RCBಯಿಂದ ಕೊಹ್ಲಿಗೆ 209 ಕೋಟಿ ರೂ.! – ಸ್ಯಾಲರಿಯಲ್ಲೂ ರೋಹಿತ್ No.1
ವೈಭವ್ ಸೂರ್ಯವಂಶಿ ಕೋಟಿ ಕುಳ!

ಐಪಿಎಲ್‌ನಲ್ಲಿ ಕೋಟಿ ಕೋಟಿ ರುಪಾಯಿಗಳಿಗೆ ಆಟಗಾರರ ಬಿಡ್ಡಿಂಗ್ ನಡೆಯೋದನ್ನು ನಾವು ನೋಡ್ತೀವಿ.. ಆದ್ರೆ ಇದುವರೆಗೆ ಐಪಿಎಲ್ ಮೂಲಕ ಅತಿಹೆಚ್ಚು ಹಣ ಪಡೆದ ಆಟಗಾರ ಯಾರು ಗೊತ್ತಾ.. ನೂರು ಕೋಟಿಗೂ ಹೆಚ್ಚು ಹಣ ಗಳಿಸಿ, ಐಪಿಎಲ್ ಮೂಲಕವೇ ಶ್ರೀಮಂತ ಕ್ರಿಕೆಟಿಗರಾದ ಆಟಗಾರರಲ್ಲಿ ಭಾರತೀಯರದ್ದೇ ಮೇಲುಗೈ.. ಅದರಲ್ಲೂ ಟೀಂ ಇಂಡಿಯಾದ ಖ್ಯಾತ ರೋ-ಕೋ ಜೋಡಿ ಮೊದಲೆರಡು ಸ್ಥಾನಗಳಲ್ಲಿ ನಿಂತಿದ್ದಾರೆ.. ಹಾಗಿದ್ದರೆ ಅವರ ನಂತರದ ಸ್ಥಾನಗಳಲ್ಲಿ ಯಾರಿದ್ದಾರೆ ಅನ್ನೋ ಬಗ್ಗೆ ಡೀಟೇಲ್ಸ್ ಇಲ್ಲಿದೆ.
ಇದನ್ನೂ ಓದಿ: IND Vs PAK ದಾಖಲೆ ಮುರಿದ RCB – IPL ಫೈನಲ್ ಮ್ಯಾಚ್ ನೋಡಿದವರೆಷ್ಟು?
ಐಪಿಎಲ್ ಟೂರ್ನಿ ಅದೆಷ್ಟೋ ಆಟಗಾರರಿಗೆ ಒಂದೊಳ್ಳೆ ಭವಿಷ್ಯವನ್ನ ಕೊಟ್ಟಿದೆ. ಈ ಟೂರ್ನಿಯಿಂದಲೇ ಅನೇಕ ಆಟಗಾರರು ಬೆಳಕಿಗೆ ಬಂದಿದ್ದಾರೆ.. ಟೀಮ್ ಫ್ರಾಂಚೈಸಿ ಕೂಡ ಆಟಗಾರರಿಗೆ ಕೋಟಿ ಕೋಟಿ ದುಡ್ಡು ಸುರಿಯುತ್ತೆ.. ಈ ಬಾರಿಯ ಐಪಿಎಲ್ ನಲ್ಲೂ ಅನೇಕ ಯುವ ಆಟಗಾರರಿಗೆ ಚಾನ್ಸ್ ಕೊಡಲಾಗಿತ್ತು.. ಸಣ್ಣ ವಯಸ್ಸಿನಲ್ಲೇ ಒಂದು ಟೂರ್ನಿಯಿಂದ ಕೋಟಿಗಳ ಅಧಿಪತಿ ಆಗಿದ್ದಾರೆ. ಆದ್ರೆ ಐಪಿಎಲ್ನಲ್ಲಿ ನಮ್ಮ ಸೀನಿಯರ್ಸ್ ಪ್ಲೇಯರ್ಸ್ ಮಾತ್ರ ಹೆಚ್ಚು ಸಂಭಾವನೆ ಪಡಿತಾ ಇದ್ದಾರೆ.. ಹಾಗಾದ್ರೆ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಸಂಭಾವನೆ ಸ್ಟಾರ್ ಆಟಗಾರರು ಯಾರ್ಯಾರು ಅಂತಾ ಹೇಳ್ತಾ ಹೋಗ್ತೀನಿ..
ಹೆಚ್ಚು ಸಂಬಳ ಪಡೆಯೋದ್ರಲ್ಲಿ ಹಿಟ್ ಮ್ಯಾನ್ ನಂ.1!
ರೋಹಿತ್ ಶರ್ಮಾ.. ಐಪಿಎಲ್ ನಲ್ಲಿ ಹಲವು ದಾಖಲೆ ಬರೆದ ಆಟಗಾರ. 2008 ರಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದ ಪರ ಆಡೋ ಮೂಲಕ ಐಪಿಎಲ್ ಗೆ ಪಾದಾರ್ಪಣೆ ಮಾಡಿದ್ರು. 2009ರಲ್ಲಿ ಡೆಕ್ಕನ್ ಚಾರ್ಜರ್ಸ್ ಐಪಿಎಲ್ ಕಪ್ ಗೆಲ್ಲೋದ್ರಲ್ಲಿ ಶರ್ಮಾ ಮಾತ್ರ ಮಹತ್ವದ್ದಾಗಿತ್ತು.. ಡೆಕ್ಕನ್ ಚಾರ್ಜರ್ಸ್ ತಂಡ ಆ ವರ್ಷದ ಪ್ಲೇ ಆಫ್‌ಗೆ ತಲುಪಲು ನಿರ್ಣಾಯಕವಾಗಿದ್ದ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಕಡೆಯ ಓವರ್‌ನಲ್ಲಿ 22 ರನ್ ಬಾರಿಸುವ ಮೂಲಕ ಐಪಿಎಲ್ ನಲ್ಲಿ ಗಮನ ಸೆಳೆದಿದ್ದರು.. ಅದೇ ಕಾರಣದಿಂದ ಮುಂದಿನ ಸೀಸನ್‌ನಲ್ಲಿ ಈ ಮುಂಬೈಕರ್‌ನನ್ನು ಮುಂಬೈ ಇಂಡಿಯನ್ಸ್ ಟೀಂ ಖರೀದಿಸಿತ್ತು.. ಮುಂದಿನದ್ದು ಇತಿಹಾಸ.. ಎಂಐ ಐದು ಬಾರಿ ಐಪಿಎಲ್‌ನ ಚಾಂಪಿಯನ್ ಆಗಿದ್ದು ಇದೇ ರೋಹಿತ್ ಕ್ಯಾಪ್ಟನ್ಸಿಯಲ್ಲಿ.. ಹೀಗೆ ಕಳೆದ 18 ವರ್ಷಗಳಿಂದ ಉತ್ತಮ ಫಾರ್ಮ್ ನಲ್ಲಿ ಇರೋ ಹಿಟ್ ಮ್ಯಾನ್ ತಂಡ ಗೆಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಐಪಿಎಲ್-2025ರಲ್ಲೂ ಮುಂಬೈ ಇಂಡಿಯನ್ಸ್ ಟೀಂ, ರೋಹಿತ್ ಶರ್ಮಾರನ್ನು 16.30 ಕೋಟಿ ರೂಗೆ ಉಳಿಸಿಕೊಂಡಿತ್ತು. ಐಪಿಎಲ್ ನಲ್ಲಿ ಹಿಟ್ ಮ್ಯಾನ್ ಇದುವರೆಗೆ ಒಟ್ಟು 210.9 ಕೋಟಿ ರೂಪಾಯಿ ಸಂಭಾವನೆ ಪಡೆದಿದ್ದಾರೆ.
IPLನಿಂದ ಕೊಹ್ಲಿ ಬಾಚಿದ್ದು 209.2 ಕೋಟಿ!
ಆರ್‌ಸಿಬಿಯ ಕಿಂಗ್ ವಿರಾಟ್ ಕೊಹ್ಲಿ 2008 ರಿಂದಲೂ ಬೆಂಗಳೂರು ತಂಡದ ಪರ ಆಡ್ತಿದ್ದಾರೆ. ರನ್ ಮಷೀನ್ ಕೊಹ್ಲಿಯನ್ನ ಆರ್‌ಸಿಬಿ 18 ವರ್ಷಗಳಿಂದಲೂ ಟೀಮ್ ನಲ್ಲಿ ಉಳಿಸಿಕೊಂಡಿದೆ. ವರ್ಷದಿಂದ ವರ್ಷಕ್ಕೆ ವಿರಾಟ್ ಸ್ಯಾಲರಿ ಹೆಚ್ಚಾಗ್ತಾನೆ ಇದೆ. ಈ ಬಾರಿ ಆರ್‌ಸಿಬಿ ಕೊಹ್ಲಿಯನ್ನು 21 ಕೋಟಿಗೆ ಉಳಿಸಿಕೊಂಡಿತ್ತು. ತನ್ನ ಮೇಲೆ ವಿಶ್ವಾಸ ಇಟ್ಟಿದ್ದ ಆರ್‌ಸಿಬಿಗೆ ಕಡೆಗೂ ಐಪಿಎಲ್ ಕಪ್ ಗೆಲ್ಲಿಸಿ ಕೊಡುವಲ್ಲಿ ವಿರಾಟ್ ಯಶಸ್ವಿಯಾಗಿದ್ದಾರೆ.. ಈ ವರ್ಷ ಕೂಡ ಆರ್‌ಸಿಬಿ ಪರ ಅತಿಹೆಚ್ಚು ರನ್ ಗಳಿಸಿದ್ದು ಕೂಡ ಕಿಂಗ್ ಕೊಹ್ಲಿ.. ತನ್ನ ಅದ್ಭುತ ಬ್ಯಾಟಿಂಗ್ ಕಾರಣದಿಂದಲೇ ಕಿಂಗ್ ಕೊಹ್ಲಿ ಐಪಿಎಲ್ ಟೂರ್ನಮೆಂಟ್‌ನಲ್ಲಿ ಇಲ್ಲಿವರೆಗೂ 209.2 ಕೋಟಿ ರೂಪಾಯಿ ಸಂಬಳ ಪಡೆದಿದ್ದಾರೆ. ಮುಂದಿನ ಸೀಸನ್‌ನಲ್ಲಿ ಐಪಿಎಲ್ ಗಳಿಕೆ ಮೂಲಕ ಕಿಂಗ್ ಕೊಹ್ಲಿ, ಹಿಟ್ ಮ್ಯಾನ್ ರೋಹಿತ್ ಶರ್ಮಾರನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಏರೋದ್ರಲ್ಲಿ ಅನುಮಾನವೇ ಇಲ್ಲ..
ಕೂಲ್ ಕ್ಯಾಪ್ಟನ್ ಸಂಬಳ 192.84 ಕೋಟಿ ರೂಪಾಯಿ!
ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಐಪಿಎಲ್ ನಲ್ಲಿ 2008 ರಿಂದಲೂ ಸಿಎಸ್ ಕೆ ತಂಡದ ಭಾಗವಾಗಿದ್ದಾರೆ. ಧೋನಿ ಸಾರಥ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 5 ಐಪಿಎಲ್ ಪ್ರಶಸ್ತಿಗಳನ್ನ ಗೆದ್ದುಕೊಂಡಿದೆ. ಐಪಿಎಲ್‌ನಿಂದ ಸಿಎಸ್‌ಕೆ ಎರಡು ವರ್ಷ ಬ್ಯಾನ್ ಆದಾಗ, ಧೋನಿ ಪುಣೆ ತಂಡದ ಪರವಾಗಿ ಆಡಿದ್ದರು.. ಐಪಿಎಲ್‌ನಲ್ಲಿ ಹೆಚ್ಚು ಹಣ ಗಳಿಸಿದವರಲ್ಲಿ ಧೋನಿ ಕೂಡ ಸ್ಥಾನ ಪಡ್ಕೊಂಡಿದ್ದಾರೆ. 2025ರಲ್ಲಿ ಸಿಎಸ್ ಕೆ ಅವರನ್ನು 4 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಇಲ್ಲಿಯವರೆಗೆ ಧೋನಿ ಐಪಿಎಲ್ ಮೂಲಕ 192.84 ಕೋಟಿ ರೂಪಾಯಿ ಗಳಿಸಿದ್ದಾರೆ.
IPL ನಲ್ಲೇ ಕೋಟಿ ಕೋಟಿ ಸಂಪಾದಿಸಿದ ಜಡೇಜಾ
ರವೀಂದ್ರ ಜಡೇಜಾ.. 2008 ರಿಂದ 2025 ರ ನಡುವೆ ನಾಲ್ಕು ತಂಡಗಳಿಗಾಗಿ ಆಡಿದ್ದಾರೆ. 2008 ರಿಂದ 2009ರ ವರೆಗೆ ರಾಜಸ್ಥಾನ ರಾಯಲ್ಸ್ ತಂಡ ಪರ ಆಡಿದ್ರು. 2011ರಲ್ಲಿ ಕೊಚ್ಚಿ ಟಸ್ಕರ್ಸ್ ಕೇರಳ ತಂಡ ಭಾಗವಾಗಿದ್ರು. 2016 ರಿಂದ 2017ರ ವರೆಗೆ ಜಡೇಜಾ ಗುಜರಾತ್ ಲಯನ್ಸ್ ತಂಡದಲ್ಲಿ ಆಡಿದ್ರು. ಬಳಿಕ ಅಂದ್ರೆ 2012 ರಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪರ ಆಟ ಆಡ್ತಿದ್ದಾರೆ. 2025ರಲ್ಲಿ ಸಿಎಸ್ ಕೆ ಜಡೇಜಾರನ್ನ 18 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಐಪಿಎಲ್ ನಲ್ಲಿ ಇಲ್ಲಿವರೆಗೆ ಜಡೇಜಾ 143.01 ಕೋಟಿ ರೂಪಾಯಿ ವೇತನವಾಗಿ ಗಳಿಸಿದ್ದಾರೆ.
IPLನಲ್ಲಿ ವೆಸ್ಟ್ ಇಂಡೀಸ್ ಆಟಗಾರನ ಕಮಾಲ್!
ವೆಸ್ಟ್ ಇಂಡೀಸ್ ಆಟಗಾರ ಸುನೀಲ್ ನರೈನ್ 2012 ರಲ್ಲಿ ಐಪಿಎಲ್ ಗೆ ಪಾದಾರ್ಪಣೆ ಮಾಡ್ತಾರೆ. 13 ವರ್ಷಗಳಿಂದ ಸುನೀಲ್ ಕೆಕೆಆರ್ ತಂಡದ ಪ್ರಮುಖ ಆಟಗಾರ ಎನಿಸಿಕೊಂಡಿದ್ದಾರೆ. ನರೈನ್ ಅವರನ್ನ ಕೆಕೆಆರ್ 2012 ರಲ್ಲಿ 3. 51 ಕೋಟಿ ರೂಪಾಯಿಗೆ ಕೆಕೆ ಆರ್ ಖರೀದಿಸಿತ್ತು.. ಈ ವರ್ಷ ನರೈನ್ ಅವರನ್ನ 12 ಕೋಟಿ ರೂಪಾಯಿಗೆ ಉಳಿಸಿಕೊಂಡಿತ್ತು. ಇದುವರೆಗೆ ನರೈನ್ ಐಪಿಎಲ್ ನಲ್ಲಿ 125.25 ಕೋಟಿ ರೂಪಾಯಿ ವೇತನ ಪಡ್ಕೊಂಡಿದ್ದಾರೆ.
ಹೀಗೆ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ ಮೂಲಕ ಕ್ರಿಕೆಟ್ ಆಟಗಾರರು ಕೋಟಿ ಕೋಟಿಗಳ ವಾರಸುದಾರರಾಗ್ತಿದ್ದಾರೆ.. ಇದೇ ಕಾರಣಕ್ಕೆ ಯುವ ಕ್ರಿಕೆಟಿಗರನ್ನು ಐಪಿಎಲ್ ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ.. ಈ ವರ್ಷದ ಐಪಿಎಲ್‌ನಲ್ಲಿ ಕೇವಲ 14 ಹರೆಯದ ವೈಭವ್ ಸೂರ್ಯವಂಶಿಯನ್ನು 1.1 ಕೋಟಿ ರುಪಾಯಿಗೆ ಖರೀದಿಸಿತ್ತು.. ಈ ವರ್ಷ ಅದ್ಭುತ ಆಟವಾಡಿದ್ದ ಸೂರ್ಯವಂಶಿ ಮುಂದಿನ ಸಾಲಿನಿಂದಲೇ ಇದರ ಹತ್ತು ಪಟ್ಟು ಹಣ ಗಳಿಸುವುದು ಖಚಿತ.. ಒಟ್ಟಿನಲ್ಲಿ ಐಪಿಎಲ್ ಕ್ರಿಕೆಟ್ ಆಟಗಾರರ ಪಾಲಿಗೆ ಚಿನ್ನದ ಮೊಟ್ಟೆಯಿಡುವ ಕೋಳಿಯಾಗಿ ಪರಿವರ್ತನೆ ಆಗಿರೋದಂತೂ ಸ್ಪಷ್ಟ..