ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?

ಈ ಜಾಗ ಎಷ್ಟು ಸುಂದರವೋ ಅಷ್ಟೇ ಭಯಾನಕ…! “ರೂಪಕುಂಡ” ರಹಸ್ಯವೇನು ಗೊತ್ತಾ…?

ಹಿಮ ಪ್ರದೇಶಗಳಿಗೆ ಚಾರಣ ಹೋಗಬೇಕು ಅನ್ನೋದು ಬಹುತೇಕ ಪ್ರವಾಸಿಗರ ಕನಸು. ಒಂದು ಬಾರಿ ಹೋಗಿ ಬಂದವರಿಗಂತೂ ಮತ್ತೆ ಮತ್ತೆ ಅದರದ್ದೇ ಸೆಳೆತ. ಯಾಕೆಂದರೆ ಹಾಲಿನಂತೆ ಕಾಣೋ ಮಂಜು ಆವರಿಸಿರುವ ದೃಶ್ಯಗಳು ಎಂತವರನ್ನೂ ಮೋಡಿ ಮಾಡಿ ಬಿಡುತ್ತದೆ. ಆದರೆ ವರ್ಷದ ಮುಕ್ಕಾಲು ಸಮಯ ಸದಾ ಮಂಜಿನಿಂದ ಆವರಿಸಿರುವ ಈ ಸರೋವರ ಮಂಜು ಕರಗುತ್ತಿದ್ದಂತೆ ಅಷ್ಟೇ ಭಯಾನಕವಾಗಿರುತ್ತದೆ.

ಇದನ್ನೂ ಓದಿ: ದೇಗುಲದ ತುಂಬಾ ರಾಶಿ ರಾಶಿ ಚಿನ್ನ, ಬೆಳ್ಳಿ ಆಭರಣ – ಬೆತ್ತಲೆಯಾಗಿ ಬಂದು ಬೆತ್ತಲೆಯಾಗೇ ಹೋಗಬೇಕು ಭಕ್ತರು!

ಉತ್ತರಾಖಂಡದ ಹಿಮಾಲಯ ಶ್ರೇಣಿಯಲ್ಲಿ ಬರುವ ತ್ರಿಶೂಲ್ ಹಾಗೂ ನಂದಾಗುಂಟಿ ಬಳಿ ರೂಪಕುಂಡ ಅನ್ನೋ ಸರೋವರವಿದೆ. ಈ ಸರೋವರದ ಹೆಸರು ರೂಪಕುಂಡ ಆಗಿದ್ದರೂ ಆ ಪ್ರದೇಶ ಭಯಾನಕವಾಗಿದೆ. ಹಲವು ತಿಂಗಳುಗಳ ಕಾಲ ಮಂಜುಗಡ್ಡೆಯಿಂದ ಹೆಪ್ಪುಗಟ್ಟಿರುವ ಈ ರೂಪ ಕುಂಡ ಸರೋವರದಲ್ಲಿ ಮಂಜು ಕರಗಿದಾಗ ಕಾಣ ಸಿಗುವುದು ಮನುಷ್ಯರ ಅಸ್ಥಿಪಂಜರಗಳು ಮಾತ್ರ.

ವರ್ಷದ ಬಹುಕಾಲ ಹಿಮದಿಂದ ಕೂಡಿರುವ ಈ ಸರೋವರದಲ್ಲಿ ಹಿಮಕರಗಿದಾಗ ಅಸ್ಥಿಪಂಜರಗಳು ಮಾತ್ರ ಕಂಡುಬರುತ್ತವೆ. ಇಲ್ಲಿ ಸುಮಾರು 600 ರಿಂದ 800ಕ್ಕೂ ಹೆಚು ಅಸ್ಥಿಪಂಜರಗಳಿವೆ ಎಂದು ಅಂದಾಜಿಸಲಾಗಿದೆ. ಉತ್ತರಾಖಂಡ ಸರ್ಕಾರವು ಪ್ರವಾಸೋದ್ಯಮದ ಪ್ರಚಾರಗಳಲ್ಲಿ ಈ ಸ್ಥಳವನ್ನು ‘ರಹಸ್ಯ ಸ್ಥಳ’ ಎಂದು ತಿಳಿಸಿದೆ.

ರೂಪಕುಂಡ ಸರೋವರ ಸಮುದ್ರ ಮಟ್ಟಕ್ಕಿಂತ 5,029 ಮೀಟರ್ ಗಳಷ್ಟು ಎತ್ತರದಲ್ಲಿದೆ. ಈ ರೂಪಕುಂಡ ಸರೋವರದಲ್ಲಿ ಅಸ್ಥಿಪಂಜರಗಳು ಇರುವುದನ್ನು ಮೊಟ್ಟ ಮೊದಲ ಬಾರಿಗೆ 1942ರಲ್ಲಿ ಬ್ರಿಟೀಷ್ ಅರಣ್ಯಾಧಿಕಾರಿಗಳು ಪತ್ತೆ ಹಚ್ಚಿದ್ದರು.

ಇಲ್ಲಿಗೆ ಅಸ್ಥಿಪಂಜರಗಳು ಬಂದಿದ್ದು ಹೇಗೆ..? ಇಲ್ಲಿಗೆ ಜನರು ಹೇಗೆ ಬಂದರು..? ಹೇಗೆ ಸಾವನ್ನಪ್ಪಿದರು..? ಎಲ್ಲಿಂದ ಬಂದರು..? ಈ ಪ್ರದೇಶಗಳಲ್ಲಿ ಅಸ್ಥಿಪಂಜರ ಇರುವುದಕ್ಕೆ ಕಾರಣವೇನು ಎಂಬ ಬಗ್ಗೆ 50 ವರ್ಷಕ್ಕೂ ಹೆಚ್ಚು ಕಾಲ ಮಾನವಶಾಸ್ತ್ರಜ್ಞರು ಮತ್ತು ವಿಜ್ಞಾನಿಗಳು ಅಧ್ಯಯನ ನಡೆಸಿದರೂ ಇಂದಿಗೂ ಸೂಕ್ತ ಕಾರಣ ಸಿಕ್ಕಿಲ್ಲ. ಅಷ್ಟೇ ಅಲ್ಲದೆ ಎಲ್ಲಾ ಊಹೆಗಳು ನಿಜವಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಪ್ರದೇಶದಲ್ಲಿ ಅಸ್ಥಿಪಂಜರಗಳು ಇರುವುದಕ್ಕೆ ಹಲವಾರು ಕಥೆಗಳು ಪ್ರಚಲಿತದಲ್ಲಿವೆ. 870 ವರ್ಷಗಳ ಹಿಂದೆ ರಾಜನೊಬ್ಬ ತನ್ನ ಪತ್ನಿ ಹಾಗೂ ತನ್ನ ಸೇವಕರೊಂದಿಗೆ ಮೋಜು ಮಸ್ತಿ ಮಾಡುತ್ತಿದ್ದ ವೇಳೆ ಹಿಮಪಾತದಲ್ಲಿ ಕೊಚ್ಚಿಹೋಗಿದ್ದರು. ಈಗ ಕಾಣುವ ಅಸ್ಥಿಪಂಜರಗಳು ಅವರದ್ದೇ ಎಂದು ಕೆಲವರು ಹೇಳುತ್ತಾರೆ. ಮತ್ತೊಂದು ಕಥೆಯ ಪ್ರಕಾರ ಭಾರತೀಯ ಸೈನಿಕರು ಟಿಬೆಟ್ ಮೇಲೆ ಆಕ್ರಮಣ ಮಾಡಲು ಯತ್ನಿಸಿದಾಗ, ಟಿಬೆಟ್ ಸೈನಿಕರು ಭಾರತೀಯ ಯೋಧರನ್ನು ಹಿಮ್ಮೆಟ್ಟಿಸಿದರು. ಈ ಸಂದರ್ಭದಲ್ಲಿ 70ರಷ್ಟು ಭಾರತೀಯ ಸೈನಿಕರಿಗೆ ಸರಿಯಾದ ಮಾರ್ಗ ತಿಳಿಯದೆ ಇಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದೂ ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಸಾಂಕ್ರಾಮಿಕ ರೋಗದಿಂದ ಮೃತಪಟ್ಟವರನ್ನು ಇಲ್ಲಿ ಸಮಾಧಿ ಮಾಡಿರಬಹುದು ಎಂಬ ಊಹಾಪೋಹಗಳಿವೆ.

ಇನ್ನು ಅಧ್ಯಯನದ ಪ್ರಕಾರ ಮೃತಪಟ್ಟವರು ಎತ್ತರದ ವ್ಯಕ್ತಿಗಳಾಗಿದ್ದು, 35 ರಿಂದ 40 ವರ್ಷದೊಳಗಿನವರಾಗಿದ್ದಾರೆ. ಇಲ್ಲಿ ಮಕ್ಕಳ ಅಸ್ಥಿಪಂಜರಗಳು ಪತ್ತೆಯಾಗಿಲ್ಲ. ಮಹಿಳೆಯರ ಅಸ್ಥಿಪಂಜರಗಳು ಸಿಕ್ಕಿದ್ದು ಎಲ್ಲರೂ ಆರೋಗ್ಯವಾಗಿದ್ದರು ಎಂದು ತಿಳಿದು ಬಂದಿದೆ. ಇನ್ನು 9ನೇ ಶತಮಾನದಲ್ಲಿ ನಡೆದ ದುರಂತದಲ್ಲಿ ಒಂದೇ ಗುಂಪಿನ ಜನಾಂಗದವರು ಮೃತಪಟ್ಟಿರಬಹುದು ಎಂದೂ ಊಹಿಸಲಾಗಿದೆ.

suddiyaana