ಕರಾವಳಿಯಲ್ಲಿ ಕುಬೇರನ ಹೂದೋಟದ ಹೂವಿನ ಸುಗಂಧ – ಇದು ಒಂದು ದೇಶದ ರಾಷ್ಟ್ರೀಯ ಹೂವು ಹೌದು..!

ಕರಾವಳಿಯಲ್ಲಿ ಕುಬೇರನ ಹೂದೋಟದ ಹೂವಿನ ಸುಗಂಧ – ಇದು ಒಂದು ದೇಶದ ರಾಷ್ಟ್ರೀಯ ಹೂವು ಹೌದು..!

ಕರಾವಳಿಯ ಅಂಗಳದಲ್ಲಿ ಸುಗಂಧ ಸೂಸುವ ಒಂದು ಹೂವು ಎಲ್ಲರಿಗೂ ಇಷ್ಟ. ಸಂಜೆಯಾಗುವಾಗ ಮೆಲ್ಲನೆ ಅರಳುವ ಈ ಹೂವು ರಾತ್ರಿಯೆಲ್ಲಾ ಘಮ ಘಮ ಸುವಾಸನೆ ಬೀರುತ್ತದೆ. ಈ ಹೂವು ಕುಬೇರನ ಹೂದೋಟದ್ದು ಅನ್ನೋದು ಮತ್ತೊಂದು ವಿಶೇಷ.

ಇದನ್ನೂ ಓದಿ:ಮಾಟಮಂತ್ರಕ್ಕೆ ಈ ಹಳ್ಳಿಯೇ ರಾಜಧಾನಿ! – ಕಾಂತಾರದಂತೆ ಪ್ರಾಣಿಗಳ ಕಂಟ್ರೋಲ್!

ಸುರುಳಿ ಸುಗಂಧಿ ಅಥವಾ ವೈಟ್ ಬಟರ್‌ಫ್ಲೈ ಜಿಂಜರ್ ಲಿಲಿ, ಕನ್ನಡದಲ್ಲಿ ಇದರ ಹೆಸರು ಸುಗಂಧಿ. ನೇಪಾಳ ಹಿಮಾಲಯ ಮತ್ತು ದಕ್ಷಿಣ ಕನ್ನಡದಲ್ಲಿ ಈ ಸುಗಂಧಿಯ ಸುಗಂಧ ಪಸರಿಸಿದೆ. ಈ ಹೂವು ಕ್ಯೂಬ ದೇಶದ ರಾಷ್ಟ್ರೀಯ ಹೂವು ಕೂಡಾ ಹೌದು. ಬೆಳ್ಳಗೆ ಹಾಲಿನಂತೆ ಕಂಗೊಳಿಸುವ ಈ ಹೂವು ಸುಗಂಧಿ ಹೂವು. ಸುರುಳಿ ಹೂವು ಎಂದು ಕರೆಯಲ್ಪಡುವ ಈ ಹೂವು ಸಾಮಾನ್ಯವಾಗಿ ಎಲ್ಲಾ ಕಡೆ ಕಂಡು ಬರುವ ಹೂವಾಗಿದೆ. ಈ ಹೂವನ್ನು  ಭೀಮನು ದ್ರೌಪದಿಗೆ ತಂದು ಕೊಟ್ಟನೆಂದು ಪುರಾಣ ಕಥೆಗಳು ಹೇಳುತ್ತವೆ.  ಈ ಹೂವುಗಳನ್ನು ಸಾಮಾನ್ಯವಾಗಿ ವೈಟ್ ಬಟರ್‌ಫ್ಲೈ ಜಿಂಜರ್ ಲಿಲಿ ಅಥವಾ ಸೊಂಟಕ್ಕ ಎಂದು ಕರೆಯುತ್ತಾರೆ.

ಈ ಹೂವುಗಳು ತಮ್ಮ ಆಹ್ಲಾದಕರ ಸುಗಂಧ ಮತ್ತು ಆಕರ್ಷಕ ನೋಟಕ್ಕೆ ಹೆಸರುವಾಸಿಯಾಗಿವೆ. ಹಿಮಾಲಯದ ಹೂವು ದಕ್ಷಿಣ ಕನ್ನಡದಲ್ಲಿ ಇವು ಹಿಮಾಲಯದ ಪೂರ್ವ ಭಾಗ ಮತ್ತು ಪಶ್ಚಿಮ ಘಟ್ಟಗಳಲ್ಲಿ ಕಂಡುಬರುತ್ತವೆ. ಸಾಮಾನ್ಯವಾಗಿ ಕೆರೆಯ ಬದಿಗಳಲ್ಲಿ ನೀರಿನ ಹರಿವು ನಿರಂತರವಾಗಿ ಇರುವ ಜಾಗದ ಬದಿಗಳಲ್ಲಿ ಈ ಹೂವಿನ ಗಿಡ ಇರುತ್ತದೆ. ಅರಿಶಿಣದ ಕೊಂಬಿನಂತೆ ಈ ಗಿಡದ ಗೆಡ್ಡೆ ಇರುತ್ತದೆ. ಬೆಳಿಗ್ಗೆ ಕಂಡ ಮೊಗ್ಗುಗಳು ಸಾಮಾನ್ಯವಾಗಿ ಮಧ್ಯಾಹ್ನದ ಹೊತ್ತಿಗೆ ಮೆಲ್ಲನೆ ಅರಳಲು ಶುರುವಾಗಿ ಸಂಜೆ ಆಗುತ್ತಿದ್ದಂತೆ ಪೂರ್ತಿ ಅರಳಿ ತನ್ನ ಸುಗಂಧದಿಂದ ಎಲ್ಲರ ಗಮನ ಸೆಳೆಯುತ್ತದೆ. ಶುಭ್ರ ಬಿಳಿ ಬಣ್ಣದ ಮತ್ತು ಗಂಧ ಹಳದಿ ಬಣ್ಣದ ಎರಡು ಬಗೆಯ ಹೂಗಳಿವೆ. ಬಿಳಿ ಬಣ್ಣದ ಹೂವಿನ ಬುಡದಲ್ಲಿ ಹಳದಿ ಬಣ್ಣ ಇರುತ್ತದೆ.

ಸುರುಳಿ ಸುಗಂಧಿ ಕ್ಯೂಬ ದೇಶದ ರಾಷ್ಟ್ರೀಯ ಹೂವು. ಅಲ್ಲಿ ಈ ಹೂವನ್ನು ಮರಿಪೊಸ ಅಂದರೆ ಚಿಟ್ಟೆ ಎಂದೂ ಕರೆಯಲಾಗುತ್ತದೆ, ಇದಕ್ಕೆ ಕಾರಣ ಅದರ ಆಕಾರ. ಸುರುಳಿ ಸುಗಂಧಿ ವರ್ಷಪೂರ್ತಿ ಹೂ ಬಿಡುವ ಗಿಡ. ಇದು ಮೂಲತಃ ನೇಪಾಳ ಮತ್ತು ಭಾರತದ ಹಿಮಾಲಯ ಪರ್ವತ ಶ್ರೇಣಿಯಲ್ಲಿ ಕಂಡುಬರುತ್ತದೆ. ಕರಾವಳಿ ಭಾಗದಲ್ಲಿ ಈ ಹೂವು ಹೆಚ್ಚಾಗಿ ಬೆಳೆಯುತ್ತಾರೆ.

Sulekha