. ಹೆಚ್ಚು ಕಡಿಮೆ ಪೊಲೀಸರಿಗೆ ಮಾಡಲು ಕೆಲಸವೇ ಇಲ್ಲದಂತಾಗಿದೆ. ನೆದರಲ್ಯಾಂಡ್‌ನಲ್ಲಿ 2018 ರಿಂದ ಒಬ್ಬನೇ ಒಬ್ಬ ಕೈದಿ ಸೆರೆವಾಸದಲ್ಲಿಲ್ಲ. ಕ್ರೈಂ ರೇಟ್ ಅಕ್ಷರಶಃ ಸೊನ್ನೆಗೆ ಬಂದಿಳಿದಿದ​​. ನೆದರ್​ಲ್ಯಾಂಡ್​ನಲ್ಲಿ ಕಂಬಿ ಹಿಂದೆ ತಳ್ಳಲು ಯಾವೊಬ್ಬ ಕೈದಿಯೂ ಸಿಗದೇ ಈಗಾಗಲೇ 6 ವರ್ಷಗಳು ಕಳೆದಿವೆ.

ಕೆಲಸ ಕಳೆದುಕೊಳ್ಳಲಿದ್ದಾರೆ 2000 ಜನ?

ಕ್ರೈಂ ನಡೆಯುತ್ತಿಲ್ಲ ಅಂತಾ ಜನ ಖುಷಿ ಪಡುತ್ತಿದ್ದರೆ, ಸಾವಿರಾರು ಜನರು ಕೆಲಸ ಕಳೆದುಕೊಳ್ಳುವ ಭಯ  ಕೂಡ ಸೃಷ್ಟಿಯಾಗಿದೆ. ದೇಶಾದ್ಯಂತ ಜೈಲುಗಳನ್ನು ಬಂದ್ ಮಾಡುವ ಸ್ಥಿತಿ ಸೃಷ್ಟಿ ಈಗ ಬಂದಿರುವುದರಿಂದ ಸುಮಾರು 2000 ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆ ಎಂದು ಹೇಳಲಾಗಿದೆ. ಇವರಲ್ಲಿ ಕೇವಲ 700 ಜನರು ಮಾತ್ರ ಸರ್ಕಾರದ ಇತರ ವಿಭಾಗದಲ್ಲಿ ಕೆಲಸ ಪಡೆದುಕೊಳ್ಳಲಿದ್ದಾರೆ. ಉಳಿದವರನ್ನು ಪರ್ಮನೆಂಟ್​ ಆಗಿ ಮನೆ ಸೇರುವುದು ನಿಶ್ಚಿತವಾಗಿದೆ. ಈ ಸುದ್ದಿ ಹೊರ ಬೀಳುತ್ತಿದ್ದಂತೆ ಭಾರತದಲ್ಲಿ ಹೀಗೆ ಆಗುವುದು ಯಾವಾಗ ಅನ್ನೋ ಪ್ರಶ್ನೆ ಎದ್ದಿದೆ.

Shwetha M

Leave a Reply

Your email address will not be published. Required fields are marked *