ಮಗ ಓದಲಿ ಅಂತಾ ಲಕ್ಷ ಲಕ್ಷ ಹಣ ಕೊಟ್ಟು ಫಾರಿನ್‌ಗೆ ಕಳುಹಿಸಿದಳು ತಾಯಿ.. ಕೈ ತುಂಬಾ ಹಣ ಸಿಗುತ್ತಿದ್ದಂತೆ ಮಗರಾಯ ಮಾಡಿದ್ದೇನು ಗೊತ್ತಾ?
ಮಕ್ಕಳ ಭವಿಷ್ಯ ಚೆನ್ನಾಗಿರಬೇಕು ಅಂತಾ ಪೋಷಕರು ಸದಾ ಬಯಸುತ್ತಿರುತ್ತಾರೆ. ಅವರ ಭವಿಷ್ಯ ರೂಪಿಸುವುದಕ್ಕಾಗಿ ಹಗಲಿರುಳು ಕಷ್ಟಪಟ್ಟು ದುಡಿಯುತ್ತಿರುತ್ತಾರೆ. ತಾವು ಸಂಪಾದನೆ ಮಾಡಿದ ಹಣವನ್ನೆಲ್ಲಾ ಅವರ ವಿದ್ಯಾಭ್ಯಾಸಕ್ಕೆ ಖರ್ಚು ಮಾಡುತ್ತಾರೆ. ಆದರೆ ಕೆಲವೊಂದು ಮಕ್ಕಳು ತಂದೆ – ತಾಯಿಯ ಕಷ್ಟವನ್ನು ಅರಿಯುವುದೇ ಇಲ್ಲ. ಬೇಕಾಬಿಟ್ಟಿ ಖರ್ಚು ಮಾಡುತ್ತಾರೆ. ಓದಲು ಕೊಟ್ಟ ಹಣದಲ್ಲಿ ಮಜಾ ಮಾಡುತ್ತಾರೆ. ಫ್ರೆಂಡ್ಸ್ ಪಾರ್ಟಿ, ಪ್ರೀತಿ ಅಂತಾ ಓದಿನ ಕಡೆ ಗಮನಕೊಡದೇ ಊರೂರು ಸುತ್ತುತ್ತಿರುತ್ತಾರೆ. ಇಲ್ಲೂ ಒಬ್ಬ ಓದಲು ವಿದೇಶಕ್ಕೆ ತೆರಳಿ ಪ್ರೀತಿಯಲ್ಲಿ ಬಿದ್ದಿದ್ದಾಳೆ. ಇದೀಗ ಆತನ ತಾಯಿ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಏನಿದು ಘಟನೆ?
ಕಾಲೇಜು ಮೆಟ್ಟಿಲೇರಿದ ಮೇಲೆ ಯುವಕ ಯುವತಿಯರು ಪ್ರೀತಿಯಲ್ಲಿ ಬೀಳುವುದು ಸಾಮಾನ್ಯ. ಈ ವೇಳೆ ಕೆಲ ಯುವಕ, ಯುವತಿಯರಿಗೆ ಓದಿನ ಕಡೆ ಇರುವ ಆಸಕ್ತಿ ಕಡಿಮೆಯಾಗುತ್ತದೆ. ಪ್ರೀತಿಯ ಅಲೆಯಲ್ಲಿ ತೇಲುತ್ತಿರುತ್ತಾರೆ. ತಂದೆ, ತಾಯಿ ವಿದ್ಯಾಭ್ಯಾಸಕ್ಕೆ ನೀಡಿದ ಹಣವನ್ನು ಪ್ರೇಯಸಿಗಾಗಿ ಖರ್ಚಿ ಮಾಡುತ್ತಾರೆ. ಚೀನಾದಲ್ಲೂ ಕೂಡ ಇಂತಹದ್ದೇ ಘಟನೆ ನಡೆದಿದೆ. ಕ್ಸಿಯಾವೊಯ್ ಎಂಬಾತ ವಿದ್ಯಾಭ್ಯಾಸಕ್ಕೆಂದು ವಿದೇಶಕ್ಕೆ ತೆರಳಿದ್ದು, ಅಲ್ಲಿ ಪ್ರೀತಿಯ ಬಲೆಗೆ ಬಿದ್ದಿದ್ದಾನೆ. ತಾಯಿ ವಿದ್ಯಾಭ್ಯಾಸಕ್ಕೆಂದು ನೀಡಿದ ಹಣವನ್ನು ಪ್ರೇಯಸಿಗಾಗಿ ಖರ್ಚು ಮಾಡಿದ್ದಾನೆ. ಇದೀಗ ತಾಯಿ ತಮ್ಮ ಮಗನ ವಿರುದ್ದ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಚೀನಾದ ಸಿಚುವಾನ್ ಪ್ರಾಂತ್ಯದ ನಿವಾಸಿ ಲುಯಿ ಎಂಬಾಕೆ ಮಗನ ವಿದ್ಯಾಭ್ಯಾಸಕ್ಕೆ ದೊಡ್ಡ ಮೊತ್ತದ ಹಣವನ್ನು ನೀಡಿದ್ದಾಳೆ. ವಿದೇಶದಲ್ಲಿ ಓದುತ್ತಿರುವ ಮಗನ ವಿಶ್ವವಿದ್ಯಾನಿಲಯದ ಟ್ಯೂಷನ್ ಶುಲ್ಕವಾಗಿ ಲುಯಿ ತನ್ನ ಮಗನಿಗೆ ಹಣ ನೀಡಿದ್ದಳು. ಆದ್ರೆ ಮಗ ಈ ಹಣವನ್ನು ಕಾಲೇಜಿಗೆ ನೀಡುವ ಬದಲು ತನ್ನ ಗೆಳತಿಗಾಗಿ ಹೊಸ ಕಾರನ್ನು ಖರೀದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಈಗ ಆಕೆ ನ್ಯಾಯಾಲಯದ ಮೊರೆ ಹೋಗಿದ್ದಾಳೆ.
ಇದನ್ನೂ ಓದಿ: ಸೊಸೆ ಟೀ ಕೊಟ್ಟಿಲ್ಲ ಅಂತಾ ಸಿಟ್ಟು ಮಾಡಿಕೊಂಡ ಮಾವ – ಪೆಟ್ರೋಲ್ ಸುರಿದುಕೊಂಡು ಸತ್ತೇ ಹೋದ!
ಮಗನಿಗೆ 5 ಲಕ್ಷ ಯುವಾನ್ ನೀಡಿದ್ದ ಲುಯಿ!
ಲುಯಿಗೆ ಚಿಕ್ಕ ವಯಸ್ಸಿನಲ್ಲೇ ವಿಚ್ಛೇದನವಾಗಿತ್ತು. ತನ್ನ ಮಗನನ್ನು ಲುಯಿ ಯಾವುದೇ ಕೊರತೆ ಇಲ್ಲದೆ ಬೆಳೆಸಿದ್ದಳು. ಆತನಿಗಾಗಿ ಜೀವ ಸೆವೆಸಿದ್ದಳು. ಎರಡನೇ ಮದುವೆ ಆಗುವ ಮೊದಲು ಮಗನಿಗೆ ತನ್ನ ಹಣವನ್ನೆಲ್ಲ ನೀಡಿದ್ದಳು. 5,00,000 ಯುವಾನ್ ಅಂದ್ರೆ ಸುಮಾರು 57 ಲಕ್ಷ ರೂಪಾಯಿಯನ್ನು ಮಗನ ಖಾತೆಗೆ ವರ್ಗಾಯಿಸಿದ್ದಳು. ಕೆಲ ದಿನಗಳಲ್ಲೇ ಮಗ ಬ್ಯಾಂಕ್ ಪಾಸ್‌ಬುಕ್ ಕಳೆದುಹೋಗಿದೆ ಎಂದು ದೂರು ನೀಡಿದ್ದ. ಪಾಸ್ವರ್ಡ್ ಕೂಡ ಬದಲಿಸಿದ್ದ. ಖಾತೆಯಲ್ಲಿದ್ದ ಎಲ್ಲ ಹಣವನ್ನು ತೆಗೆದಿದ್ದಾನೆ ಎಂಬುದು ಲುಯಿಗೆ ಗೊತ್ತಾಗಿದೆ.
ಹಣವನ್ನು ಪ್ರೇಯಸಿಯ ಖಾತೆಗೆ ವರ್ಗಾಯಿಸಿದ್ದ ಮಗರಾಯ!
ಮಗ ಪಾಸ್‌ಬುಕ್ ಕಳೆದು ಹೋಗಿದೆ ಎಂದು ಹೇಳುತ್ತಿದ್ದಂತೆ ಲುಯಿಗೆ ಆತನ ಮೇಲೆ ಅನುಮಾನ ಮೂಡಿದೆ. ಈ ವೇಳೆ ಆಕೆ ಪತ್ತೆದಾರಿ ಕೆಲಸ ಮಾಡಿದ್ದಾಳೆ. ಈ ವೇಳೆ ಆಕೆಗೆ ಮಗನ ಪ್ರೇಮ ಪುರಾಣ ಗೊತ್ತಾಗಿದೆ. ಅಷ್ಟೇ ಅಲ್ಲದೇ ಆತ ತನ್ನ ಹಣವನ್ನು ಆತನ ಗರ್ಲ್ ಫ್ರೆಂಡ್ ಖಾತೆಗೆ ಎಲ್ಲ ಹಣವನ್ನು ವರ್ಗಾಯಿಸಿದ್ದಾನೆ ಎಂಬ ವಿಚಾರ ಗೊತ್ತಾಗಿದೆ. ಈ ವಿಚಾರ ತಿಳಿದು ಲುಯಿ ದಂಗಾಗಿದ್ದಾಳೆ.
ಪ್ರೇಯಸಿಗೆ ದುಬಾರಿ ಕಾರು ಗಿಫ್ಟ್ ನೀಡಿದ ಮಹಾಶಯ!
ಮಗನ ಮೇಲೆ ಕಣ್ಣಿಟ್ಟಿದ್ದ ಲೂಯಿಗೆ ಶಾಕ್ ಮೇಲೆ ಶಾಕ್ ಎದುರಾಗಿದೆ. ಪ್ರೀತಿಯ ಮಗರಾಯ ಫೀಸ್ ಕಟ್ಟಲು ಹಣ ಕೊಡು ಅಂತಾ ಹೇಳಿ, ಇತ್ತ ಪ್ರೇಯಸಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟಿದ್ದಾನೆ. ಆತ ತನ್ನ ಪ್ರೇಯಸಿಗೆ ಬರೋಬ್ಬರಿ 2,00,000 ಯುವಾನ್ ಅಂದ್ರೆ ಸುಮಾರು 22 ಲಕ್ಷ ರೂಪಾಯಿ ಮೌಲ್ಯದ ಕಾರನ್ನು ನೀಡಿದ್ದಾನೆ. ಅಷೇ ಅಲ್ಲದೇ ಇಬ್ಬರೂ ಈ ಕಾರಿನಲ್ಲಿ ಲಾಂಗ್ ಡ್ರೈವ್ ಕೂಡ ಹೋಗಿದ್ದಾರೆ.
ಕೊಟ್ಟ ಹಣ ವಾಪಸ್ ಕೇಳಿದ ಲೂಯಿ!
ಮುದ್ದಿನ ಮಗರಾಯನ ಪ್ರೇಮ ಪುರಾಣ ತಿಳಿಯುತ್ತಿದ್ದಂತೆ ಲುಯಿ ಎಚ್ಚೆತ್ತುಕೊಂಡಿದ್ದಾಳೆ. ಮಗನಿಗೆ ಉಳಿದ 3,00,000 ಯುವಾನ್ ಸುಮಾರು 34 ಲಕ್ಷ ರೂಪಾಯಿ ಹಿಂದಿರುಗಿಸುವಂತೆ ಕೇಳಿದ್ದಾಳೆ. ಆದ್ರೆ ಮಗ ನಿರಾಕರಿಸಿದ್ದಾನೆ. ಒಮ್ಮೆ ಹಣವನ್ನು ಆತನ ಖಾತೆಗೆ ವರ್ಗಾಯಿಸಿದ್ಮೇಲೆ ಮುಗಿತು. ಅದನ್ನು ಹೇಗೆ ಬೇಕಾದ್ರೂ ನಾನು ಖಾಲಿ ಮಾಡ್ಬಹುದು ಎಂದು ವಾದಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಲುಯಿ ಮಗನ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾಳೆ.
ಲೂಯಿ ಪರ ತೀರ್ಪು ನೀಡಿದ ಕೋರ್ಟ್!
ಲೂಯಿ ದೂರು ದಾಖಲಿಸುತ್ತಿದ್ದಂತೆ, ಕೋರ್ಟ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದೆ. ಪ್ರಕರಣದ ವಿಚಾರಣೆ ನಡೆಸಿದ ಸಿಚುವಾನ್ ಮಿಯಾನ್ಯಾಂಗ್ ಫುಚೆಂಗ್ ಪೀಪಲ್ಸ್ ಕೋರ್ಟ್, ಮಗನಿಗೆ ದಂಡ ವಿಧಿಸಿದೆ. ಇಬ್ಬರ ಮಧ್ಯೆ ಒಪ್ಪಂದಕ್ಕೆ ಸಹಿ ಮಾಡಿಸಿಕೊಂಡಿದೆ. ಕೋರ್ಟ್ ತೀರ್ಪಿನ ನಂತ್ರ ಮಗ 34 ಲಕ್ಷ ರೂಪಾಯಿಯನ್ನು ಹಿಂದಿರುಗಿಸಿದ್ದಾನೆ. ಮಗನ ಶಿಕ್ಷಣ ಹಾಗೂ ಖರ್ಚಿಗೆ ಪ್ರತಿ ತಿಂಗಳು ನಾನೇ ಹಣ ನೀಡ್ತೇನೆಂದು ಲುಯಿ ಹೇಳಿದ್ದಾಳೆ.