‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ತೆರೆ ಮೇಲೆ ಬರಲು ರೆಡಿ – ಚಿತ್ರದ ಅವಧಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದು ಯಾಕೆ?

‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ತೆರೆ ಮೇಲೆ ಬರಲು ರೆಡಿ – ಚಿತ್ರದ ಅವಧಿ ಕೇಳಿ ಅಭಿಮಾನಿಗಳು ಶಾಕ್ ಆಗಿದ್ದು ಯಾಕೆ?

‘ಪೊನ್ನಿಯಿನ್ ಸೆಲ್ವನ್ ’.  ಈ ಸಿನಿಮಾ ಪ್ಯಾನ್ ಇಂಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿತ್ತು. ಐಶ್ವರ್ಯಾ ರೈ ,ತ್ರಿಷಾ ಕೃಷ್ಣನ್, ಕಾರ್ತಿ, ವಿಕ್ರಂ ಮೊದಲಾದವರು ನಟಿಸಿದ್ದ ‘ಪೊನ್ನಿಯಿನ್ ಸೆಲ್ವನ್​’ ಸಿನಿಮಾ ಸೂಪರ್ ಹಿಟ್ ಆಯಿತು. ಬಾಕ್ಸ್‌ಆಫೀಸ್‌ನಲ್ಲೂ ಧೂಳೆಬ್ಬಿಸಿತ್ತು. ಇದೀಗ ‘ಪೊನ್ನಿಯಿನ್ ಸೆಲ್ವನ್-2 ’ ಸಿನಿಮಾ ಕೂಡಾ ಸಾಕಷ್ಟು ಸದ್ದು ಮಾಡ್ತಿದೆ. ಈಗಾಗಲೇ ಚಿತ್ರತಂಡ ಪ್ರಮೋಷನ್ ಶುರು ಮಾಡಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು, ತಮಿಳು ಸೇರಿ ವಿವಿಧ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಇದನ್ನೂ ಓದಿ:  ಪೊನ್ನಿಯನ್ ಸೆಲ್ವನ್ ಸೀಕ್ವೆಲ್ 2 ಸಿನಿಮಾ ರಿಲೀಸ್‌ಗೆ ಡೇಟ್ ಫಿಕ್ಸ್

‘ಪೊನ್ನಿಯಿನ್ ಸೆಲ್ವನ್ 2’ ಸಿನಿಮಾ ತೆರೆ ಮೇಲೆ ಬರಲು ರೆಡಿ ಆಗಿದೆ. ಏಪ್ರಿಲ್ 28ರಂದು ಸಿನಿಮಾ ರಿಲೀಸ್ ಆಗಲಿದ್ದು, ಮಾರ್ಚ್ 29ರಂದು ಟ್ರೇಲರ್ ರಿಲೀಸ್ ಆಗಲಿದೆ. ಆದರೆ, ಈಗ ಅಭಿಮಾನಿಗಳ ಚಿಂತೆಗೂ ಈ ಸಿನಿಮಾ ಕಾರಣವಾಗಿದೆ. ಸಿನಿಮಾ ಪಾರ್ಟ್ ಟು ನೋಡಲು ಹಾತೊರೆಯುತ್ತಿದ್ದ ಅಭಿಮಾನಿಗಳಿಗೆ ಚಿತ್ರದ ಅವಧಿಯೇ ದೊಡ್ಡ ಚಿಂತೆಯಾಗಿದೆ. ಚಿತ್ರದ ಅವಧಿ ಸದ್ಯ 4 ಗಂಟೆ ಇದೆಯಂತೆ. ಕೆಲವೇ ಕೆಲವು ಕಡೆಗಳಲ್ಲಿ ಮಾತ್ರ ಕತ್ತರಿ ಹಾಕಲು ಅವಕಾಶ ನಿರ್ದೇಶಕರಿಗೆ ಇದೆ. ಹೀಗಾಗಿ, ಸಿನಿಮಾದ ಅವಧಿ 3 ಗಂಟೆ 53 ನಿಮಿಷ ಆಗಿರಲಿದೆ. ಇದು ಪ್ರೇಕ್ಷಕರ ಚಿಂತೆಗೆ ಕಾರಣ ಆಗಿದೆ. ಸಿನಿಮಾದ ಅವಧಿ ಎರಡು ಗಂಟೆಯಿಂದ ಎರಡೂವರೆ ಗಂಟೆವರೆಗೆ ಇದ್ದರೆ ಪ್ರೇಕ್ಷಕರು ಆರಾಮಾಗಿ ನೋಡಬಹುದು. ಕೆಲವೊಮ್ಮೆ ಮೂರು ಗಂಟೆಯಾದರೂ ಓಕೆ. ಆದರೆ, ‘ಪೊನ್ನಿಯಿನ್ ಸೆಲ್ವನ್ ಪಾರ್ಟ್ 2’ ಸಿನಿಮಾಗಾಗಿ ಪ್ರೇಕ್ಷಕ ನಾಲ್ಕ ಗಂಟೆ ಚಿತ್ರಮಂದಿರದಲ್ಲಿ ಕೂರಬೇಕು. ಇದು ನಿಜವಾಗಲೂ ಚಿಂತೆಯ ವಿಚಾರವೇ ಅಂತಿದ್ದಾರೆ ಪ್ರೇಕ್ಷಕರು. ಮೊದಲ ಭಾಗವನ್ನು ಇಷ್ಟಪಟ್ಟ ಪ್ರೇಕ್ಷಕರು ಎರಡನೇ ಭಾಗವನ್ನೂ ಇಷ್ಟಪಡಬಹುದು ಅನ್ನೋದು ಚಿತ್ರತಂಡದ ಲೆಕ್ಕಾಚಾರ. ಇದನ್ನು ಪ್ರೇಕ್ಷಕರು ಹೇಗೆ ಸ್ವೀಕರಿಸುತ್ತಾರೆ ಅನ್ನೋದೇ ನಿಜವಾಜ ಚಾಲೆಂಜ್..

suddiyaana