ಪ್ರತಿ ಬಾಲ್ಗೂ ಹ್ಯಾರಿ ಬ್ರೂಕ್ ಬ್ರೇಕ್ – ಸಿಡಿದೆದ್ದ ರಿಷಭ್ ಪಂತ್, ರವೀಂದ್ರ ಜಡೇಜಾ ವಾರ್ನಿಂಗ್

ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ರೋಚಕ ಘಟ್ಟ ತಲುಪಿದೆ. ಟೆಸ್ಟ್ ಪಂದ್ಯದ ಎರಡನೇ ದಿನದಾಟ ಇನ್ನೇನು ಮುಗಿಯುತ್ತದೆ ಅನ್ನೋವಷ್ಟರಲ್ಲಿ, ಆಂಗ್ಲ ಆಟಗಾರನ ವರ್ತನೆಗೆ ಟೀಮ್ ಇಂಡಿಯಾ ಆಟಗಾರರು ಸಿಡಿಮಿಡಿಗೊಂಡಿದ್ದಾರೆ. ಅಷ್ಟೇ ಅಲ್ಲದೇ, ಇಂಗ್ಲೆಂಡ್ ಬ್ಯಾಟರ್ನ ಕಳ್ಳಾಟವನ್ನ ಅಂಪೈರ್ಗೆ ದೂರು ನೀಡುವ ಮೂಲಕ ತಕ್ಕ ಶಾಸ್ತಿ ಮಾಡಿದ್ದಾರೆ.
ಇದನ್ನೂ ಓದಿ:2ನೇ ಟೆಸ್ಟ್ ನಲ್ಲಿ ಭಾರತ ಬೆಂಕಿ ಬಿರುಗಾಳಿ ಪ್ರದರ್ಶನ – ಇಂಗ್ಲೆಂಡ್ಗೆ ಬಿಗ್ ಟಾರ್ಗೆಟ್ ಕೊಟ್ಟ ಗಿಲ್ ಪಡೆ
ಟೀಮ್ ಇಂಡಿಯಾ 587 ರನ್ಗಳ ಬೃಹತ್ ಸ್ಕೋರ್ ಗುರಿ ಬೆನ್ನತ್ತಲು ಹೊರಟ ಇಂಗ್ಲೆಂಡ್ ಆರಂಭಿಕ ಆಘಾತ ಎದುರಿಸಿದೆ. ಆಕಾಶ್ದೀಪ್ ಸಿಂಗ್ ಎರಡು ವಿಕೆಟ್ ಪಡೆದರೆ, ಸಿರಾಜ್ ಒಂದು ವಿಕೆಟ್ ಪಡೆಯೋ ಮೂಲಕ ಇಂಗ್ಲೆಂಡ್ ಗೆ ಶಾಕ್ ನೀಡಿದರು. ದಿನದ ಅಂತ್ಯದ ವೇಳೆಗೆ, ಜೋ ರೂಟ್ ಮತ್ತು ಹ್ಯಾರಿ ಬ್ರೂಕ್ 77 ರನ್ಗಳನ್ನ ಪೇರಿಸಿದ್ದಾರೆ. ಆದರೆ, ಇಂಗ್ಲೆಂಡ್ ಬ್ಯಾಟರ್ಗಳು ಭಾರತೀಯ ಬೌಲರ್ಗಳನ್ನು ಎದುರಿಸಲು ಪರದಾಡುತ್ತಿದ್ದರು. ಮುಖ್ಯವಾಗಿ ಬ್ರೂಕ್ ಭಾರತೀಯ ಬೌಲರ್ಗಳಿಂದ ತಪ್ಪಿಸುತ್ತಿರುವುದು ಕಂಡುಬಂದಿತು. ಇದರಿಂದಾಗಿ ವಿಕೆಟ್ ಕೀಪರ್ ರಿಷಭ್ ಪಂತ್ ಕೂಡ ಕೋಪಗೊಂಡ ಘಟನೆ ನಡೆಯಿತು. ಎರಡನೇ ದಿನದಾಟ ಮುಗಿಯುವ ಸ್ವಲ್ಪ ಮೊದಲು, ರವೀಂದ್ರ ಜಡೇಜಾ ಇಂಗ್ಲೆಂಡ್ ಇನ್ನಿಂಗ್ಸ್ನಲ್ಲಿ 19 ನೇ ಓವರ್ ಬೌಲ್ ಮಾಡಲು ಬಂದರು. ಬ್ರೂಕ್ ಜಡೇಜಾ ಬೌಲಿಂಗ್ನಲ್ಲಿ ಬ್ಯಾಟಿಂಗ್ ಮಾಡಲು ಕಷ್ಟಪಡುತ್ತಿದ್ದರು. ಅಂತಹ ಪರಿಸ್ಥಿತಿಯಲ್ಲಿ, ಹ್ಯಾರಿ ಬ್ರೂಕ್ ಪ್ರತಿ ಚೆಂಡಿನ ನಂತರ ಬೇಕಂತಲೇ ಸಮಯ ತೆಗೆದುಕೊಳ್ಳುತ್ತಿದ್ದರು. ಅವರು ಉದ್ದೇಶಪೂರ್ವಕವಾಗಿ ತಮ್ಮ ಕೈಗವಸುಗಳನ್ನು ತೆಗೆದು ಹಾಕುವುದು, ಕ್ರೀಸ್ನಿಂದ ದೂರ ಹೋಗಿ ನಿಂತುಕೊಳ್ಳುವುದು ಮಾಡುತ್ತಿದ್ದರು. ಬೌಲರ್ ಜೊತೆ ಮೈಂಡ್ ಗೇಮ್ ಆಡುತ್ತಿದ್ದಾರೆ ಎಂದು ರಿಷಭ್ ಪಂತ್ ಅರ್ಥಮಾಡಿಕೊಂಡರು. ಹ್ಯಾರಿ ಬ್ರೂಕ್ ಅವರ ಈ ಕ್ರಮಕ್ಕೆ ಪ್ರತಿಕ್ರಿಯಿಸಿದ ರಿಷಭ್ ಪಂತ್ ಹಾಗೂ ಜಡೇಜಾ, “ನೀವು ಸಮಯ ವ್ಯರ್ಥ ಮಾಡುತ್ತಿದ್ದೀರಿ” ಎಂದು ಹೇಳಿದರು. ಜಡೇಜಾ ಕೂಡ ಅಂಪೈರ್ ಕಡೆಗೆ ನೋಡಿ ಬ್ರೂಕ್ ಹೀಗೆ ಏಕೆ ಮಾಡುತ್ತಿದ್ದಾರೆ ಎಂದು ಕೇಳಿದರು. ಜಡೇಜಾ ಮತ್ತೊಂದು ಓವರ್ ಹಾಕವುದನ್ನು ತಡೆಯುವುದು ಬ್ರೂಕ್ ಉದ್ದೇಶವಾಗಿತ್ತು. ರೂಟ್ ಮತ್ತು ಬ್ರೂಕ್ ಹೇಗಾದರೂ ಅಜೇಯರಾಗಿ ಪೆವಿಲಿಯನ್ಗೆ ಹಿಂತಿರುಗಲು ಪ್ರಯತ್ನಿಸುತ್ತಿದ್ದರು. ರಿಷಭ್ ಪಂತ್ ಅಂಪೈರ್ ಅವರನ್ನು ಕರೆದು, ಅವರು ಸಮಯ ವ್ಯರ್ಥ ಮಾಡುತ್ತಿದ್ದಾರೆ, ಬೌಲರ್ ಸಿದ್ಧರಾಗಿದ್ದಾರೆ. ಏನಾಗುತ್ತಿದೆ? ಅವರು ಪ್ರತಿ ಚೆಂಡಿಗೂ ಸಿದ್ಧರಾಗಲು ಸಮಯ ತೆಗೆದುಕೊಳ್ಳುತ್ತಿದ್ದಾರೆ ಎಂದರು. ಜಡೇಜಾ ಕೂಡ ಅಂಪೈರ್ ಕಡೆಗೆ ನೋಡಿ ಬ್ರೂಕ್ ಹೀಗೆ ಏಕೆ ಮಾಡುತ್ತಿದ್ದಾನೆ ಎಂದು ಕೇಳಿದರು. ಬಳಿಕ ಇದರ ಬಗ್ಗೆ ಅಂಪೈರ್ ಬ್ರೂಕ್ಗೆ ಎಚ್ಚರಿಕೆ ನೀಡಿದರು.

ನೋಡಿರಿ

