ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಕೊನೆಗೂ ಬಹಿರಂಗ –  ಚಂದ್ರಯಾನ-3 ರಾಕೆಟ್ ಅವಶೇಷ!

ಬೀಚ್‌ನಲ್ಲಿ ಪತ್ತೆಯಾದ ನಿಗೂಢ ವಸ್ತುವಿನ ರಹಸ್ಯ ಕೊನೆಗೂ ಬಹಿರಂಗ –  ಚಂದ್ರಯಾನ-3 ರಾಕೆಟ್ ಅವಶೇಷ!

ಕೆಲ ದಿನಗಳ ಹಿಂದೆ ಆಸ್ಟ್ರೇಲಿಯಾದ ಸಮುದ್ರ ತೀರವೊಂದರಲ್ಲಿ ಸಿಲಿಂಡರ್​ ಮಾದರಿಯ ನಿಗೂಢ ವಸ್ತುವೊಂದು ಪತ್ತೆಯಾಗಿತ್ತು. ಈ ನಿಗೂಢ ವಸ್ತು ಭಾರತದ ಚಂದ್ರಯಾನ – 3 ನ ಅವಶೇಷ ಆಗಿರಬಹುದು.. ಅಲ್ಲದೆ, ಈ ವಸ್ತುವು ಮಿಲಿಟರಿ ಮೂಲವನ್ನು ಹೊಂದಿರಬಹುದು ಅಥವಾ ಮಲೇಷ್ಯಾ ಏರ್‌ಲೈನ್ಸ್‌ ವಿಮಾನ MH370 ನ ಕಣ್ಮರೆಗೆ ಸಂಬಂಧಿಸಿರಬಹುದು ಎಂದು ನೆಟ್ಟಿಗರು ಭಾವಿಸಿದ್ದರು. ಇದೀಗ ಕೊನೆಗೂ ಈ ನಿಗೂಢ ವಸ್ತುವಿನ ಸೀಕ್ರೆಟ್ ಬಯಲಾಗಿದೆ.

ಇದನ್ನೂ ಓದಿ: ಆಸ್ಟ್ರೇಲಿಯಾ ಸಮುದ್ರ ತೀರದಲ್ಲಿ ಬಿದ್ದೇ ಬಿಡ್ತಾ ಚಂದ್ರಯಾನ-3 ತುಣುಕು..?

ಸಮುದ್ರ ತೀರದಲ್ಲಿ ಸಿಕ್ಕ ಈ ವಸ್ತು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ವಸ್ತು ಎಲ್ಲಿಂದ ಬಂತು.. ಈ ವಸ್ತುವಿನ ರಹಸ್ಯ ಏನು ಅಂತಾ ಎಲ್ಲರೂ ತಲೆಕೆಡಿಸಿಕೊಂಡಿದ್ದರು. ಇದೀಗ ಈ ವಸ್ತು ಭಾರತದ ಚಂದ್ರಯಾನ-3 ರಾಕೆಟ್​​ನಿಂದ ಪ್ರತ್ಯೇಕಗೊಂಡ ಅವಶೇಷದ ಒಂದು ಭಾಗ ಅಂತಾ ಆಸ್ಟ್ರೇಲಿಯಾದ ಬಾಹ್ಯಾಕಾಶ ಸಂಸ್ಥೆ ಎಎಸ್​ಎ  ಸ್ಪಷ್ಟಪಡಿಸಿದೆ.

ರಾಕೆಟ್​​ ಉಡಾವಣೆಯಾದ ಬಳಿಕ ಹಂತ ಹಂತವಾಗಿ ಅದರ ಕೆಲ ಭಾಗಗಳು ಪ್ರತ್ಯೇಕವಾಗುತ್ತಾ ಸಾಗುತ್ತೆ. 3ನೇ ಸ್ಟೇಜ್​ನಲ್ಲಿ ಪ್ರತ್ಯೇಕಗೊಂಡ ರಾಕೆಟ್​ನ ಭಾಗ ಆಸ್ಟ್ರೇಲಿಯಾ ಸಮುದ್ರ ಪ್ರದೇಶದ ಮೇಲೆ ಬಿದ್ದಿದೆ. ಈಗ ಇದು ದಡ ಸೇರಿಕೊಂಡಿದೆ ಅಂತಾ ಆಸ್ಟ್ರೇಲಿಯಾ ಬಾಹ್ಯಾಕಾಶ ವಿಜ್ಞಾನಿಗಳು ಹೇಳಿದ್ದಾರೆ. ಆದರೆ ಈ ಮಾಹಿತಿಯನ್ನ ನಮ್ಮ ಬಾಹ್ಯಾಕಾಶ ಸಂಸ್ಥೆ ಇಸ್ರೋ ಮಾತ್ರ ಇದುವರೆಗೂ ಖಚಿತಪಡಿಸಿಲ್ಲ.

suddiyaana